ಕುವೆಂಪು ಕೊಡುಗೆ ಅಪಾರ : ಜಿಲ್ಲಾಧಿಕಾರಿ ಲತಾಕುಮಾರಿ
ಹಾಸನ, 05 ಜನವರಿ (ಹಿ.ಸ.) : ಆ್ಯಂಕರ್ : ಕನ್ನಡ ಸಾಹಿತ್ಯ ಮತ್ತು ಕನ್ನಡ ಭಾಷೆ ಇಷ್ಟು ಉತ್ತಂಗ ಸ್ಥಿತಿಗೆ ಏರಲು ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರವಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ಹಾಸನಾಂಬ ಕ
Dc


ಹಾಸನ, 05 ಜನವರಿ (ಹಿ.ಸ.) :

ಆ್ಯಂಕರ್ : ಕನ್ನಡ ಸಾಹಿತ್ಯ ಮತ್ತು ಕನ್ನಡ ಭಾಷೆ ಇಷ್ಟು ಉತ್ತಂಗ ಸ್ಥಿತಿಗೆ ಏರಲು ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರವಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಸಾರಿದರು ಜಾತಿ ಭೇದವಿಲ್ಲ ಲಿಂಗ ಭೇದವಿಲ್ಲ ಮೇಲು-ಕೀಳು ಎಂಬ ಭಾವನೆಗಳಿಲ್ಲ ಎಲ್ಲಾ ಮನುಷ್ಯರೆಲ್ಲರೂ ಒಂದೇ, ನಾವು ಭಾರತೀಯರು ಬೇರೊಂದು ದೇಶದ ಪ್ರಜೆ ಎಂಬ ಅಡೆ ತಡೆ ಇಲ್ಲ, ಎಲ್ಲರು ವಿಶ್ವಮಾನವರು ಎಂದು ಕುವೆಂಪು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಅವರ ಮೊದಲ ಪ್ರೀತಿ ಮೊದಲ ದೈವ ಕನ್ನಡವೇ ಆಗಿತ್ತು ಅವರಿಗೆ ಕನ್ನಡವೇ ಉಸಿರಾಗಿತ್ತು ಎಂಬುದನ್ನು ನಾವು ಅವರ ಬರವಣಿಗೆ ಮೂಲಕ ತಿಳಿದುಕೊಳ್ಳಬಹುದು ಕುವೆಂಪು ಅವರು ಬರೆದಿರುವಂತಹ ಪ್ರಮುಖ ಕಾದಂಬರಿಗಳಲ್ಲಿ ಕಾನೂನು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಪ್ರಮುಖ ಕಾದಂಬರಿಗಳಾಗಿದ್ದು ನಾವೇಲ್ಲರೂ ಕುವೆಂಪು ರವರ ಬರವಣೆಯಲ್ಲಿ ಕಾನೂನು ಹೆಗ್ಗಡತಿ ಮಹಿಳೆಯ ಪರವಾಗಿ ವಿವರಿಸಿರುವುದನ್ನು ಕಾಣುತ್ತೇವೆ ಎಂದ ಅವರು ಕುವೆಂಪು ನಮ್ಮ ಕನ್ನಡ ನಾಡಿನ ಆಸ್ತಿ ಮಾತ್ರವಲ್ಲ ದೇಶದ ಆಸ್ತಿ ಮಾತ್ರವಲ್ಲ ಇಡೀ ಜಗತ್ತಿನ ಆಸ್ತಿ. ಪ್ರಾಪಂಚಿಕ ಜ್ಞಾನ ತಿಳಿಯಬೇಕೆಂದರೆ ಕನ್ನಡ ಸಾಹಿತ್ಯ ತುಂಬಾ ಮುಖ್ಯ ವಿಶ್ವಮಾನವರ ಸಂದೇಶವನ್ನು ಪುಸ್ತಕದಲ್ಲಿ ಮಾತ್ರವಲ್ಲ ಅವರ ಜೀವನದಲ್ಲೂ ಕೂಡ ಅಳವಡಿಸಿಕೊಂಡಿದ್ದರು ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande