
ಗಂಗಾವತಿ, 25 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಗಂಗಾವತಿ ಕ್ಷೇತ್ರದ ಇರಕಲ್ ಗಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 90 ಲಕ್ಷ ವೆಚ್ಚದ ಕೊಠಡಿಗಳನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಬುಧವಾರದಂದು ಉದ್ಘಾಟಿಸಿದರು.
ನಂತರ ಸಿ.ಸಿ.ಡಿ ಉಪಾಧ್ಯಕ್ಷ ಸಂಗಮೇಶ್ ಬಡಾವಡಗಿ ಮಾತನಾಡಿ ಶಾಸಕರು ನಮ್ಮ ಮನವಿಗೆ ಸ್ಪಂದಸಿ ಶಾಲಾ ಕೊಠಡಿ ನಿರ್ಮಿಸಿ ಕೊಟ್ಟಿದ್ದಾರೆ ಬಾಲಕರ ವಸತಿ ನಿಲಯ ಮತ್ತು ಬಾಲಕಿಯರ ವಸತಿ ನಿಲಯಕ್ಕೆ ಮನವಿ ಸಲ್ಲಿಸಿದ್ದೇವೆ. ಅವರು ಆ ಮನವಿಗೆ ಸ್ಪಂದನೆ ಮಾಡಿ ಭರವಸೆಯನ್ನು ನೀಡಿದ್ದಾರೆ ಎಂದರು.
ನಂತರ ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಉದ್ಘಾಟನೆ ನೆರವೇರಿಸಿ ಮಾತನಾಡಿ ಮುಂಬರುವ ದಿನಗಳಲ್ಲಿ ಈ ಕಾಲೇಜಿಗೆ ಮತ್ತು ಗ್ರಾಮಕ್ಕೆ ಇನ್ನೂ ಹೆಚ್ಚಿನ ಅನುದಾನವನ್ನು ನೀಡಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಇರಕಲ್ ಗಡ ಗ್ರಾಮಕ್ಕೆ ಬಾಲಕಿಯರ ವಸತಿ ನಿಲಯಕ್ಕೆ ಮತ್ತು ಹೋಬಳಿಗೆ ಬೇಕಾಗಿರುವ ಶಾಲಾ ಸಂಬಂಧಿ ಕೊಠಡಿಗಳಿಗೆ 25 ಕೋಟಿಗಳನ್ನು ವಯಕ್ತಿಕವಾಗಿ ಅನುದಾನ ಕೊಡುತ್ತೇನೆ ಎಂದು ಹೇಳಿಕೆ ಕೊಟ್ಟರು.
ಮುಂಬರುವ ದಿನಗಳಲ್ಲಿ ಅಂದರೆ 2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಬಿಜೆಪಿ ಕಾರ್ಯಕರ್ತರಿಗೆ ಹೇಳಿದರು. ಕಾರ್ಯಕರ್ತರು ಯಾವುದೇ ಗೊಂದಲಗಳಿಗೆ ಕಿವಿ ಕೊಡಬಾರದು ನಾನು ಈ ಕ್ಷೇತ್ರವನ್ನು ತೊರೆಯುವುದಿಲ್ಲ ಎಂದು ಹೇಳಿದರು. ಊಹಾಪೋಹಗಳಿಗೆ ಯಾರೂ ಕಾರ್ಯಕರ್ತರು ಕಿವಿಗೊಡಬಾರದು ಎಂದು ಹೇಳಿದರು.
ಕಾರ್ಯಕರ್ತರ ಸದಾ ಬೆನ್ನೆಲುಬಾಗಿ ನಿಂತು ಈ ಭಾಗದ ಜನರ ಕಷ್ಟಗಳಿಗೆ ಸ್ಪಂದನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಂತರ ಗ್ರಾಮದ ಹಿರಿಯರು, ಪ್ರಮುಖರು ಸೇರಿ ಶಾಸಕರನ್ನು ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಗಂಗಾಧರ ಸ್ವಾಮಿ, ವೀರಬಸಪ್ಪ ಶೆಟ್ಟರ್, ಮಹೇಶ್ ದೇಸಾಯಿ, ರವಿ ದೇಸಾಯಿ, ರಾಜೇಶ್ ಕಂದಕೂರ, ರಾಮಣ್ಣ ಗೋಸಲ ದೊಡ್ಡಿ, ರಮೇಶ್ ಬುಡ್ಸೆಟ್ನಾಳ, ಬಸವರಾಜ ಪಿನ್ನಿ, ಮಲ್ಲಪ್ಪ ಕಾನೂರ, ವೆಂಕನಗೌಡ ಮೇಟಿ ಇನ್ನೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್