ನ. 25ಕ್ಕೆ ಕೋಳಿ ಸಾಕಾಣಿಕೆದಾರರಿಂದ ಮುಷ್ಕರಕ್ಕೆ ಕರೆ
ಕನಿಷ್ಠ ಸಾಕಾಣಿಕೆ ವೆಚ್ಚ ಪಾವತಿಗೆ ಆಗ್ರಹಿಸಿ ನವೆಂಬರ್ 25ರಂದು ಕೋಳಿ ಸಾಕಾಣಿಕೆದಾರರಿಂದ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಬೆಂಗಳೂರಿನಲ್ಲಿ ಮೊಟ್ಟೆಯ ದರ 7.50 ರೂ.ಗೆ ಏರಿಕೆಯಾಗಿದೆ.
ನ. 25ಕ್ಕೆ ಕೋಳಿ ಸಾಕಾಣಿಕೆದಾರರಿಂದ ಮುಷ್ಕರಕ್ಕೆ ಕರೆ


ಮಡಿಕೇರಿ, 10 ನವೆಂಬರ್ (ಹಿ.ಸ.):

ಕೋಳಿ ಸಾಕಾಣಿಕೆದಾರರು ನವೆಂಬರ್ 25 ರಿಂದ ಕೋಳಿ ಮತ್ತು ಮೊಟ್ಟೆ ಪೂರೈಕೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಕನಿಷ್ಠ ಸಾಕಾಣಿಕೆ ವೆಚ್ಚ ಪಾವತಿಗೆ ಆಗ್ರಹಿಸಿ ಮುಷ್ಕರಕ್ಕೆ ಮುಂದಾಗಿದ್ದಾರೆ.

ಈ ಮಧ್ಯೆ, ಬೆಂಗಳೂರಿನಲ್ಲಿ ಮೊಟ್ಟೆಯ ದರ 7.50 ರೂಪಾಯಿಗೆ ಏರಿಕೆಯಾಗಿ ಗ್ರಾಹಕರಿಗೆ ಆಘಾತ ನೀಡಿದೆ. ಮುಂಬರುವ ದಿನಗಳಲ್ಲಿ ಚಿಕನ್ ಮತ್ತು ಮೊಟ್ಟೆ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಸಾಧ್ಯತೆ ಇದೆ.

ಕನಿಷ್ಠ ಸಾಕಾಣಿಕೆ ವೆಚ್ಚ ಪಾವತಿಸುವಂತೆ ಆಗ್ರಹಕನಿಷ್ಠ ಸಾಕಾಣಿಕೆ ವೆಚ್ಚವನ್ನು ಪಾವತಿಸುವಂತೆ ಇಂಟಿಗ್ರೇಷನ್ ಕಂಪನಿಗಳಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಬೇಕು ಅಂತಾ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ. ಇಲ್ಲವಾದಲ್ಲಿ ನವೆಂಬರ್ 25ರಂದು ಬೃಹತ್ ವಿಧಾನಸೌಧ ಚಲೋಗೆ ತೀರ್ಮಾನಿಸಲಾಗಿದೆ.

ಕೋಳಿ ಹಾಗೂ ಮೊಟ್ಟೆ ಪೂರೈಕೆಯ ವ್ಯತ್ಯಯ ವ್ಯಾಪಾರಿಗಳು ಆತಂಕಅಷ್ಟೇ ಅಲ್ಲದೆ ಅದೇ ದಿನ ಸಂಜೆಯಿಂದ ರಾಜ್ಯಾದ್ಯಂತ ಕೋಳಿ ಮರಿ ಸ್ವೀಕಾರ ಹಾಗೂ ಕೋಳಿ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ.

ಹೀಗಾಗಿ ನಗರದಲ್ಲಿ ಚಿಕನ್ ಹಾಗೂ ಮೊಟ್ಟೆ ಪೂರೈಕೆಯ ವ್ಯತ್ಯಯದ ಬಗ್ಗೆ ವ್ಯಾಪಾರಿಗಳು ಆತಂಕ ಹೊರಹಾಕಿದ್ದಾರೆ.

ನಿತ್ಯ ಒಂದು ಮೊಟ್ಟೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಅಂತಾ ಮೊಟ್ಟೆ ತಿನ್ನುವವರಿಗೆ ಶಾಕ್ ಎದುರಾಗಿದೆ. ಒಂದು ಮೊಟ್ಟೆಯ ಬೆಲೆ ಬೆಂಗಳೂರಿನಲ್ಲಿ 7.50 ರೂ ತಲುಪಿರುವುದು ನಾಗರಿಕರಿಗೆ ಸಂಕಷ್ಟ ತಂದೊಡ್ಡಿದೆ.

ಈ ರೀತಿ ಅಗತ್ಯ ಆಹಾರ ಉತ್ಪನ್ನಗಳ ಬೆಲೆ ಏರಿಕೆ ನಿಜಕ್ಕೂ ಬಡ ಹಾಗೂ ಮಧ್ಯಮ ವರ್ಗದ ಬರಸಿಡಿಲು ಅಂತಾ ಆಕ್ರೋಶ ವ್ಯಕ್ತವಾಗಿದೆ.

ಈ ನಡುವೆ ವರ್ತಕರು ಕೂಡ ಮೊಟ್ಟೆ ಬೆಲೆ ಏರಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಕೋಳಿ ಹಾಗೂ ಮೊಟ್ಟೆ ಉತ್ದಾದನಾ ವೆಚ್ಚ ಕೂಡ ಹೆಚ್ಚಳವಾಗಿರುವುದರಿಂದ ಬೆಲೆ ಏರಿಕೆ ಅನಿವಾರ್ಯ ಅಂತಿದ್ದಾರೆ.

ಒಟ್ಟಿನಲ್ಲಿ ಸಾಲು ಸಾಲು ಬೆಲೆ ಏರಿಕೆಗಳಿಂದ ಎಲ್ಲವೂ ದುಬಾರಿಯಾಗುತ್ತಿದ್ದು, ಜನರು ಕಂಗಾಲಾಗಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande