ಛತ್ತಿಸಗಢದಲ್ಲಿ ೨೬ ನಕ್ಸಲರ ಶರಣಾಗತಿ
ಸುಕ್ಮಾ, 07 ಜನವರಿ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಬುಧವಾರ 26 ನಕ್ಸಲೀಯರು ಶರಣಾಗಿದ್ದಾರೆ. ಇವರಲ್ಲಿ 13 ನಕ್ಸಲೀಯರ ಮೇಲೆ ಒಟ್ಟು ರೂ. 65 ಲಕ್ಷಕ್ಕೂ ಅಧಿಕ ಬಹುಮಾನ ಘೋಷಿಸಲಾಗಿತ್ತು. ಶರಣಾದವರಲ್ಲಿ 7 ಮಹಿಳೆಯರು ಸೇರಿದ್ದಾರೆ. ಸುಕ್ಮಾ ಪೊಲೀಸರು ಜಾರಿಗೊಳಿಸಿರುವ “ಪೂನಾ
Surrender


ಸುಕ್ಮಾ, 07 ಜನವರಿ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಬುಧವಾರ 26 ನಕ್ಸಲೀಯರು ಶರಣಾಗಿದ್ದಾರೆ. ಇವರಲ್ಲಿ 13 ನಕ್ಸಲೀಯರ ಮೇಲೆ ಒಟ್ಟು ರೂ. 65 ಲಕ್ಷಕ್ಕೂ ಅಧಿಕ ಬಹುಮಾನ ಘೋಷಿಸಲಾಗಿತ್ತು. ಶರಣಾದವರಲ್ಲಿ 7 ಮಹಿಳೆಯರು ಸೇರಿದ್ದಾರೆ.

ಸುಕ್ಮಾ ಪೊಲೀಸರು ಜಾರಿಗೊಳಿಸಿರುವ “ಪೂನಾ ಮಾರ್ಗೆಮ್” ಶರಣಾಗತಿ–ಪುನರ್ವಸತಿ ಅಭಿಯಾನ ಮತ್ತು ಹೆಚ್ಚಿದ ಪೊಲೀಸ್ ಒತ್ತಡದ ಪರಿಣಾಮವಾಗಿ ಈ ಶರಣಾಗತಿ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ. ಶರಣಾದ ಎಲ್ಲರಿಗೂ ತಕ್ಷಣ ರೂ.50,000 ಪ್ರೋತ್ಸಾಹ ಧನ ನೀಡಲಾಗಿದ್ದು, ಸರ್ಕಾರದ ನೀತಿಯಂತೆ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಶರಣಾದವರಲ್ಲಿ ಕಂಪನಿ, ಪ್ಲಟೂನ್ ಕಮಾಂಡರ್‌ಗಳು, ಏರಿಯಾ ಕಮಿಟಿ ಸದಸ್ಯರು, ಮಿಲಿಟಿಯಾ ಹಾಗೂ ಆರ್‌ಪಿಸಿ ಘಟಕದ ನಾಯಕರು ಸೇರಿದ್ದು, ಕೆಲವರ ಮೇಲೆ ರೂ.10 ಲಕ್ಷವರೆಗೆ ಬಹುಮಾನ ಇತ್ತು. ಎಲ್ಲರೂ ಹಿಂಸಾತ್ಮಕ ಮಾರ್ಗವನ್ನು ತ್ಯಜಿಸಿ ಸಾಮಾನ್ಯ ಜೀವನಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಈ ಶರಣಾಗತಿ ಘಟನೆ ನಕ್ಸಲ್ ವಿರೋಧಿ ಕಾರ್ಯಾಚರಣೆ ಹಾಗೂ ಪುನರ್ವಸತಿ ನೀತಿಯ ಯಶಸ್ಸಿಗೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande