ಸುಳ್ಳು ಮಾಯವಾಗಿ ರಾಜ್ಯ ಸುಭಿಕ್ಷವಾಗಲಿ ಎಂದು ಪುರದಮ್ಮ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ: ಸಿಎಂ ಡಿ.ಕೆ.ಶಿವಕುಮಾರ್
ಹಾಸನ, 08 ನವೆಂಬರ್ (ಹಿ.ಸ.): ರಾಜ್ಯ ಸುಭಿಕ್ಷವಾಗಿರಲಿ, ಎಲ್ಲರಿಗೂ ನೆಮ್ಮದಿ ದೊರೆಯಲಿ, ಸುಳ್ಳು ಮಾಯವಾಗಲಿ ಎಂದು ಪುರದಮ್ಮ ಚೌಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಹಾಸನದ ಪುರದಮ್ಮ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ದೇವಿಯ ದರ್ಶನ ಪಡೆದ
ಸಿಎಂ ಫೈಲ್ ಪೋಟೋ


ಹಾಸನ, 08 ನವೆಂಬರ್ (ಹಿ.ಸ.):

ರಾಜ್ಯ ಸುಭಿಕ್ಷವಾಗಿರಲಿ, ಎಲ್ಲರಿಗೂ ನೆಮ್ಮದಿ ದೊರೆಯಲಿ, ಸುಳ್ಳು ಮಾಯವಾಗಲಿ ಎಂದು ಪುರದಮ್ಮ ಚೌಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಹಾಸನದ ಪುರದಮ್ಮ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವರಲ್ಲಿ ಯಾವುದಾದರೂ ಹರಕೆ ಹೊತ್ತಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜ್ಯ ಸುಭಿಕ್ಷವಾಗಿರಲಿ, ಎಲ್ಲರಿಗೂ ನೆಮ್ಮದಿ ಇರಲಿ, ಸುಳ್ಳು ಮಾಯವಾಗಲಿ. ಸುಳ್ಳೇ ಮನೆದೇವರು ಎನ್ನುವವರನ್ನು ದೇವರೇ ನೋಡಿಕೊಳ್ಳಲಿ ಎಂದು ಪ್ರಾರ್ಥಿಸಿದ್ದೇನೆ. ಯಾವುದೇ ಹರಕೆ ಹೊತ್ತಿಲ್ಲ ಎಂದರು.

ಸ್ನೇಹಿತರು ಹರಕೆ ಹೊತ್ತಿದ್ದರು

ನಾನು ಮುಖ್ಯಮಂತ್ರಿಯಾದರೆ ಮತ್ತೆ ದೇವಸ್ಥಾನಕ್ಕೆ ಕರೆದುಕೊಂಡು ಬರುತ್ತೇವೆ ಎಂದು ನನ್ನ ಸ್ನೇಹಿತರು ಈ ಹಿಂದೆ ಹರಕೆ ಹೊತ್ತಿದ್ದರು. ನಾನು ಕಷ್ಟದ ಕಾಲದಲ್ಲಿದ್ದಾಗ ಮತ್ತು ತೊಂದರೆ ಅನುಭವಿಸುತ್ತಿದ್ದಾಗಲೂ ಇಲ್ಲಿ ಹರಕೆ ಮಾಡಿಕೊಂಡಿದ್ದರು. ಆಗಲೂ ದೇವಿಗೆ ಪೂಜೆ ಸಲ್ಲಿಸಿದ್ದೆ. ಚೌಡೇಶ್ವರಿ ದುರ್ಗಾದೇವಿಯ ಸ್ವರೂಪವಾಗಿದ್ದು, ಭಕ್ತರಿಗೆ ಧೈರ್ಯ ನೀಡುವ ಶಕ್ತಿ ಹೊಂದಿದ್ದಾಳೆ. ಇಲ್ಲಿಗೆ ಬಂದು ದೇವಿಯ ದರ್ಶನ ಪಡೆದಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಿದರು.

ದೇವಸ್ಥಾನದ ಅಭಿವೃದ್ಧಿಗೆ ಕ್ರಮ

ದೇವಸ್ಥಾನದ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಭಕ್ತರು ಮತ್ತು ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಅವುಗಳನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ದೇವಸ್ಥಾನವು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬಂದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕೂಡಲೇ ಕ್ರಮ ವಹಿಸುವಂತೆ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ದೇವಸ್ಥಾನದ ಅಭಿವೃದ್ಧಿಗೆ 4.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂಬ ಪ್ರಶ್ನೆಗೆ, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande