ಬೃಹತ್ ಹೆರಾಯಿನ್ ಜಾಲ ಭೇದಿಸಿದ ಪಂಜಾಬ್ ಪೋಲಿಸ್ ; 6 ಮಂದಿ ಬಂಧನ
ಫರೀದ್ಕೋಟ್, 22 ಫೆಬ್ರವರಿ (ಹಿ.ಸ.) : ಆ್ಯಂಕರ್ : ಎರಡು ತಿಂಗಳ ಕಾಲ ಜೈಲು ಆಧಾರಿತ ಇಂಟರ್ಸೆಪ್ಷನ್ ಮತ್ತು ತಾಂತ್ರಿಕ ನಿಗಾವಹಿಸುವ ಕಾರ್ಯಾಚರಣೆ ನಡೆಸಿದ ಪಂಜಾಬಿನ ಫರೀದ್ಕೋಟ್ ಪೋಲಿಸರು ಸುಸಂಘಟಿತ ಹೆರಾಯಿನ್ ಕಳ್ಳಸಾಗಣೆ ಜಾಲವನ್ನು ಭೇದಿಸಿ ಆರು ಮಂದಿಯನ್ನು ಬಂಧಿಸಿದೆ. ಬಂಧಿತರಲ್ಲಿ ಒಬ್ಬ ಸೇನಾ ಸ
heroin


ಫರೀದ್ಕೋಟ್, 22 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಎರಡು ತಿಂಗಳ ಕಾಲ ಜೈಲು ಆಧಾರಿತ ಇಂಟರ್ಸೆಪ್ಷನ್ ಮತ್ತು ತಾಂತ್ರಿಕ ನಿಗಾವಹಿಸುವ ಕಾರ್ಯಾಚರಣೆ ನಡೆಸಿದ ಪಂಜಾಬಿನ ಫರೀದ್ಕೋಟ್ ಪೋಲಿಸರು ಸುಸಂಘಟಿತ ಹೆರಾಯಿನ್ ಕಳ್ಳಸಾಗಣೆ ಜಾಲವನ್ನು ಭೇದಿಸಿ ಆರು ಮಂದಿಯನ್ನು ಬಂಧಿಸಿದೆ.

ಬಂಧಿತರಲ್ಲಿ ಒಬ್ಬ ಸೇನಾ ಸಿಬ್ಬಂದಿ ಹಾಗೂ ಒಬ್ಬ ಸೇವೆಯಿಂದ ವಜಾಗೊಂಡ ಪೊಲೀಸ್ ಸಿಬ್ಬಂದಿ ಸೇರಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ಪಂಜಾಬ್ ಡಿಜಿಪಿ, ಕಾರ್ಯಾಚರಣೆಯಲ್ಲಿ 4.8 ಕಿಲೋಗ್ರಾಂ ಹೆರಾಯಿನ್, ಒಂದು ಶಸ್ತ್ರಾಸ್ತ್ರ, ಹಾಗೂ ‘ಥಾರ್’ ಮತ್ತು ‘ಎಕ್ಸ್ಯುವಿ’ ಸೇರಿದಂತೆ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳು ಹಲವು ಎನ್ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಈ ಕುರಿತು ಪ್ರಕರಣ ದಾಖಲಿಸಿರುವ ಪೋಲಿಸರು, ಆರೋಪಿಗಳ ಹಿಂದಿನ ಹಾಗೂ ಮುಂದಿನ ಸಂಪರ್ಕಗಳ ಜಾಲವನ್ನು ಪತ್ತೆಹಚ್ಚಲು ಸಮಗ್ರ ತನಿಖೆ ಆರಂಭಿಸಿದೆ. ಜೈಲಿನಲ್ಲಿದ್ದ ಆರೋಪಿಗಳ ಸಂವಹನವನ್ನು ನಿಗಾ ವಹಿಸಿ, ಹೊರಗಿನ ಜಾಲದ ಜೊತೆಗಿನ ಸಂಪರ್ಕವನ್ನು ಸಾಬೀತುಪಡಿಸಿದ ಬಳಿಕ ಸಮನ್ವಯಿತ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಮಾದಕವಸ್ತುಗಳ ಅಕ್ರಮ ಸಾಗಣೆ ವಿರುದ್ಧ ರಾಜ್ಯಾದ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಪಂಜಾಬ್ ರಾಜ್ಯದಲ್ಲಿ ಶಾಂತಿ ಮತ್ತು ಭದ್ರತೆ ಕಾಪಾಡಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಡಿಜಿಪಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande