ಕೋಲಾರ:ಮುದುವತ್ತಿಯಲ್ಲಿ ಮಕ್ಕಳ ರಕ್ಷಣಾ ಘಟಕದಿಂದ ಜಾಗೃತಿ ಕಾರ್ಯಾಗಾರ
ಮುದುವತ್ತಿಯಲ್ಲಿ ಮಕ್ಕಳ ರಕ್ಷಣಾ ಘಟಕದಿಂದ ಜಾಗೃತಿ ಕಾರ್ಯಾಗಾರ
ಕೋಲಾರ ತಾಲ್ಲೂಕಿನ ಮುದುವತ್ತಿಯಲ್ಲಿ ಮಕ್ಕಳ ರಕ್ಷಣಾ ಘಟಕದಿಂದ ಜಾಗೃತಿ ಕಾರ್ಯಕ್ರಮ ನಡೆಯಿತು.


ಕೋಲಾರ, 30 ಅಕ್ಟೋಬರ್ (ಹಿ.ಸ) : ಅವಕಾಶ ವಂಚಿತ ಮಕ್ಕಳಿಗೆ ಕುಟುಂಬ ವ್ಯವಸ್ಥೆಯನ್ನು ಕಲ್ಪಿಸುವ ಪೋಷಕತ್ವ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ನಾಗರಾಜ್ ಎಲ್ ತಿಳಿಸಿದರು.

ಮುದುವತ್ತಿ ಗ್ರಾಮದಲ್ಲಿ ಬುದ್ಧ ರೂರಲ್ ಡೆವಲಪ್ಮೆಂಟ್ ಸೊಸೈಟಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಯೋಗದೊಂದಿಗೆ ಸ್ವಸಹಾಯ ಸಂಘದ' ಮಹಿಳೆಯರಿಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಟುಂಬದ ಅವಕಾಶ ವಂಚಿತ ಮಕ್ಕಳಿಗೆ ಪರ್ಯಾಯ ಕುಟುಂಬ ವ್ಯವಸ್ಥೆ ಕಲ್ಪಿಸುವ ಪೋಷಕತ್ವ ಯೋಜನೆ ಉತ್ತಮವಾದ ಯೋಜನೆಯಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಯಾವುದೇ ಮಗುವನ್ನು ದತ್ತು ನಿಯಮಗಳ ಅನುಸಾರ ಮಕ್ಕಳನ್ನು ಪಡೆಯಬೇಕು ಎಂದರು.

ದತ್ತು ಮಾರ್ಗಸೂಚಿ ೨೦೨೨ ಮತ್ತು ಪೋಷಕತ್ವ ಯೋಜನೆ ಬಾಲ ನ್ಯಾಯ ಕಾಯ್ದೆ ಅನುಸಾರ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಅವಕಾಶವಿದೆ. ಅದೇ ರೀತಿ ಪೋಷಕತ್ವ ಯೋಜನೆ ಕುರಿತಂತೆ ಇನ್ನು ತುಂಬಾ ಜನರಿಗೆ ಅರಿವಿನ ಕೊರತೆಯಿದ್ದು, ಈ ಮಾಹಿತಿಯನ್ನು ಎಲ್ಲರಿಗೂ ಹಂಚಿಕೊಳ್ಳಲು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಮಕ್ಕಳ ರಕ್ಷಣಾಧಿಕಾರಿಗಳು ಕಚೇರಿ ಕೆಜಿಎಫ್ ಮತ್ತು ಬುದ್ಧ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ಕಚೇರಿಯಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಂ.ಬಿ.ಕೆ. ಶೋಭಾ, ಎಸ್.ಆರ್.ಪಿ. ಮುನಿರತ್ನ, ಸಂಜೀವಿನಿ ವಿಜ್ಞೇಶ್ವರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸೌಮ್ಯ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande