ಮಾ.೨೯ರಿಂದ ಬೆಳಗಾವಿ - ನವಿ-ಮುಂಬೈ ನಡುವೆ ಇಂಡಿಗೋ ವಿಮಾನ ಹಾರಾಟ ಪ್ರಾರಂಭ
ಬೆಳಗಾವಿ, 25 ಫೆಬ್ರವರಿ (ಹಿ.ಸ.) : ಆ್ಯಂಕರ್ : ಬೆಳಗಾವಿ ಜನತೆಯ ಬಹು ದಿನಗಳ ಬೇಡಿಕೆಯಂತೆ ಇದೇ 29 ನೇ ಮಾರ್ಚ 2026 ರಿಂದ ಬೆಳಗಾವಿ - ನವಿ-ಮುಂಬೈ ನಡುವೆ ಇಂಡಿಗೋ ವಿಮಾನ ಹಾರಾಟವು ಪ್ರಾರಂಭವಾಗಲಿದೆ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಮ
Flight


ಬೆಳಗಾವಿ, 25 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಬೆಳಗಾವಿ ಜನತೆಯ ಬಹು ದಿನಗಳ ಬೇಡಿಕೆಯಂತೆ ಇದೇ 29 ನೇ ಮಾರ್ಚ 2026 ರಿಂದ ಬೆಳಗಾವಿ - ನವಿ-ಮುಂಬೈ ನಡುವೆ ಇಂಡಿಗೋ ವಿಮಾನ ಹಾರಾಟವು ಪ್ರಾರಂಭವಾಗಲಿದೆ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ವಿಮಾನವು ನವಿ ಮುಂಬೈಯಿಂದ ಬೆಳಿಗ್ಗೆ 10:20 ಕ್ಕೆ ಹೊರಟು ಬೆಳಗಾವಿಯನ್ನು 11:35 ಕ್ಕೆ ತಲುಪಿ, ತದನಂತರ ಬೆಳಗಾವಿಯಿಂದ ಸಂಜೆ 17:35 ಕ್ಕೆ ಹೊರಟು ನವಿ-ಮಂಬೈಯನ್ನು 18:45 ಕ್ಕೆ ತಲುಪುವುದು ಎಂದು ತಿಳಿಸಿದ್ದಾರೆ.

ವಿಮಾನಯಾನ ಸೇವೆ ಪ್ರಾರಂಭಕ್ಕೆ ಸಹಕರಿಸಿದ ಕೇಂದ್ರ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಇವರಿಗೆ ಮತ್ತು ಇಂಡಿಗೋ ಸಂಸ್ಥೆಯ ಅಧಿಕಾರಿಗಳಿಗೆ ಶೆಟ್ಟರ್ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande