
ನವದೆಹಲಿ, 11 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಭಾರತದ ಡೆನ್ಮಾರ್ಕ್ ರಾಯಭಾರಿಯಾದ ಶ್ರೀ ರಾಸ್ಮಸ್ ಅಬಿಲ್ಡ್‌ಗಾರ್ಡ್ ಕ್ರಿಸ್ಟೆನ್ಸೆನ್ ಅವರು ನವದೆಹಲಿಯಲ್ಲಿ ಇಂದು ಕರ್ನಾಟಕದ ಸಂಸದರನ್ನು ಭೇಟಿ ಮಾಡಿ, ಭಾರತ–ಡೆನ್ಮಾರ್ಕ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಅಡಿಯಲ್ಲಿ ಕರ್ನಾಟಕದೊಂದಿಗೆ ಸಹಭಾಗಿತ್ವ ಮತ್ತು ಅಭಿವೃದ್ಧಿಯ ವಿವಿಧ ಅವಕಾಶಗಳ ಕುರಿತು ಚರ್ಚೆ ನಡೆಸಿದರು.
ಚರ್ಚೆಯಲ್ಲಿ ಹಸಿರು ಶಕ್ತಿ, ನವೀನ ತಂತ್ರಜ್ಞಾನ, ಸ್ಥಿರ ಅಭಿವೃದ್ಧಿ, ಜಲವ್ಯವಸ್ಥಾಪನೆ ಹಾಗೂ ಕೈಗಾರಿಕಾ ಸಹಕಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಯೋಗವನ್ನು ವಿಸ್ತರಿಸುವ ಬಗ್ಗೆ ಮಾತುಕತೆ ನಡೆಯಿತು.
ಈ ಸಂದರ್ಭದಲ್ಲಿ ಸಂಸದರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಡಾ. ಸಿ.ಎನ್. ಮಂಜುನಾಥ್, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪಿ.ಸಿ. ಮೋಹನ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa