ಸಹಕಾರ ಇಲಾಖೆಯ ಕಾರ್ಯಕ್ಕೆ ಶ್ಲ್ಯಾಘನೆ
ಕೊಪ್ಪಳ, 24 ಜನವರಿ (ಹಿ.ಸ.) : ಆ್ಯಂಕರ್ : ಸಹಕಾರ ಇಲಾಖೆಯು ಇತ್ತಿಚಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯಲ್ಲಿ ವಿವಿಧ ತರಹದ ಸಹಕಾರ ಸಂಘಗಳ ನೊಂದಣಿಯ ಜೊತೆಗೆ ವಿವಿಧ ಅನುದಾನದದ ಬಳಕೆಗೆ ಇಲಾಖೆಯು ಒತ್ತು ನೀಡುತ್ತಿದ್ದು ಇದು ಒಳ್ಳೆಯ ಬೆಳವಣಿಗೆ ಎಂದು ಕೊಪ್ಪಳ ಜಿಲ್ಲಾ ಸಹಕಾ
Appreciation for the work of the Cooperation Department


ಕೊಪ್ಪಳ, 24 ಜನವರಿ (ಹಿ.ಸ.) :

ಆ್ಯಂಕರ್ : ಸಹಕಾರ ಇಲಾಖೆಯು ಇತ್ತಿಚಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯಲ್ಲಿ ವಿವಿಧ ತರಹದ ಸಹಕಾರ ಸಂಘಗಳ ನೊಂದಣಿಯ ಜೊತೆಗೆ ವಿವಿಧ ಅನುದಾನದದ ಬಳಕೆಗೆ ಇಲಾಖೆಯು ಒತ್ತು ನೀಡುತ್ತಿದ್ದು ಇದು ಒಳ್ಳೆಯ ಬೆಳವಣಿಗೆ ಎಂದು ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ ಶೇಖರಗೌಡ ಮಾಲಿ ಪಾಟೀಲ್ ಅವರು ನಗರದ ಜಿಲ್ಲಾ ಸಹಕಾರ ಸಭಾಂಗಣದಲ್ಲಿ ಕರ್ನಾಟಕ ಸರಕಾರ, ಸಹಕಾರ ಇಲಾಖೆ, ಕೊಪ್ಪಳ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಕೊಪ್ಪಳ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ಆರ್.ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ರಾಯಚೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಹಕಾರ ಇಲಾಖೆಯ/ಲೆಕ್ಕಪರಿಶೋಧನಾ ಇಲಾಖೆ/ ಆರ್.ಕೆ.ಡಿ.ಸಿ.ಸಿ. ಬ್ಯಾಂಕ್ ಹಾಗೂ ಹಾಲು ಒಕ್ಕೂಟದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ಲ್ಯಾಘನೆ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ನಿನ ಉಪಾಧ್ಯಕ್ಷರಾದ ಹಾಲಯ್ಯ ಹುಡೇಜಾಲಿ ಅವರು ಜ್ಯೋತಿ ಬೆಳಗಿಸುವದರ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಇಂಥಹ ತರಬೇತಿಯಿಂದ ಆನ್‍ಲೈನ್ ವ್ಯವಸ್ಥೆಯಲ್ಲಿ ಸಹಕಾರ ಸಂಘಗಳನ್ನು ಇನ್ನಷ್ಟು ಬಲಪಡಿಸುವ ಕೆಲಸ ಮಾಡಬೇಕಾಗಿದೆ ಎಂದರು .

ಇನ್ನೋರ್ವ ಅತಿಥಿಗಳಾದ ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ ಗಣಪತಿ ಬಗಲಿ ರವರು ಮಾತನಾಡುತ್ತಾ ಇಂಹಹ ತರಬೇತಿಯಿಂದ ನಾವು ಇನ್ನೋಷ್ಟು ಕಲಿಕೆಯ ಜೊತೆಗೆ ಸಹಕಾರ ಸಂಘಗಳನ್ನು ಬಲಪಡಿಸಲು ಅನೇಕ ಯೋಜನೆಗಳನ್ನು ಸಹಕಾರ ಸಂಘಗಳಿಗೆ ಮುಟ್ಟಿಸುವ ಕಾರ್ಯಕ್ಕೆ ನಾವು ಮುಂದಾಗಬೇಕಾಗಿದೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರುಗಳಾದ ತೋಟಪ್ಪ ಹೆಚ್ ಕಾಮನೂರ, ರಾಜೀವ್ ಮಾದಿನೂರು, ಭೀಮರಡ್ಡಿ ಶ್ಯಾಡ್ಲಗೇರಿ, ಮಾಜಿ ನಿರ್ದೇಶಕರಾದ ಗವಿಸಿದ್ದೇಶ್ ಹೆಚ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸಜ್ಜನರ ಪ್ರಕಾಶ, ಸಹಕಾರ ಸಂಘಗಳ ಸಹಾಯಕ ನಿರ್ದೇಶಕರಾದ ವಿಜೇಂಯದ್ರ, ಯೂನಿಯನ್ನಿನ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ, ಅಕ್ಷಯ್‍ಕುಮಾರ, ಮತ್ತು ವ್ಯವಸ್ಥಾಪಕರಾದ ರಾಜಶೇಖರ ಎಂ. ಹೊಸಮನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಕುರಿತು ಉಪನ್ಯಾಸಕರಗಳು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಸಂಗೀತ ರವರು ಪ್ರಾರ್ಥಿಸಿದರು. ಯೂನಿಯನ್ನಿನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಅಕ್ಷಯ್‍ಕುಮಾರ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಸಹಕಾರ ಯೂನಿಯನ್ನಿನ ವ್ಯವಸ್ಥಾಪಕರಾದ ರಾಜಶೇಖರ ಎಂ. ಹೊಸಮನಿ ಇವರು ಗಣ್ಯರನ್ನು ಸ್ವಾಗತಿ, ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಹಾಲು ಒಕ್ಕೂಟದ ಸಮಾಲೋಚಕರಾದ ಬಸವರಾಜ ಯರದೊಡ್ಡಿ ಇವರು ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande