ಆಫ್ಕಾನ್ : ಬೆನಿನ್‌ ವಿರುದ್ದ ಈಜಿಪ್ಟಗೆ ೩-೧ ಅಂತರದ ಜಯ
ಅಗಾದಿರ್, 06 ಜನವರಿ (ಹಿ.ಸ.) : ಆ್ಯಂಕರ್ : ಈಜಿಪ್ಟ್ ನಾಯಕ ಮೊಹಮ್ಮದ್ ಸಲಾಹ್ 124ನೇ ನಿಮಿಷದಲ್ಲಿ ಗಳಿಸಿದ ನಿರ್ಣಾಯಕ ಗೋಲು ಈಜಿಪ್ಟ್‌ಗೆ ಆಫ್ರಿಕಾ ಕಪ್ ಆಫ್ ನೇಷನ್ಸ್ 2025ರ ಅಂತಿಮ-16 ಹಂತದಲ್ಲಿ ಸ್ಥಾನ ಖಚಿತಪಡಿಸಿತು. ಬೆನಿನ್ ವಿರುದ್ಧ ಹೆಚ್ಚುವರಿ ಸಮಯದಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಈಜಿಪ್ಟ
Sports-Football-AFCON-Egypt


ಅಗಾದಿರ್, 06 ಜನವರಿ (ಹಿ.ಸ.) :

ಆ್ಯಂಕರ್ : ಈಜಿಪ್ಟ್ ನಾಯಕ ಮೊಹಮ್ಮದ್ ಸಲಾಹ್ 124ನೇ ನಿಮಿಷದಲ್ಲಿ ಗಳಿಸಿದ ನಿರ್ಣಾಯಕ ಗೋಲು ಈಜಿಪ್ಟ್‌ಗೆ ಆಫ್ರಿಕಾ ಕಪ್ ಆಫ್ ನೇಷನ್ಸ್ 2025ರ ಅಂತಿಮ-16 ಹಂತದಲ್ಲಿ ಸ್ಥಾನ ಖಚಿತಪಡಿಸಿತು. ಬೆನಿನ್ ವಿರುದ್ಧ ಹೆಚ್ಚುವರಿ ಸಮಯದಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಈಜಿಪ್ಟ್ 3–1 ಅಂತರದ ಜಯ ಸಾಧಿಸಿತು.

ಪಂದ್ಯದಲ್ಲಿ ಕೊನೆಯವರೆಗೂ ಕಠಿಣ ಪೈಪೋಟಿ ನೀಡಿದ ಬೆನಿನ್, ಅನುಭವ ಮತ್ತು ಗುಣಮಟ್ಟದ ಮುಂದೆ ಕೊನೆಗೆ ತಲೆಬಾಗಬೇಕಾಯಿತು. ನಿಯಮಿತ ಸಮಯದಲ್ಲಿ ಎರಡೂ ತಂಡಗಳು ತಲಾ ಒಂದು ಗೋಲು ಗಳಿಸಿ ಸಮಬಲ ಸಾಧಿಸಿದ್ದವು.

ದ್ವಿತೀಯಾರ್ಧದಲ್ಲಿ ಮಾರ್ವಾನ್ ಅಟ್ಟಿಯಾ ದೂರದಿಂದ ನಿಖರವಾದ ಶಾಟ್ ಮೂಲಕ ಈಜಿಪ್ಟ್‌ಗೆ ಮುನ್ನಡೆ ನೀಡಿದರು. ಆದರೆ 83ನೇ ನಿಮಿಷದಲ್ಲಿ ಜೋಡೆಲ್ ಡೊಸ್ಸೌ ಗೋಲು ಬಾರಿಸುವ ಮೂಲಕ ಬೆನಿನ್ ಸಮಬಲ ಸಾಧಿಸಿತು.

ಹೆಚ್ಚುವರಿ ಸಮಯದಲ್ಲಿ ಯಾಸರ್ ಇಬ್ರಾಹಿಂ ಅಟ್ಟಿಯಾ ನೀಡಿದ ಕ್ರಾಸ್‌ಗೆ ಹೆಡರ್ ಮೂಲಕ ಗೋಲು ಬಾರಿಸಿ ಈಜಿಪ್ಟ್‌ಗೆ ಮತ್ತೆ ಮುನ್ನಡೆ ಒದಗಿಸಿದರು. ನಂತರ 124ನೇ ನಿಮಿಷದಲ್ಲಿ ಸಲಾಹ್ ಅವರ ಅದ್ಭುತ ದೀರ್ಘಶ್ರೇಣಿಯ ಸ್ಟ್ರೈಕ್ ಪಂದ್ಯಕ್ಕೆ ತೆರೆ ಎಳೆದಿತು. ಇದು ಆಫ್ಕಾನ್ ಸಲಾಹ್ ಅವರ 10ನೇ ಗೋಲು ಆಗಿದೆ.

ದಾಖಲೆಯ ಏಳು ಬಾರಿಯ ಚಾಂಪಿಯನ್ ಈಜಿಪ್ಟ್, ಶನಿವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಐವರಿ ಕೋಸ್ಟ್ ಅಥವಾ ಬುರ್ಕಿನಾ ಫಾಸೊ ತಂಡವನ್ನು ಎದುರಿಸಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande