
ವಿಜಯಪುರ, 24 ಜನವರಿ (ಹಿ.ಸ.) :
ಆ್ಯಂಕರ್ : ಕಬ್ಬು ತುಂಬಿದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಕ್ರಾಸ್ ಹತ್ತಿರ ನಡೆದಿದೆ.
ಹಣಮಂತ ಪಾಳ್ಯದ (21) ಮೃತಪಟ್ಟ ಬೈಕ್ ಸವಾರ. ಮೃತ ಹಣಮಂತ ಸಾತಿಹಾಳ ಗ್ರಾಮ ನಿವಾಸಿ. ಅಲ್ಲದೇ,
ದೇವರಹಿಪ್ಪರಗಿ ಪಟ್ಟಣದಿಂದ ಸ್ವಗ್ರಾಮ ಸಾತಿಹಾಳಗೆ ಹೋಗುವ ವೇಳೆ ಅಪಘಾತ ಸಂಭವಿಸಿದೆ.
ಕಬ್ಬು ತುಂಬಿದ ಲಾರಿಗೆ ಬೈಕ್ ಡಿಕ್ಕಿಯಾಗಿದೆ. ಈ ವೇಳೆ ತಲೆಗೆ ತೀವ್ರ ಗಾಯ, ರಕ್ತಸಾವ್ರದಿಂದ ಹಣಮಂತ ಸಾವನ್ನಪ್ಪಿದ್ದಾನೆ.
ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande