2031ರವರೆಗೆ ಸಾಮಾಜಿಕ ನೆರವು ಯೋಜನೆ ಮುಂದುವರಿಕೆಗೆ ಕೇಂದ್ರ ಸಂಪುಟ ಅಸ್ತು
ನವದೆಹಲಿ, 14 ಅಕ್ಟೋಬರ್ (ಹಿ.ಸ.): ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು 2026-27ರಿಂದ 2030-31ರವರೆಗೆ ಐದು ವರ್ಷಗಳ ಕಾಲ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಅವಧಿಯಲ್ಲಿ ಯೋಜನೆಗಾಗಿ ಒಟ್ಟು 53,428 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಯೋ
सामाजिक सुरक्षा योजना से जुड़ा प्रतिनिधि चित्र


ನವದೆಹಲಿ, 14 ಅಕ್ಟೋಬರ್ (ಹಿ.ಸ.):

ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು 2026-27ರಿಂದ 2030-31ರವರೆಗೆ ಐದು ವರ್ಷಗಳ ಕಾಲ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಅವಧಿಯಲ್ಲಿ ಯೋಜನೆಗಾಗಿ ಒಟ್ಟು 53,428 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಯೋಜನೆಯ ಹೆಸರುಗಳು, ಅಂಗವಿಕಲರ ಪಿಂಚಣಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು ಹಾಗೂ ನೆರವಿನ ಮೊತ್ತದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಯಿತು.

ಯೋಜನೆಗಳ ಹೆಸರು ಬದಲಾವಣೆ

ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು ಇನ್ನು ಮುಂದೆ 'ಪ್ರಧಾನಮಂತ್ರಿ ಸಾಮಾಜಿಕ ನೆರವು ಯೋಜನೆ' ಎಂದು ಕರೆಯಲಾಗುತ್ತದೆ. ಇದರ ಅಡಿಯಲ್ಲಿ ಬರುವ ಉಪಯೋಜನೆಗಳ ಹೆಸರುಗಳನ್ನೂ ಬದಲಾಯಿಸಲಾಗಿದೆ.

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಗೆ 'ಪ್ರಧಾನಮಂತ್ರಿ ವೃದ್ಧಾಪ್ಯ ಪಿಂಚಣಿ ಯೋಜನೆ', ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆಗೆ 'ಪ್ರಧಾನಮಂತ್ರಿ ವಿಧವಾ ಪಿಂಚಣಿ ಯೋಜನೆ' ಎಂದು ಮರುನಾಮಕರಣ ಮಾಡಲಾಗಿದೆ.

ಅದೇ ರೀತಿ, ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲರ ಪಿಂಚಣಿ ಯೋಜನೆಯನ್ನು 'ಪ್ರಧಾನಮಂತ್ರಿ ವಿಶೇಷಚೇತನರ ಪಿಂಚಣಿ ಯೋಜನೆ' ಎಂದು ಹಾಗೂ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯನ್ನು 'ಪ್ರಧಾನಮಂತ್ರಿ ಕುಟುಂಬ ನೆರವು ಯೋಜನೆ' ಎಂದು ಮರುನಾಮಕರಣ ಮಾಡಲಾಗಿದೆ.

ಅಂಗವಿಕಲರ ಪಿಂಚಣಿ ಹೆಚ್ಚಳ

ವಿಶೇಷಚೇತನರ ಪಿಂಚಣಿ ಯೋಜನೆಯಡಿ 0ರಿಂದ 79 ವರ್ಷ ವಯಸ್ಸಿನ ಫಲಾನುಭವಿಗಳಿಗೆ ಮಾಸಿಕ 375 ರೂ. ಹಾಗೂ 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾಸಿಕ 625 ರೂ. ನೆರವು ನೀಡಲು ನಿರ್ಧರಿಸಲಾಗಿದೆ.

ಇದರೊಂದಿಗೆ ಪಿಂಚಣಿ ಪಡೆಯಲು ಅಗತ್ಯವಿರುವ ಅಂಗವೈಕಲ್ಯದ ಪ್ರಮಾಣದ ಮಾನದಂಡವನ್ನು ಪ್ರಸ್ತುತ ಶೇ.80ರಿಂದ ಶೇ.40ಕ್ಕೆ ಇಳಿಸಲಾಗಿದೆ. ಪಿಂಚಣಿ ಪಡೆಯಲು ಕನಿಷ್ಠ ವಯೋಮಿತಿಯನ್ನು ಈ ಹಿಂದೆ ಇದ್ದ 18 ವರ್ಷಗಳಿಂದ ಜನನದ ಹಂತಕ್ಕೆ ಇಳಿಸಲಾಗಿದೆ. ಇದರಿಂದ ಅರ್ಹ ವಿಶೇಷಚೇತನರಿಗೆ ಬಾಲ್ಯದಿಂದಲೇ ಪಿಂಚಣಿ ಸೌಲಭ್ಯ ಪಡೆಯಲು ಅವಕಾಶ ದೊರೆಯಲಿದೆ.

ಆದರೆ, ವೃದ್ಧಾಪ್ಯ ಮತ್ತು ವಿಧವಾ ಪಿಂಚಣಿ ಯೋಜನೆಗಳು ಹಾಗೂ ಕುಟುಂಬ ನೆರವು ಯೋಜನೆಗಳನ್ನು ಈಗಿರುವ ಸ್ವರೂಪದಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ.

3.20 ಕೋಟಿ ಫಲಾನುಭವಿಗಳಿಗೆ ಪ್ರಯೋಜನ

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 3.20 ಕೋಟಿ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande