
ನವದೆಹಲಿ, 07 ಜನವರಿ (ಹಿ.ಸ.) :
ಆ್ಯಂಕರ್ : ಭಾರತದ ಮುಖ್ಯ ಚುನಾವಣಾ ಆಯುಕ್ತ ಹಾಗೂ ಅಂತಾರಾಷ್ಟ್ರೀಯ ಐಡಿಯಾ ಅಧ್ಯಕ್ಷರಾದ ಜ್ಞಾನೇಶ್ ಕುಮಾರ್ ಅವರು ಬುಧವಾರ ದೆಹಲಿಯ ನಿರ್ವಾಚನ ಸದನದಲ್ಲಿ ಭಾರತದ ಜರ್ಮನ್ ರಾಯಭಾರಿ ಡಾ. ಫಿಲಿಪ್ ಅಕೆರ್ಮನ್ ಅವರನ್ನು ಭೇಟಿ ಮಾಡಿದರು.
ಈ ಸಭೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ಚುನಾವಣಾ ಪ್ರಕ್ರಿಯೆಗಳ ಬಲವರ್ಧನೆ ಹಾಗೂ ಭಾರತ–ಜರ್ಮನಿ ನಡುವಿನ ಸಾಂಸ್ಥಿಕ ಸಹಕಾರವನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯಿತು. ಎರಡೂ ದೇಶಗಳ ಚುನಾವಣಾ ವ್ಯವಸ್ಥೆಗಳ ಅನುಭವ ವಿನಿಮಯ ಮತ್ತು ತಾಂತ್ರಿಕ ಸಹಕಾರದ ಸಾಧ್ಯತೆಗಳ ಕುರಿತು ಮಾತುಕತೆ ನಡೆದಿರುವುದು ತಿಳಿದುಬಂದಿದೆ.
ಭಾರತೀಯ ಚುನಾವಣಾ ಆಯೋಗದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಭೇಟಿಗೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಇಬ್ಬರೂ ನಾಯಕರು ಆತ್ಮೀಯವಾಗಿ ಕೈಕುಲುಕುತ್ತಾ ಚರ್ಚೆಯಲ್ಲಿ ತೊಡಗಿರುವುದು ಕಾಣಿಸುತ್ತದೆ.
ಈ ಭೇಟಿ ಪ್ರಜಾಪ್ರಭುತ್ವದ ಸಂಸ್ಥೆಗಳ ನಡುವೆ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯೆಂದು ರಾಜಕೀಯ ವಲಯದಲ್ಲಿ ಪರಿಗಣಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa