ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿಢೀರ್ ತಪಾಸಣೆ: ಮೊಬೈಲ್, ಸಿಮ್ಕಾರ್ಡ್ಗಳು ಹಾಗೂ ನಗದು ಜಪ್ತಿ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದಿಢೀರ್ ತಪಾಸಣೆ ವೇಳೆ ಕೈದಿಯ ಬ್ಯಾಗ್ನಲ್ಲಿ ಮೊಬೈಲ್, ಟೋಪಿಯಲ್ಲಿ ಮೂರು ಸಿಮ್ಕಾರ್ಡ್ಗಳು ಹಾಗೂ ಶೌಚಾಲಯದ ಬ್ಯಾಗ್ನಲ್ಲಿ ₹8,500 ನಗದು ಪತ್ತೆಯಾಗಿದೆ. ಘಟನೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
parappana-agrahara-jail-surprise-check-mobile-sim-cards-cash-seized


ಬೆಂಗಳೂರು, 02 ಅಕ್ಟೋಬರ್ (ಹಿ.ಸ.):

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಸಿದ ದಿಢೀರ್ ತಪಾಸಣೆ ವೇಳೆ ಮೊಬೈಲ್ ಫೋನ್, ಮೂರು ಸಿಮ್ಕಾರ್ಡ್ಗಳು ಹಾಗೂ ₹8,500 ನಗದು ಪತ್ತೆಯಾಗಿದ್ದು, ಜೈಲಿನ ಭದ್ರತಾ ವ್ಯವಸ್ಥೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ.

ಜೈಲು ಸೂಪರಿಂಟೆಂಡೆಂಟ್ ಬಿ.ಎಂ. ಕೊಟ್ರೇಶ್ ನೇತೃತ್ವದಲ್ಲಿ ಟವರ್-2ರ ಸಿ-ಬ್ಯಾರಕ್ನಲ್ಲಿ ತಪಾಸಣೆ ನಡೆಸಲಾಗಿದೆ. ಬ್ಯಾರಕ್ನ ಕೊಠಡಿ ಸಂಖ್ಯೆ 4ರಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಲತೇಶ ಎಂಬ ಕೈದಿಯ ಬ್ಯಾಗ್ನಲ್ಲಿ ಕೀಪ್ಯಾಡ್ ಮೊಬೈಲ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಕೊಠಡಿ ಸಂಖ್ಯೆ 5ರಲ್ಲಿದ್ದ ಮೊಹಮ್ಮದ್ ನವಾಜ್ ಎಂಬ ಕೈದಿಯ ಟೋಪಿಯ ಒಳಭಾಗದಲ್ಲಿ ಬಚ್ಚಿಡಲಾಗಿದ್ದ ಮೂರು ಸಿಮ್ಕಾರ್ಡ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇನ್ನು ಜೈಲಿನ ಅಡುಗೆ ಮನೆಯ ಶೌಚಾಲಯದಲ್ಲಿ ಇರಿಸಲಾಗಿದ್ದ ಬ್ಯಾಗ್ನಲ್ಲಿ ₹8,500 ನಗದು ಹಣವೂ ಪತ್ತೆಯಾಗಿದೆ. ಜೈಲಿನೊಳಗೆ ನಿಷೇಧಿತ ವಸ್ತುಗಳು ಹಾಗೂ ನಗದು ಪ್ರವೇಶಿಸಲು ಸಹಕರಿಸಿದವರು ಮತ್ತು ಅವುಗಳನ್ನು ಬಳಸಿದ ಕೈದಿಗಳ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಇತ್ತೀಚೆಗಷ್ಟೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಸೆಲ್ನಲ್ಲೂ ಸ್ಮಾರ್ಟ್ಫೋನ್ ಪತ್ತೆಯಾಗಿದ್ದ ಘಟನೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೆ ಮೊಬೈಲ್, ಸಿಮ್ಕಾರ್ಡ್ಗಳು ಮತ್ತು ನಗದು ಪತ್ತೆಯಾಗಿರುವುದು ಜೈಲಿನ ಭದ್ರತಾ ಕ್ರಮಗಳ ಬಗ್ಗೆ ಆತಂಕ ಮೂಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande