
ವಿಜಯಪುರ, 11 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಮಹಾಶಿವರಾತ್ರಿ ಪ್ರಯುಕ್ತ ಶ್ರೀಶೈಲಗೆ ತೆರುಳುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮೂಲಕ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ವಿಜಯಪುರ ವಿಭಾಗದ ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ ಹಾಗೂ ಬಸವನ ಬಾಗೇವಾಡಿ ಬಸ್ ನಿಲ್ದಾಣದಿಂದ 18-02-2026ರವರೆಗೆ ಜನದಟ್ಟಣೆಗನುಗುಣವಾಗಿ ಶ್ರೀಶೈಲಕ್ಕೆ ಹೆಚ್ಚುವರಿ ಬಸ್ಸುಗಳು ಕಾರ್ಯಾಚರಿಸಲಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಸಹ ಕಲ್ಪಿಸಿದೆ.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ವಿಜಯಪುರ 1ನೇ ಘಟಕ ವ್ಯವಸ್ಥಾಪಕರು- ಮೊ:7760992263, ವಿಜಯಪುರದ 2ನೇ ಘಟಕದ ವ್ಯವಸ್ಥಾಪಕರು ಮೊ:7760992264, ಸಿಂದಗಿ ಘಟಕ ವ್ಯವಸ್ಥಾಪಕರು ಮೊ:7760992266, ಮುದ್ದೇಬಿಹಾಳ ಘಟಕ ವ್ಯವಸ್ಥಾಪಕರು ಮೊ:7760992267, ತಾಳಿಕೋಟಿ ಘಟಕ ವ್ಯವಸ್ಥಾಪಕರು ಮೊ:7760992268, ವೀರರಾಣಿ ಕಿತ್ತೂರ ಚನ್ನಮ್ಮ ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ವ್ಯವಸ್ಥಾಪಕರ ಮೊ:7760992258 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande