ನಂಜನಗೂಡು ರಾಯರಮಠದಿಂದ ಯತ್ನಾಳರಿಗೆ ಸನ್ಮಾನ
ವಿಜಯಪುರ, 11 ಫೆಬ್ರವರಿ (ಹಿ.ಸ.) : ಆ್ಯಂಕರ್ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಪರಿಮಳ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೆ ದಿನಾಂಕ ೨೫ ರಂದು ಮಂತ್ರಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ
ಯತ್ನಾಳ


ವಿಜಯಪುರ, 11 ಫೆಬ್ರವರಿ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಪರಿಮಳ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇದೆ ದಿನಾಂಕ ೨೫ ರಂದು ಮಂತ್ರಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮಿಗಳು ಬಸನಗೌಡರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿರುವರು.

ಬಸನಗೌಡರು ಪರಿಮಳ ಪ್ರಶಸ್ತಿಗೆ ಭಾಜನರಾಗಿರುವದರಿಂದ ಇಂದು ಅವರಿಗೆ ಮಂತ್ರಾಲಯ ಮಠದ ವಿಜಯಪುರ ಶಾಖೆ ನಂಜನಗೂಡು ರಾಯರಮಠದ ವಿಚಾರಣಕರ್ತ ಗೋಪಾಲ ನಾಯಕ ಅವರು ಶೇಷವಸ್ತ್ರ ಫಲ ಮತ್ತು ರಾಯರ ಭಾವಫಲಕ ನೀಡಿ ಗೌರವಿಸಿದರು.

ಈ ಸಮಯದಲ್ಲಿ ನಗರದ ಶ್ರೀಕೃಷ್ಣ-ವಾದಿರಾಜ ಮಠದ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಸದಸ್ಯರಾದ ವಿಕಾಸ ಪದಕಿ ಮತ್ತು ವಿಜಯ ಜೋಶಿ ಉಪಸ್ಥಿತರಿದ್ದರು.

ಬಸನಗೌಡರು ಸನಾತನ ಧರ್ಮ ಪ್ರತಿಪಾದಕರಾಗಿ ಹಿಂದೂ ಸಮಾಜದ ಏಳೆಗೆ ಸಾಕಷ್ಟು ಶ್ರಮಿಸಿದ್ದಾರೆಂದು ಈ ಸಮಯದಲ್ಲಿ ಸ್ಮರಿಸಲಾಯಿತು.

ನಗರದ ಅಭಿವೃದ್ಧಿಗೂ ಅವರು ಅನುದಾನ ಕೊಡಿಸುವಲ್ಲಿ ಅವರು ಯಶ ಕಂಡಿದ್ದಾರೆ. ರಸ್ತೆ ಸುಧಾರಣೆಗೆ ಹಣ ಬಿಡುಗಡೆ ಮಾಡಿಸಿದ್ದು ಪ್ರಶಂಸನೀಯ ಎಂದು ಅಭಿಪ್ರಾಯಪಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande