ಬಳ್ಳಾರಿಯಲ್ಲಿ ನ.29ರಂದು ರಾಜ್ಯಮಟ್ಟದ ಬಾಲಕಿಯರ ಕರಾಟೆ ಪಂದ್ಯಾವಳಿ
ಬಳ್ಳಾರಿ, 06 ನವೆಂಬರ್ (ಹಿ.ಸ.) ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಬಾಲಕಿಯರಿಗಾಗಿ ಪ್ರತ್ಯೇಕ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯನ್ನು ನವೆಂಬರ್ 29ರಂದು ಬಳ್ಳಾರಿಯ ಬೆಸ್ಟ್ ಶಾಲೆಯಲ್ಲಿ ಆಯೋಜಿಸಲಾಗಿದೆ. ‘ನಾರಿ ಶಕ್ತಿ–ಸಬಲ ಹೆಣ್ಣು, ಸುರಕ್ಷಿತ ಸಮಾಜ’ ಘೋಷವಾಕ್ಯದಡಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ರಾ
ನವೆಂಬರ್ 29ಕ್ಕೆ ಬಳ್ಳಾರಿಯಲ್ಲಿ `ನಾರಿ ಶಕ್ತಿ' ಬಾಲಕಿಯರ ಕರಾಟೆ ಸ್ಪರ್ಧೆಗಳು


ನವೆಂಬರ್ 29ಕ್ಕೆ ಬಳ್ಳಾರಿಯಲ್ಲಿ `ನಾರಿ ಶಕ್ತಿ' ಬಾಲಕಿಯರ ಕರಾಟೆ ಸ್ಪರ್ಧೆಗಳು


ಬಳ್ಳಾರಿ, 06 ನವೆಂಬರ್ (ಹಿ.ಸ.)

ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಬಾಲಕಿಯರಿಗಾಗಿ ಪ್ರತ್ಯೇಕ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯನ್ನು ನವೆಂಬರ್ 29ರಂದು ಬಳ್ಳಾರಿಯ ಬೆಸ್ಟ್ ಶಾಲೆಯಲ್ಲಿ ಆಯೋಜಿಸಲಾಗಿದೆ.

‘ನಾರಿ ಶಕ್ತಿ–ಸಬಲ ಹೆಣ್ಣು, ಸುರಕ್ಷಿತ ಸಮಾಜ’ ಘೋಷವಾಕ್ಯದಡಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದಾರೆ. ಸುಮಾರು 700ರಿಂದ 800 ವಿದ್ಯಾರ್ಥಿನಿಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕಟ್ಟೇಸ್ವಾಮಿ ತಿಳಿಸಿದ್ದಾರೆ.

ಬಾಲಕಿಯರ ಕ್ರೀಡಾ ಪ್ರತಿಭೆ, ಸಾಮರ್ಥ್ಯ ಹಾಗೂ ಆತ್ಮರಕ್ಷಣೆಯ ಮಹತ್ವವನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ವಿಶೇಷ ಪಂದ್ಯಾವಳಿ ಆಯೋಜಿಸಲಾಗಿದೆ.

ರಾಜ್ಯ ಕರಾಟೆ ಶಿಕ್ಷಕರ ಸಂಘ, ಕರಾಟೆ ಕರ್ನಾಟಕ ಹಾಗೂ ಬಳ್ಳಾರಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧಾಳುಗಳ ವಯಸ್ಸು ಮತ್ತು ತೂಕದ ಆಧಾರದ ಮೇಲೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಅಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಪಂದ್ಯಾವಳಿ ನಡೆಯಲಿದೆ.

ಪಂದ್ಯಾವಳಿಯಲ್ಲಿ ಭಾಗವಹಿಸಲು ಆಸಕ್ತರು ಮಹಮ್ಮದ್ ನದೀಮ್ (9986080450), ಕಟ್ಟೇಸ್ವಾಮಿ (9731481118) ಹಾಗೂ ಸುರೇಶ್ ಡಿ. (8867235931) ಅವರನ್ನು ಸಂಪರ್ಕಿಸಬಹುದು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ರಾಜ್ಯ ಉಪಾಧ್ಯಕ್ಷ ಮೌನೇಶ್ ವದ್ದಟ್ಟಿ, ರಾಜ್ಯ ಖಜಾಂಚಿ ಶಿವಕುಮಾರ್ ಶಾರದಲ್ಲಿ, ರಾಜ್ಯ ಸಹ ಕಾರ್ಯದರ್ಶಿ ಪ್ರಕಾಶ್ ಉಜಿನಿಕೊಪ್ಪ, ರಾಜ್ಯ ತಾಂತ್ರಿಕ ನಿರ್ದೇಶಕ ರವಿ ಕೋಟ್ಯಾನ್ ಹಾಗೂ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಜಡೆಶಾ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande