ಬಂಜಾರ ಸಮುದಾಯದ ಕಲಾ ಪ್ರತಿಭಾನ್ವೇಷಣೆ: ‘ಕಲಾ ಮಳಾವ್’ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗ, 08 ನವೆಂಬರ್ (ಹಿ.ಸ.): ಬಂಜಾರ ಸಮುದಾಯದ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಕಲಾಪ್ರಕಾರಗಳನ್ನು ಉಳಿಸಿ, ಬೆಳೆಸುವ ಹಾಗೂ ಬಂಜಾರ ಕಲಾವಿದರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ‘ಕಲಾ ಪ್ರತಿಭಾನ್ವೇಷಣೆ–ಕಲಾ ಮಳಾವ್’ ಕಾರ್ಯಕ್ರಮ ಆಯೋಜಿಸ
ಬಂಜಾರ ಸಮುದಾಯದ ಕಲಾ ಪ್ರತಿಭಾನ್ವೇಷಣೆ: ‘ಕಲಾ ಮಳಾವ್’ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ


ಶಿವಮೊಗ್ಗ, 08 ನವೆಂಬರ್ (ಹಿ.ಸ.):

ಬಂಜಾರ ಸಮುದಾಯದ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಕಲಾಪ್ರಕಾರಗಳನ್ನು ಉಳಿಸಿ, ಬೆಳೆಸುವ ಹಾಗೂ ಬಂಜಾರ ಕಲಾವಿದರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ‘ಕಲಾ ಪ್ರತಿಭಾನ್ವೇಷಣೆ–ಕಲಾ ಮಳಾವ್’ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕಾರ್ಯಕ್ರಮದಲ್ಲಿ ವಾಜಾ ವಾದ್ಯ ಸಮೂಹ ಗೀತೆ, ಬಂಜಾರ ಮಹಿಳೆಯರ ಸಾಂಪ್ರದಾಯಿಕ ಗಾಯನ ಮತ್ತು ನೃತ್ಯ, ಜಾನಪದ ನೃತ್ಯ, ಯುವತಿಯರ ಘೂಮರ್ ನೃತ್ಯ, ಪುರುಷರ ಲೇಂಗಿ ನೃತ್ಯ, ನಂಗಾರ ಠೋಳಿ ಬಿಡಿಸುವ ನೃತ್ಯ ಹಾಗೂ ಬಂಜಾರ ಕಥನ ಗಾಯನದಂತಹ ಕಲಾಪ್ರಕಾರಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಇದಲ್ಲದೆ, ಮಹಿಳೆಯರ ವಳಂಗ, ಮೆಹಂದಿ, ಡೋರಣ್ ಮತ್ತು ಆರತಿ ಗೀತೆಗಳು, ಭಕ್ತಿಗೀತೆ, ಭಾವಗೀತೆ ಮತ್ತು ಜಾನಪದ ಗೀತೆಗಳನ್ನು ಒಳಗೊಂಡ ಸುಗಮ ಸಂಗೀತ, ಬಾಲಕರ ಲೇಂಗಿ ಮತ್ತು ಕಥನ ಗಾಯನ ಸೇರಿದಂತೆ ವಿವಿಧ ಕಲಾ ನೃತ್ಯಗಳು, ಬಾಲಕಿಯರ ಕಲಾ ನೃತ್ಯ, ಢಾವಲೋ ಮತ್ತು ಹವೇಲಿ (ಮದುವೆ ಶಾಸ್ತ್ರ) ಹಾಗೂ ಪುರುಷರ ಸಾಂಪ್ರದಾಯಿಕ ಕಡಿ ಪ್ರಕಾರಗಳಿಗೂ ಅವಕಾಶವಿದೆ.

ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಶಿವಮೊಗ್ಗ ವಲಯ ಕಚೇರಿ, ಬಂಜಾರ ಭವನ, ನವುಲೆ ಇಲ್ಲಿ ಪಡೆದುಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯನ್ನು ನ.20ರೊಳಗಾಗಿ ಇದೇ ಕಚೇರಿಗೆ ಸಲ್ಲಿಸಬೇಕು ಎಂದು ನಿಗಮದ ಅಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande