ಗಂಗಾಬಾಯಿ ಪಾಟೀಲ ಪಂಚಭೂತಗಳಲ್ಲಿ ಲೀನ
ವಿಜಯಪುರ, 22 ಫೆಬ್ರವರಿ (ಹಿ.ಸ.) : ಆ್ಯಂಕರ್ : ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವರ ತಾಯಿ ಶ್ರಿಮತಿ ಗಂಗಾಬಾಯಿ ಸಿದ್ಧರಾಮಪ್ಪ ಪಾಟೀಲ (84) ಇವರು ಭಾನುವಾರ ನಸುಕಿನಲ್ಲಿ ನಿಧರಾಗಿದ್ದು, ಸಂಜೆ ಅಂತ್ಯಕ್ರಿಯೆ ನಡೆಯಿತು. ಭಾನುವಾರ ಸೂರ್ಯೋದಯಕ್ಕೆ ಮುನ್ನವೇ ಗಂಗಾಬಾಯಿ ಅವರ ನಿ
ಸಚಿವ


ವಿಜಯಪುರ, 22 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವರ ತಾಯಿ ಶ್ರಿಮತಿ ಗಂಗಾಬಾಯಿ ಸಿದ್ಧರಾಮಪ್ಪ ಪಾಟೀಲ (84) ಇವರು ಭಾನುವಾರ ನಸುಕಿನಲ್ಲಿ ನಿಧರಾಗಿದ್ದು, ಸಂಜೆ ಅಂತ್ಯಕ್ರಿಯೆ ನಡೆಯಿತು.

ಭಾನುವಾರ ಸೂರ್ಯೋದಯಕ್ಕೆ ಮುನ್ನವೇ ಗಂಗಾಬಾಯಿ ಅವರ ನಿಧನರಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸಚಿವ ಶಿವಾನಂದ ಪಾಟೀಲ ಅವರ ಜಮಖಂಡಿ ರಸ್ತೆಯಲ್ಲಿರುವ ತೋಟದ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ 4-30 ಕ್ಕೆ ಅಂತಿಮ ವಿಧಿವಿಧಾನಗಳ ಬಳಿಕ ಮೃತರ ಕೊನೆಯ ಪುತ್ರರಾದ ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಅವರ ತೋಟದ ಮನೆ ಆವರಣದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.

ನಿಧನದ ಸುದ್ದಿ ತಿಳಿದು ಮಠಾಧೀಶರು, ಮಾಜಿ-ಹಾಲಿ ಸಂಸದರು, ಶಾಸಕರು, ರಾಜಕೀಯ ನಾಯಕರು, ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು, ಹಿರಿಯರಾದ ಗಂಗಾಬಾಯಿ ಅವರ ಅಂತಿಮ ದರ್ಶನ ಪಡೆದರು.

ಆಲಗೂರು ಪಂಚಮಸಾಲಿ ಪೀಠದ ಜಗದ್ಗುರುಗಳಾದ ಡಾ.ಮಹಾದೇವ ಶ್ರೀಗಳು, ಮುಗಳಖೋಡದ ಶ್ರೀಗಳು, ಮನಗೂಳಿ ಹಿರೇಮಠದ ಶ್ರೀಗಳು, ಚಿಮ್ಮಲಗಿ, ಮಸೂತಿ ಸೇರಿದಂತೆ ವಿವಿಧ ಮಠಗಳ ಪೀಠಾಧಿಪತಿಗಳು, ರೈತ ಪರ ಹೋರಾಟಗಾರ ಶಶಿಕಾಂತ ಗುರೂಜಿ ಹಾಗೂ ಇತರರು ಮೃತರ ಅಂತಿಮ ದರ್ಶನ ಪಡೆದು, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ವಿಧಾನಸಭೆ ಉಪಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಸಂಸದ ರಮೇಶ ಜಿಗಜಿಣಗಿ, ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಶಾಸಕ (ಅಪ್ಪಾಜಿ) ಸಿ.ಎಸ್. ನಾಡಗೌಡ, ಶಾಸಕರಾದ ಜೆ.ಟಿ.ಪಾಟೀಲ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಸುನಿಲಗೌಡ ಪಾಟೀಲ, ಮಾಜಿ ಸಚಿವರಾದ ಎಸ್. ಆರ್.ಪಾಟೀಲ, ಎಸ್.ಕೆ. ಬೆಳ್ಳುಬ್ಬಿ, ಮುರುಗೇಶ ನಿರಾಣಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜೆಡಿಎಸ್ ಮುಖಂಡರಾದ ಅಪ್ಪುಗೌಡ ಪಾಟೀಲ (ಮನಗೂಳಿ), ರೈತ ಮುಖಂಡರಾದ ಚುನ್ನಪ್ಪ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಕಾಂಗ್ರೆಸ್ ಹಾವೇರಿ ಜಿಲ್ಲಾಧ್ಯಕ್ಷರಾದ ಸಂಜೀವ ನೀರಲಗಿ, ಗಡ್ಡದದೇವರಮಠ, ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಬಿಜೆಪಿ ರಾಜ್ಯ ಮುಖಂಡ ಉಮೇಶ ಕಾರಜೋಳ ಸೇರಿದಂತೆ ಸಾವಿರಾರು ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande