ಮಹಾರಾಷ್ಟ್ರದಲ್ಲಿ 10 ಲಕ್ಷ ರೂ. ಬಹುಮಾನ ಘೋಷಿತ ಕುಖ್ಯಾತ ನಕ್ಸಲ್ವಾದಿ ಬಂಧನ
ಥಾಣೆ, 07 ನವೆಂಬರ್ (ಹಿ.ಸ.): ಜಾರ್ಖಂಡ್ ಸರ್ಕಾರ 10 ಲಕ್ಷ ರೂ. ಬಹುಮಾನ ಘೋಷಿಸಿದ್ದ ವಾಂಟೆಡ್ ನಕ್ಸಲ್‌ವಾದಿಯನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ಬಂಧಿತನನ್ನು ಸಂಜಯ್ ಸರೋಜ್ ಯಾದವ್ ಅಲಿಯಾಸ್ ಸಂಜಯ್ ಗೋಡ್ರಾಯ್ ಅಲಿಯಾಸ್ ಬುಧರಾಮ್ (45) ಎಂದು ಗುರುತಿಸಲಾಗಿದೆ. ಡೊ
अटक लोगो


ಥಾಣೆ, 07 ನವೆಂಬರ್ (ಹಿ.ಸ.):

ಜಾರ್ಖಂಡ್ ಸರ್ಕಾರ 10 ಲಕ್ಷ ರೂ. ಬಹುಮಾನ ಘೋಷಿಸಿದ್ದ ವಾಂಟೆಡ್ ನಕ್ಸಲ್‌ವಾದಿಯನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.

ಬಂಧಿತನನ್ನು ಸಂಜಯ್ ಸರೋಜ್ ಯಾದವ್ ಅಲಿಯಾಸ್ ಸಂಜಯ್ ಗೋಡ್ರಾಯ್ ಅಲಿಯಾಸ್ ಬುಧರಾಮ್ (45) ಎಂದು ಗುರುತಿಸಲಾಗಿದೆ. ಡೊಂಬಿವಲಿ ಸಮೀಪದ ಠಾಕುರ್ಲಿ ಪ್ರದೇಶದಲ್ಲಿ ಆತನನ್ನು ಬಂಧಿಸಲಾಗಿದೆ.

ಜಾರ್ಖಂಡ್‌ನ ಅರಣ್ಯ ಪ್ರದೇಶದ ನಿವಾಸಿಯಾಗಿರುವ ಸಂಜಯ್ ಯಾದವ್ ಕಳೆದ ಸುಮಾರು ಹತ್ತು ದಿನಗಳಿಂದ ಠಾಕುರ್ಲಿಯಲ್ಲಿ ವಾಸವಾಗಿದ್ದ. ಜಾರ್ಖಂಡ್‌ನ ಭದ್ರತಾ ಸಂಸ್ಥೆಗಳು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದವು. ಆತ ಮಹಾರಾಷ್ಟ್ರಕ್ಕೆ ಬಂದಿರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಎಟಿಎಸ್ ಠಾಕುರ್ಲಿ ಪ್ರದೇಶದಲ್ಲಿ ನಿಗಾ ಇರಿಸಿತ್ತು. ಸೂಕ್ತ ಸಮಯದಲ್ಲಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದೆ.

ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಳೆದ ಹತ್ತು ದಿನಗಳಿಂದ ಆತ ಠಾಕುರ್ಲಿಯಲ್ಲಿ ಯಾರ ಸಹಾಯದಿಂದ ವಾಸವಾಗಿದ್ದ, ಆತನಿಗೆ ವಾಸ್ತವ್ಯ ಕಲ್ಪಿಸಿದವರು ಯಾರು ಹಾಗೂ ಸ್ಥಳೀಯವಾಗಿ ಯಾರೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಬಗ್ಗೆ ಎಟಿಎಸ್ ತನಿಖೆ ನಡೆಸುತ್ತಿದೆ.

ಮಹಾರಾಷ್ಟ್ರಕ್ಕೆ ಬಂದ ಉದ್ದೇಶವೇನು?

ಸಂಜಯ್ ಯಾದವ್ ಜಾರ್ಖಂಡ್‌ನಿಂದ ಮಹಾರಾಷ್ಟ್ರಕ್ಕೆ ಬಂದಿದ್ದರ ಹಿಂದಿನ ಉದ್ದೇಶವೇನು ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆಹಚ್ಚುತ್ತಿವೆ. ಮಹಾರಾಷ್ಟ್ರದಲ್ಲಿದ್ದುಕೊಂಡು ಯಾವುದೇ ನಕ್ಸಲ್ ಚಟುವಟಿಕೆಗಳಿಗೆ ಯೋಜನೆ ರೂಪಿಸಿದ್ದನೇ ಅಥವಾ ರಾಜ್ಯದ ಇತರ ಶಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದನೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.

ಜಾರ್ಖಂಡ್ ಸರ್ಕಾರ 10 ಲಕ್ಷ ರೂ. ಬಹುಮಾನ ಘೋಷಿಸಿದ್ದ ನಕ್ಸಲ್‌ವಾದಿ ಠಾಣೆ ಜಿಲ್ಲೆಯಲ್ಲಿ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಎಚ್ಚರಿಕೆ ವಹಿಸಿವೆ. ಆರೋಪಿಯ ಚಟುವಟಿಕೆಗಳು, ಸಂಪರ್ಕಗಳು ಹಾಗೂ ಮಹಾರಾಷ್ಟ್ರಕ್ಕೆ ಆಗಮಿಸಿದ ಉದ್ದೇಶದ ಕುರಿತು ಎಟಿಎಸ್ ಸಮಗ್ರ ತನಿಖೆ ಮುಂದುವರಿಸಿದೆ.

----------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande