ಜನಸೇವೆಯಲ್ಲಿ ಪ್ರಧಾನಿ ಮೋದಿ ಅವರ 25 ವರ್ಷ: ಅಮಿತ್ ಶಾ, ಸಿಕ್ಕಿಂ ಮುಖ್ಯಮಂತ್ರಿ ತಮಾಂಗ್ ಅಭಿನಂದನೆ
ನವದೆಹಲಿ, 07 ಅಕ್ಟೋಬರ್ (ಹಿ.ಸ.): ಪ್ರಧಾನಿ ನರೇಂದ್ರ ಮೋದಿ ಅವರು ಜನಸೇವೆಯಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಸಿಕ್ಕಿಂ ಮುಖ್ಯಮಂತ್ರಿ ಪಿ.ಎಸ್. ತಮಾಂಗ್ ಅಭಿನಂದನೆ ಸಲ್ಲಿಸಿದ್ದಾರೆ. ಅಮಿತ್ ಶಾ ಅವರು ಸಾಮಾಜಿಕ ಜಾಲತಾಣದ ಮೂಲಕ
प्रधानमंत्री नरेन्द्र मोदी और केंद्रीय गृह एवं सहकारितामंत्री अमित शाह। फोटो - इंटरनेट मीडिया


ನವದೆಹಲಿ, 07 ಅಕ್ಟೋಬರ್ (ಹಿ.ಸ.):

ಪ್ರಧಾನಿ ನರೇಂದ್ರ ಮೋದಿ ಅವರು ಜನಸೇವೆಯಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಸಿಕ್ಕಿಂ ಮುಖ್ಯಮಂತ್ರಿ ಪಿ.ಎಸ್. ತಮಾಂಗ್ ಅಭಿನಂದನೆ ಸಲ್ಲಿಸಿದ್ದಾರೆ.

ಅಮಿತ್ ಶಾ ಅವರು ಸಾಮಾಜಿಕ ಜಾಲತಾಣದ ಮೂಲಕ ಪ್ರಧಾನಿ ಮೋದಿ ಅವರಿಗೆ ಶುಭಾಶಯ ಕೋರಿದ್ದು, ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಪ್ರಧಾನಮಂತ್ರಿಯಾಗಿ ದೇಶದ ಸೇವೆ ಸಲ್ಲಿಸುತ್ತಿರುವವರೆಗಿನ ಅವರ ಪಯಣವನ್ನು ಸ್ಮರಿಸಿದ್ದಾರೆ.

2001ರ ಅಕ್ಟೋಬರ್ 7ರಂದು ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅಲ್ಲಿಂದ ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ಅವರು ಸಲ್ಲಿಸಿದ ನಿರಂತರ ಸೇವೆ, ಹೋರಾಟ ಮತ್ತು ಸಮರ್ಪಣೆ ಬಡವರ ಕಲ್ಯಾಣ, ಮಹಿಳಾ ಸಬಲೀಕರಣ, ಯುವಕರ ಪ್ರಗತಿ ಹಾಗೂ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಸಮರ್ಪಿತವಾಗಿದೆ ಎಂದು ಶಾ ಹೇಳಿದ್ದಾರೆ.

ಜನಕೇಂದ್ರಿತ ನೀತಿಗಳು, ಪರಿಣಾಮಕಾರಿ ಅನುಷ್ಠಾನ, ದೃಢ ನಿರ್ಧಾರ, ಪಾರದರ್ಶಕತೆ ಮತ್ತು ಫಲಿತಾಂಶ ಆಧಾರಿತ ಆಡಳಿತದ ಮೂಲಕ ಮೋದಿ ಅವರು ಆಡಳಿತದ ವ್ಯಾಖ್ಯಾನವನ್ನೇ ಬದಲಿಸಿದ್ದಾರೆ. ಜೊತೆಗೆ ‘ಕಾರ್ಯಾಧಾರಿತ ರಾಜಕೀಯ’ದ ಮಾದರಿಯನ್ನು ಸ್ಥಾಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಸ್ಮರಿಸಿದ ಶಾ, ಭೂಕಂಪದಿಂದ ತತ್ತರಿಸಿದ್ದ ಕಚ್ ಪ್ರದೇಶದ ಪುನರ್‌ನಿರ್ಮಾಣ, ಜ್ಯೋತಿಗ್ರಾಮ ಯೋಜನೆಯ ಮೂಲಕ ವಿದ್ಯುತ್ ಪೂರೈಕೆ ವಿಸ್ತರಣೆ, ಸೌರಶಕ್ತಿ ಯೋಜನೆಗಳು ಹಾಗೂ ವೈಬ್ರಂಟ್ ಗುಜರಾತ್ ಮೂಲಕ ಹೂಡಿಕೆ ಮತ್ತು ಕೈಗಾರಿಕೆಗೆ ಉತ್ತೇಜನ ನೀಡಿದ್ದನ್ನು ಉಲ್ಲೇಖಿಸಿದ್ದಾರೆ. ಕೃಷಿಯಲ್ಲಿ ಶೇ.8ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿಯಾದ ಬಳಿಕ ಇದೇ ಆಡಳಿತದ ದೃಷ್ಟಿಕೋನವನ್ನು ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲಾಗಿದೆ ಎಂದು ಶಾ ಹೇಳಿದ್ದಾರೆ. ಬಾಹ್ಯಾಕಾಶದಿಂದ ಸಮುದ್ರದವರೆಗೆ, ಜಾಗತಿಕ ವೇದಿಕೆಗಳಿಂದ ಆಂತರಿಕ ಭದ್ರತೆಯವರೆಗೆ ಭಾರತ ಹೊಸ ಮೈಲಿಗಲ್ಲುಗಳನ್ನು ಸಾಧಿಸಿದೆ. 25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದು, ಲಕ್ಷಾಂತರ ಕುಟುಂಬಗಳಿಗೆ ಪಕ್ಕಾ ಮನೆ, ಐದು ಲಕ್ಷ ರೂಪಾಯಿವರೆಗಿನ ಆರೋಗ್ಯ ರಕ್ಷಣೆ, ಉಜ್ವಲಾ ಅನಿಲ ಸಂಪರ್ಕ ಹಾಗೂ ಮನೆಮನೆಗೆ ಕೊಳವೆ ನೀರಿನ ಸೌಲಭ್ಯ ದೊರೆತಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೊಂದಿಗೆ ಉತ್ಪಾದನೆ, ಡಿಜಿಟಲ್ ಪಾವತಿ, ನವೋದ್ಯಮ, ಅರೆವಾಹಕ, ರಕ್ಷಣಾ ಉತ್ಪಾದನೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಹೊಸ ಎತ್ತರ ತಲುಪುತ್ತಿದೆ ಎಂದು ಶಾ ಹೇಳಿದ್ದಾರೆ.

ಯುದ್ಧ ಮತ್ತು ಅಸ್ಥಿರತೆಯ ಈ ಸಂದರ್ಭದಲ್ಲಿ ಭಾರತ ಶಾಂತಿ ಮತ್ತು ಸೌಹಾರ್ದಕ್ಕಾಗಿ ಪ್ರಮುಖ ಜಾಗತಿಕ ಧ್ವನಿಯಾಗಿ ಹೊರಹೊಮ್ಮಿದೆ. ಮೋದಿ ಅವರು ಕೋಟ್ಯಂತರ ಭಾರತೀಯರಲ್ಲಿ ಆತ್ಮವಿಶ್ವಾಸ ಮೂಡಿಸಿ, ‘ವಿಕಸಿತ ಭಾರತ’ದ ಸಂಕಲ್ಪವನ್ನು ನೀಡಿದ್ದಾರೆ. 2047ರ ವೇಳೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಮುಂಚೂಣಿಗೆ ತರುವ ಗುರಿಯನ್ನು ದೇಶದ ಮುಂದೆ ಇಟ್ಟಿದ್ದಾರೆ ಎಂದು ಶಾ ಹೇಳಿದ್ದಾರೆ.

ಇದೇ ವೇಳೆ ಸಿಕ್ಕಿಂ ಮುಖ್ಯಮಂತ್ರಿ ಪಿ.ಎಸ್. ತಮಾಂಗ್ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜನಸೇವೆಯಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸಿರುವ ಐತಿಹಾಸಿಕ ಸಂದರ್ಭದಲ್ಲಿ ಸಿಕ್ಕಿಂ ಸರ್ಕಾರ ಮತ್ತು ಜನತೆಯ ಪರವಾಗಿ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಭಾರತದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸುವವರೆಗಿನ ಮೋದಿ ಅವರ ಪಯಣ ನಿಸ್ವಾರ್ಥ ಸೇವೆ, ಉತ್ತಮ ಆಡಳಿತ ಮತ್ತು ರಾಷ್ಟ್ರ ನಿರ್ಮಾಣದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಮಾಂಗ್ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ನಿರಂತರ ಸಹಕಾರ, ಮಾರ್ಗದರ್ಶನ, ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ಸಿಕ್ಕಿಂ ಜನತೆ ಹಾಗೂ ಸರ್ಕಾರ ಕೃತಜ್ಞವಾಗಿದೆ. ದೇಶವನ್ನು ಇನ್ನಷ್ಟು ಪ್ರಗತಿ, ಸಮೃದ್ಧಿ, ಶಾಂತಿ ಮತ್ತು ಜಾಗತಿಕ ನಾಯಕತ್ವದತ್ತ ಕೊಂಡೊಯ್ಯಲು ಅವರಿಗೆ ಉತ್ತಮ ಆರೋಗ್ಯ, ಶಕ್ತಿ ಮತ್ತು ದೀರ್ಘಾಯುಷ್ಯ ದೊರೆಯಲಿ ಎಂದು ತಮಾಂಗ್ ಹಾರೈಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande