
ಗಂಗಾವತಿ, 16 ಫೆಬ್ರವರಿ (ಹಿ.ಸ.)
ಆ್ಯಂಕರ್: ಸಣಾಪುರ ಗ್ರಾಮದ ಹೊರವಲಯದಲ್ಲಿ ವಿದೇಶಿ ಮಹಿಳೆ ಮತ್ತು ಹೋಟೆಲ್ ಮಾಲೀಕೆಯ ಮೇಲೆ ಅತ್ಯಾಚಾರ ಮಾಡಿ,
ವಿದೇಶಿ ಪ್ರವಾಸಿಗನ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮೂವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಸಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಯಿನಗರದ ಗೌಂಡಿ ಕೆಲಸಗಾರ ಮಲ್ಲೇಶ (ಹಂದಿಮಲ್ಲ), ಸಾಯಿ (ಚೈತನ್ಯ ಸಾಯಿ), ಶರಣಪ್ಪ (ಶರಣ ಬಸವರಾಜ್) ಅವರು ದುಷಕೃತ್ಯ ಎಸಗಿದ್ದು ನ್ಯಾಯಾಲಯದಲ್ಲಿ ಸಾಬೀತಾದ ಕಾರಣ, ನ್ಯಾಯಾಲಯವು ಮೂವರ ವಿರುದ್ಧ ಮರಣದಂಡನೆ ಶಿಕ್ಷೆ ವಿಧಿಸಿ, ತೀರ್ಪು ಪ್ರಕಟಿಸಿದೆ.
ಗಂಗಾವತಿ ತಾಲೂಕಿನ ಸಣಾಪುರ ಬಳಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕದಲ್ಲಿನ ರೆಸಾರ್ಟ್‍ನ ಬಳಿ 2025ರ ಮಾರ್ಚ್‍ನಲ್ಲಿ ರಾತ್ರಿಯ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದ ಇಸ್ರೇಲಿ ಮಹಿಳೆ ಮತ್ತು ಹೋಟೆಲ್ ಮಾಲೀಕೆಯ ಮೇಲೆ ಅತ್ಯಾಚಾರವೆಸಗಿ,
ತಡೆಯಲು ಬಂದಿದ್ದ ವಿದೇಶಿಗನನ್ನು ಕೊಲೆ ಮಾಡಿ, ಪರಾರಿಯಾಗಿದ್ದ ಪ್ರಕರಣ ದೇಶ - ವಿದೇಶಗಳ ಗಮನ ಸೆಳೆದು ಪ್ರವಾಸೋದ್ಯಮಕ್ಕೆ ಧಕ್ಕೆ ಉಂಟಾಗಿತ್ತು.
ಈ ಗಲಭೆಯಲ್ಲಿ ಅಮೇರಿಕಾದ ಡೇನಿಯಲ್, ಮಹಾರಾಷ್ಟ್ರದ ನಾಸಿಕ್‍ನ ಪಂಕಜ್ ಪಟೇಲ್ ಮತ್ತು ಓರಿಸ್ಸಾದ ಬಿಬಾಸ್ ಮೇಲೆ ಶಿಕ್ಷಿತರು ಹಲ್ಲೆ ನಡೆಸಿ, ಗಾಯಗೊಳಿಸಿದ್ದರು. ಈ ಘಟನೆಯಲ್ಲಿ ಒರಿಸ್ಸಾದ ಬಿಬಾಸ್(43) ಕೊಲೆಯಾಗಿದ್ದನು. ಈ ಹಿನ್ನೆಲೆ ಗಂಗಾವತಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗಂಗಾವತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, 11 ತಿಂಗಳ ಬಳಿಕ ತೀರ್ಪು ನೀಡಲಾಗಿದೆ. ಸರಕಾರದ ಸಹಾಯಕ ಅಭಿಯೋಜಕಿ ನಾಗಲಕ್ಷ್ಮಿ ಸರಕಾರದ ಪರ ವಾದ ಮಂಡಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್