
ಬಳ್ಳಾರಿ, 24 ಜನವರಿ (ಹಿ.ಸ.) :
ಆ್ಯಂಕರ್ : ನಗರದ ಹಿರಾಳ್ ಕುಡಂ ರಸ್ತೆಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 2026-27ನೇ ಸಾಲಿಗೆ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಯರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಬಳ್ಳಾರಿ ಪೂರ್ವ ಮತ್ತು ಪಶ್ಚಿಮ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆ.25 ಕೊನೆಯ ದಿನ. ಪ್ರವೇಶ ಪರೀಕ್ಷೆ ಮಾ.15 ರಂದು ನಡೆಯಲಿದೆ. ಪ್ರವೇಶ ಪತ್ರ ಡೌನ್ ಲೋಡ್ ಮಾ.01 ರ ನಂತರ.
ಅರ್ಜಿ ಭರ್ತಿ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಪೆÇೀಷಕರ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಮೆಸೇಜ್ ಹೋಗುತ್ತದೆ. ಹಾಗಾಗಿ ಸೈಬರ್ ಸೆಂಟರ್ ಅವರ ಮೊಬೈಲ್ ನಂಬರ್ ನಮೂದಿಸಬಾರದು.
ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಪಾಲಕರು ತಮ್ಮ ಮಕ್ಕಳ ಶಾಲೆಯ ಎಸ್.ಟಿ.ಎಸ್ ನಲ್ಲಿ ದಾಖಲಾತಿ ಮಾಹಿತಿ ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕು. ಎಸ್.ಟಿ.ಎಸ್ ಸಂಖ್ಯೆ ನಮೂದಿಸಿದ ತಕ್ಷಣ ಮಾಹಿತಿ ಅರ್ಜಿ ಫಾರಂ ನಲ್ಲಿ ಅಪ್ಲೋಡ್ ಆಗುತ್ತದೆ. ತಪ್ಪು ಮಾಹಿತಿ ಸಲ್ಲಿಸಿದಲ್ಲಿ ದಾಖಲಾತಿ ಆಗುವುದಿಲ್ಲ. ಇದ್ದಕ್ಕೆ ಪಾಲಕರೇ ಹೊಣೆಯಾಗಿರುತ್ತಾರೆ.
ಆಯ್ಕೆ ಪರೀಕ್ಷೆಗೆ 3 ರಿಂದ 5ನೇ ಪಠ್ಯಪುಸ್ತಕ, ಕಲಿಕಾ ಚೇತರಿಕೆ ಕಲಿಕಾಂಶಗಳನ್ನು ಆಧರಿಸಿ ಕನ್ನಡ (ಶೇ.16), ಗಣಿತ (ಶೇ.16), ಆಂಗ್ಲ ಭಾಷೆ (ಶೇ.16), ಪರಿಸರ ಅಧ್ಯಯನ (ಶೇ.16), ಸಮಾಜ ವಿಜ್ಞಾನ (ಸಾಮಾನ್ಯ ಜ್ಞಾನ) (ಶೇ.10) ಮತ್ತು ಸಾಮಾನ್ಯ ಬೌದ್ಧಿಕ ಸಾಮಥ್ರ್ಯ (ಶೇ.10) ಇವುಗಳನ್ನು ಪರಿಗಣಿಸಲಾಗುವುದು.
ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ ಪ್ರಶ್ನೆಗಳು ಹೊಂದಿದ್ದು, ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿರುತ್ತವೆ. ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೆ ತಲಾ 01 ಅಂಕದಂತೆ ಇದ್ದು, 100 ಪ್ರಶ್ನೆಗಳಿರುತ್ತವೆ.
ಬೇಕಾದ ದಾಖಲೆಗಳು:
ವಿದ್ಯಾರ್ಥಿಯ ಎಸ್.ಎ.ಟಿ.ಎಸ್ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ (ಪ್ರಸ್ತುತ ಚಾಲ್ತಿಯ), ಆಧಾರ್ ಕಾರ್ಡ್ (ಸ್ಕ್ಯಾನ್ ಮಾಡಲು), ಪಾಸ್ ಪೆÇೀರ್ಟ್ ಸೈಜ್ ಫೋಟೋ-1, ವ್ಯಾಸಂಗ ದೃಢೀಕರಣ ಪತ್ರ, ಚಾಲ್ತಿಯಲ್ಲಿನ ಮೊಬೈಲ್ ಸಂಖ್ಯೆ.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಪಶ್ಚಿಮ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸಿದ್ದಲಿಂಗ ಮೂರ್ತಿ-ಮೊ.9480695067 ಮತ್ತು ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಯ ಸತ್ಯ ನಾರಾಯಣ ಎ.ಕೆ-ಮೊ.9740738762 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್