
ನವದೆಹಲಿ, 10 ನವೆಂಬರ್ (ಹಿ.ಸ.):
ದೇಶೀಯ ಚಿನ್ನಾಭರಣ ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನದ ಬೆಲೆ ಏರಿಕೆ ಕಂಡಿದೆ. ವಿವಿಧ ಮಾರುಕಟ್ಟೆಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ₹970ರಿಂದ ₹1,050ರವರೆಗೆ ಹೆಚ್ಚಳವಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ ಸೋಮವಾರದ ದರದಲ್ಲೇ ವಹಿವಾಟು ಮುಂದುವರಿದಿದೆ.
ಬೆಲೆ ಏರಿಕೆಯ ಬಳಿಕ ದೇಶದ ಬಹುತೇಕ ಚಿನ್ನಾಭರಣ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,44,610ರಿಂದ ₹1,44,760ರ ನಡುವೆ ವಹಿವಾಟು ನಡೆಸುತ್ತಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,32,560ರಿಂದ ₹1,32,710ರ ನಡುವೆ ಇದೆ.
ದೆಹಲಿ ಚಿನ್ನಾಭರಣ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,44,760 ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ₹1,32,710 ಇದೆ. ಮುಂಬೈನಲ್ಲಿ ಕ್ರಮವಾಗಿ ₹1,44,610 ಮತ್ತು ₹1,32,560 ದರದಲ್ಲಿ ವಹಿವಾಟು ನಡೆಯುತ್ತಿದೆ.
ಅಹಮದಾಬಾದ್ ಮತ್ತು ಭೋಪಾಲ್ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1,44,660 ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ₹1,32,610 ಇದೆ.
ಚೆನ್ನೈ ಮತ್ತು ಕೋಲ್ಕತಾದಲ್ಲಿ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹1,44,610 ಹಾಗೂ 22 ಕ್ಯಾರೆಟ್ ಚಿನ್ನ ₹1,32,560ರಂತೆ ಮಾರಾಟವಾಗುತ್ತಿದೆ.
ಜೈಪುರ, ಪಟನಾ, ಚಂಡೀಗಢ ಮತ್ತು ಲಖನೌ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1,44,760 ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ₹1,32,710 ಇದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ನಗರಗಳಲ್ಲೂ ಏರಿಕೆ
ಕರ್ನಾಟಕ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಲ್ಲೂ ಚಿನ್ನದ ಬೆಲೆ ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ. ಈ ರಾಜ್ಯಗಳ ರಾಜಧಾನಿಗಳಾದ ಬೆಂಗಳೂರು, ಹೈದರಾಬಾದ್ ಮತ್ತು ಭುವನೇಶ್ವರದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,44,610 ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ₹1,32,560 ಇದೆ.
ಇನ್ನು ದೆಹಲಿ ಚಿನ್ನಾಭರಣ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆ.ಜಿಗೆ ₹2,04,900ರಷ್ಟಿದ್ದು, ಹಿಂದಿನ ದಿನದ ದರದಲ್ಲೇ ಮುಂದುವರಿದಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.