ದೋಹಾದಲ್ಲಿ ರಕ್ಷಣಾ ಸಹಕಾರ ಬಲವರ್ಧನೆಗೆ ನಾಲ್ಕು ದೇಶಗಳ ಒಪ್ಪಂದಕ್ಕೆ ಸಹಿ
ದೋಹಾ, ಅಕ್ಟೋಬರ್ 22 (ಹಿ.ಸ.): ರಕ್ಷಣಾ ಸಹಕಾರವನ್ನು ಬಲಪಡಿಸುವ ಹಾಗೂ ತಮ್ಮ ಸೇನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪಾಕಿಸ್ತಾನ, ಟರ್ಕಿ, ಕತಾರ್ ಮತ್ತು ಇಂಡೋನೇಷ್ಯಾ ದೇಶಗಳು ಬುಧವಾರ ‘ಬದ್ರ್ ತಿಳಿವಳಿಕೆ ಒಪ್ಪಂದ’ಕ್ಕೆ ಸಹಿ ಹಾಕಿವೆ. ಕತಾರ್ ರಾಜಧಾನಿ ದೋಹಾದಲ್ಲಿ ನಡೆದ ಈ ಒಪ್ಪಂದದ ಮುಖ್
कतर के दोहा में 'बद्र समझौते' पर हस्ताक्षर करने के दाैरान तुर्की के डिफेंस इंडस्ट्री के अध्यक्ष हलूक गोरगुन, तुर्की के रक्षा मंत्री यासर गुलर, कतर के उप प्रधानमंत्री और रक्षा मामलों के राज्य मंत्री शेख सऊद बिन अब्दुल रहमान बिन हसन अल सानी, पाकिस्तान के रक्षा मंत्री ख्वाजा मुहम्मद आसिफ और इंडोनेशिया के उप रक्षा मंत्री यूसुफ जौहरी।


ದೋಹಾ, ಅಕ್ಟೋಬರ್ 22 (ಹಿ.ಸ.):

ರಕ್ಷಣಾ ಸಹಕಾರವನ್ನು ಬಲಪಡಿಸುವ ಹಾಗೂ ತಮ್ಮ ಸೇನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪಾಕಿಸ್ತಾನ, ಟರ್ಕಿ, ಕತಾರ್ ಮತ್ತು ಇಂಡೋನೇಷ್ಯಾ ದೇಶಗಳು ಬುಧವಾರ ‘ಬದ್ರ್ ತಿಳಿವಳಿಕೆ ಒಪ್ಪಂದ’ಕ್ಕೆ ಸಹಿ ಹಾಕಿವೆ.

ಕತಾರ್ ರಾಜಧಾನಿ ದೋಹಾದಲ್ಲಿ ನಡೆದ ಈ ಒಪ್ಪಂದದ ಮುಖ್ಯ ಉದ್ದೇಶ ಸೇನಾ ಉತ್ಪಾದನೆ, ರಕ್ಷಣಾ ತಂತ್ರಜ್ಞಾನ, ತರಬೇತಿ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ನಾಲ್ಕೂ ದೇಶಗಳ ನಡುವಿನ ಸಹಕಾರವನ್ನು ವಿಸ್ತರಿಸುವುದಾಗಿದೆ.

ಪಾಕಿಸ್ತಾನದ ದುನಿಯಾ ನ್ಯೂಸ್ ಮತ್ತು ಜಿಯೊ ನ್ಯೂಸ್ ವರದಿಗಳ ಪ್ರಕಾರ, ಟರ್ಕಿಯ ರಾಷ್ಟ್ರೀಯ ರಕ್ಷಣಾ ಸಚಿವಾಲಯವು ಈ ಒಪ್ಪಂದವನ್ನು ನಾಲ್ಕು ದೇಶಗಳ ರಕ್ಷಣಾ ಉದ್ಯಮಗಳ ನಡುವಿನ ಪಾಲುದಾರಿಕೆಯನ್ನು ಗಾಢಗೊಳಿಸುವ ಹಾಗೂ ಕೈಗಾರಿಕಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆ ಎಂದು ಬಣ್ಣಿಸಿದೆ. ಪ್ರತಿಯೊಂದು ದೇಶದ ರಕ್ಷಣಾ ಉತ್ಪಾದನಾ ಪರಿಣತಿಯನ್ನು ಬಳಸಿಕೊಳ್ಳಲು, ಜಂಟಿ ಯೋಜನೆಗಳನ್ನು ಉತ್ತೇಜಿಸಲು ಹಾಗೂ ಸ್ನೇಹಪರ ರಾಷ್ಟ್ರಗಳ ರಕ್ಷಣಾ ಅಗತ್ಯಗಳನ್ನು ಪೂರೈಸಲು ಈ ಒಪ್ಪಂದ ನೆರವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ನಾಲ್ಕು ದೇಶಗಳ ಹಿರಿಯ ಪ್ರತಿನಿಧಿಗಳ ಭಾಗಿ

ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭದಲ್ಲಿ ನಾಲ್ಕೂ ದೇಶಗಳ ಹಿರಿಯ ರಕ್ಷಣಾ ಪ್ರತಿನಿಧಿಗಳು ಭಾಗವಹಿಸಿದ್ದರು. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಟರ್ಕಿಯ ರಕ್ಷಣಾ ಸಚಿವ ಯಾಸರ್ ಗುಲರ್, ಕತಾರ್‌ನ ಉಪಪ್ರಧಾನಿ ಹಾಗೂ ರಕ್ಷಣಾ ವ್ಯವಹಾರಗಳ ರಾಜ್ಯ ಸಚಿವ ಶೇಖ್ ಸೌದ್ ಬಿನ್ ಅಬ್ದುಲ್ ರಹಮಾನ್ ಮತ್ತು ಇಂಡೋನೇಷ್ಯಾದ ಉಪರಕ್ಷಣಾ ಸಚಿವ ಯೂಸುಫ್ ಜೌಹರಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಟರ್ಕಿಯ ರಕ್ಷಣಾ ಕೈಗಾರಿಕಾ ಸಚಿವಾಲಯದ ಮುಖ್ಯಸ್ಥ ಹಲೂಕ್ ಗೊರ್ಗುನ್ ಕೂಡ ಉಪಸ್ಥಿತರಿದ್ದರು.

ರಕ್ಷಣಾ ಉತ್ಪಾದನೆಗೆ ಆದ್ಯತೆ

‘ಬದ್ರ್’ ಒಪ್ಪಂದದ ಅಡಿಯಲ್ಲಿ ನಾಲ್ಕೂ ದೇಶಗಳು ತಮ್ಮ ರಕ್ಷಣಾ ಸಾಮರ್ಥ್ಯ ಮತ್ತು ತಾಂತ್ರಿಕ ಪರಿಣತಿಯನ್ನು ಪರಸ್ಪರ ಹಂಚಿಕೊಳ್ಳಲು ಸಹಕಾರದ ಚೌಕಟ್ಟನ್ನು ರೂಪಿಸಲಿವೆ. ಸೇನಾ ಉಪಕರಣಗಳು ಮತ್ತು ರಕ್ಷಣಾ ವ್ಯವಸ್ಥೆಗಳ ಉತ್ಪಾದನೆಯಲ್ಲಿ ಸಹಕಾರ ಹೆಚ್ಚಿಸುವುದು, ಆಧುನಿಕ ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿಗೆ ಜಂಟಿ ಪ್ರಯತ್ನ ನಡೆಸುವುದು, ತಾಂತ್ರಿಕ ಸೇನಾ ತರಬೇತಿ ಹಾಗೂ ತರಬೇತಿ ಕಾರ್ಯಕ್ರಮಗಳ ವಿನಿಮಯಕ್ಕೆ ಉತ್ತೇಜನ ನೀಡುವುದು ಈ ಒಪ್ಪಂದದ ಪ್ರಮುಖ ಉದ್ದೇಶಗಳಾಗಿವೆ.

ಇದರ ಜತೆಗೆ ರಕ್ಷಣಾ ಉದ್ಯಮಗಳ ನಡುವಿನ ಪಾಲುದಾರಿಕೆ, ಜಂಟಿ ಉತ್ಪಾದನೆ ಮತ್ತು ತಾಂತ್ರಿಕ ಮಾಹಿತಿಯ ಹಂಚಿಕೆಗೆ ಅವಕಾಶಗಳನ್ನು ಅನ್ವೇಷಿಸಲಾಗುತ್ತದೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ಒಪ್ಪಂದವು ನಾಲ್ಕೂ ದೇಶಗಳ ಕೈಗಾರಿಕಾ ಸಾಮರ್ಥ್ಯವನ್ನು ಬಲಪಡಿಸುವುದರ ಜತೆಗೆ ಸಾಮಾನ್ಯ ಭದ್ರತಾ ಉದ್ದೇಶಗಳನ್ನು ಸಾಧಿಸಲು ಸಹಕಾರಿಯಾಗಲಿದೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ. ಆದರೆ, ನಿರ್ದಿಷ್ಟ ಜಂಟಿ ರಕ್ಷಣಾ ಯೋಜನೆಗಳು, ಅವುಗಳಿಗೆ ಅಗತ್ಯವಿರುವ ಹಣಕಾಸು ಮತ್ತು ಅನುಷ್ಠಾನದ ಕಾಲಮಿತಿಯ ಕುರಿತು ಇನ್ನೂ ವಿವರಗಳನ್ನು ಪ್ರಕಟಿಸಿಲ್ಲ.

ಪ್ರಾದೇಶಿಕ ಶಾಂತಿ, ಸ್ಥಿರತೆಗೆ ಒತ್ತು

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ವಿಶ್ವಾಸಾರ್ಹ ಪಾಲುದಾರ ರಾಷ್ಟ್ರಗಳೊಂದಿಗೆ ರಕ್ಷಣಾ ಸಹಕಾರವನ್ನು ಬಲಪಡಿಸುವುದಕ್ಕೆ ತಮ್ಮ ದೇಶ ಆದ್ಯತೆ ನೀಡುತ್ತದೆ ಎಂದು ಹೇಳಿದ್ದಾರೆ. ಈ ಒಪ್ಪಂದವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಬಗೆಗಿನ ನಾಲ್ಕೂ ದೇಶಗಳ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಟರ್ಕಿ ತನ್ನ ರಕ್ಷಣಾ ಉದ್ಯಮವನ್ನು ವಿಸ್ತರಿಸುವುದರ ಜತೆಗೆ ಪಾಲುದಾರ ರಾಷ್ಟ್ರಗಳ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಲು ಒತ್ತು ನೀಡುತ್ತಿದೆ. ಕತಾರ್ ಜತೆಗೆ ಟರ್ಕಿಯ ರಕ್ಷಣಾ ಸಂಬಂಧಗಳು ಈಗಾಗಲೇ ಬಲವಾಗಿದ್ದು, ಕತಾರ್‌ನಲ್ಲಿ ಟರ್ಕಿಯ ಸೇನಾ ನೆಲೆಯೂ ಇದೆ. ಇಂಡೋನೇಷ್ಯಾದೊಂದಿಗೂ ರಕ್ಷಣಾ ಉದ್ಯಮ ಮತ್ತು ಸೇನಾ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಟರ್ಕಿ ನಿಕಟ ಸಂಬಂಧ ಹೊಂದಿದೆ. ಪಾಕಿಸ್ತಾನ ಮತ್ತು ಟರ್ಕಿ ನಡುವೆ ರಕ್ಷಣಾ ಉತ್ಪಾದನೆ, ಸೇನಾ ತರಬೇತಿ ಹಾಗೂ ತಾಂತ್ರಿಕ ಸಹಕಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಾಲುದಾರಿಕೆ ಇದೆ.

ಪಶ್ಚಿಮ ಏಷ್ಯಾದಲ್ಲಿ ಭದ್ರತಾ ಸವಾಲುಗಳು ಮತ್ತು ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ತಮ್ಮ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಲು ಮುಂದಾಗಿವೆ. ಇಂತಹ ಸಂದರ್ಭದಲ್ಲಿ ನಾಲ್ಕು ದೇಶಗಳ ನಡುವಿನ ಈ ಒಪ್ಪಂದವು ರಕ್ಷಣಾ ತಂತ್ರಜ್ಞಾನ, ಸೇನಾ ತರಬೇತಿ ಮತ್ತು ಕೈಗಾರಿಕಾ ಉತ್ಪಾದನಾ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ಆದರೆ, ಒಪ್ಪಂದದ ಅಡಿಯಲ್ಲಿ ಯಾವ ರೀತಿಯ ರಕ್ಷಣಾ ವ್ಯವಸ್ಥೆಗಳನ್ನು ಜಂಟಿಯಾಗಿ ಉತ್ಪಾದಿಸಲಾಗುತ್ತದೆ ಮತ್ತು ನಾಲ್ಕೂ ದೇಶಗಳು ಎಷ್ಟು ಪ್ರಮಾಣದ ಹಣಕಾಸಿನ ಬದ್ಧತೆ ವಹಿಸಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

-------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande