ಮಾ ಬ್ರಹ್ಮಚಾರಿಣಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ನವದೆಹಲಿ, 12 ಅಕ್ಟೋಬರ್ (ಹಿ.ಸ.): ನವರಾತ್ರಿಯ ಎರಡನೇ ದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಾ ಬ್ರಹ್ಮಚಾರಿಣಿಯ ಪೂಜೆ ನೆರವೇರಿಸಿ, ಎಲ್ಲರ ಕಲ್ಯಾಣ ಮತ್ತು ಸಮೃದ್ಧಿಗಾಗಿ ದೇವಿಯ ಆಶೀರ್ವಾದ ಕೋರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದ
प्रधानमंत्री नरेन्द्र मोदी (फाइल फोटो)


ನವದೆಹಲಿ, 12 ಅಕ್ಟೋಬರ್ (ಹಿ.ಸ.):

ನವರಾತ್ರಿಯ ಎರಡನೇ ದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಾ ಬ್ರಹ್ಮಚಾರಿಣಿಯ ಪೂಜೆ ನೆರವೇರಿಸಿ, ಎಲ್ಲರ ಕಲ್ಯಾಣ ಮತ್ತು ಸಮೃದ್ಧಿಗಾಗಿ ದೇವಿಯ ಆಶೀರ್ವಾದ ಕೋರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ತಪಸ್ಸು, ತ್ಯಾಗ ಮತ್ತು ದೃಢಸಂಕಲ್ಪದ ಪ್ರತೀಕವಾಗಿರುವ ಮಾ ಬ್ರಹ್ಮಚಾರಿಣಿ ಎಲ್ಲರಿಗೂ ಧೈರ್ಯ ಮತ್ತು ಆತ್ಮಸಂಯಮದ ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಇದೇ ಸಂದರ್ಭದಲ್ಲಿ ದೇವಿಯ ಮಹಿಮೆಯನ್ನು ಸಾರುವ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ. ತನ್ನ ಶಕ್ತಿಯಿಂದ ಇಡೀ ಬ್ರಹ್ಮಾಂಡವನ್ನು ವ್ಯಾಪಿಸಿರುವ ಹಾಗೂ ಸಮಸ್ತ ದೇವತೆಗಳ ಶಕ್ತಿಗಳ ಸಮಷ್ಟಿ ಸ್ವರೂಪವಾಗಿರುವ ದೇವಿಯನ್ನು ಎಲ್ಲ ದೇವತೆಗಳು ಮತ್ತು ಮಹರ್ಷಿಗಳು ಪೂಜಿಸುತ್ತಾರೆ ಎಂಬುದು ಈ ಶ್ಲೋಕದ ಭಾವಾರ್ಥವಾಗಿದೆ.

ಈ ಶ್ಲೋಕದ ಅರ್ಥವನ್ನು ವಿವರಿಸಿದ ಪ್ರಧಾನಿ ಮೋದಿ, ಎಲ್ಲ ದೇವತೆಗಳು ಮತ್ತು ಮಹಾನ್ ಋಷಿಗಳು ಮಾ ಅಂಬಿಕೆಯ ದಿವ್ಯಶಕ್ತಿಯನ್ನು ಪ್ರಾರ್ಥಿಸುತ್ತಾರೆ. ದೇವಿಯ ಆಶೀರ್ವಾದವು ಎಲ್ಲರಿಗೂ ಶುಭ ಮತ್ತು ಸುಖವನ್ನು ತರಲಿ ಎಂಬುದು ಈ ಪ್ರಾರ್ಥನೆಯ ಆಶಯವಾಗಿದೆ ಎಂದು ತಿಳಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande