ಸಂಸದರ ಅಮಾನತು ವಿರೋಧಿಸಿ ಸಂಸತ್ ಸಂಕೀರ್ಣದಲ್ಲಿ ಪ್ರತಿಭಟನೆ
ನವದೆಹಲಿ, 11 ಫೆಬ್ರವರಿ (ಹಿ.ಸ.) : ಆ್ಯಂಕರ್ : ಸಂಸದರನ್ನು ಅನ್ಯಾಯ ಹಾಗೂ ಅಸಂವಿಧಾನಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿ ಪ್ರತಿ ಪಕ್ಷದ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದರು. ಅಮೆರಿಕ-ಭಾರತ ವ್ಯಾಪಾರ ಒಪ್ಪಂದ, ಎಪ್ಸ್ಟೀನ್ ಕಡತಗಳು ಹಾಗೂ ನರವಾಣೆ ಅವರ ಪುಸ್ತಕಕ್ಕೆ ಸಂ
Protest


ನವದೆಹಲಿ, 11 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಸಂಸದರನ್ನು ಅನ್ಯಾಯ ಹಾಗೂ ಅಸಂವಿಧಾನಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿ ಪ್ರತಿ ಪಕ್ಷದ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದರು.

ಅಮೆರಿಕ-ಭಾರತ ವ್ಯಾಪಾರ ಒಪ್ಪಂದ, ಎಪ್ಸ್ಟೀನ್ ಕಡತಗಳು ಹಾಗೂ ನರವಾಣೆ ಅವರ ಪುಸ್ತಕಕ್ಕೆ ಸಂಬಂಧಿಸಿದ ಪ್ರಶ್ನೆಗಳಿಂದ ಮೋದಿ ಸರ್ಕಾರ ಅನಾನುಕೂಲ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಪ್ರತಿಪಕ್ಷದ ನಾಯಕರು ಆರೋಪಿಸಿದರು.

ಪ್ರಮುಖ ವಿಚಾರಗಳಿಂದ ಗಮನ ತಿರುಗಿಸಲು ಸರ್ಕಾರ ಅಮಾನತು ಕ್ರಮ ಕೈಗೊಂಡಿದೆ ಎಂಬ ಆಕ್ಷೇಪಿಸಿದರು.

ಈ ಕುರಿತು ಕಾಂಗ್ರೆಸ್ ಪಕ್ಷವು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡಿದ್ದು, “ಪ್ರಜಾಪ್ರಭುತ್ವದ ಬಾಯಿ ಮುಚ್ಚಲು ಸಾಧ್ಯವಿಲ್ಲ. ನಾವು ನ್ಯಾಯ ಮತ್ತು ಸತ್ಯಕ್ಕಾಗಿ ಹೋರಾಡುತ್ತೇವೆ” ಎಂದು ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande