ಕರ್ನಾಟಕ–ಲಿಚೆನ್‌ಸ್ಟೈನ್ ಕೈಗಾರಿಕಾ ಹಾಗೂ ಹೂಡಿಕೆ ಸಹಕಾರ ಸಂವಾದ
ದಾವೋಸ್, 23 ಜನವರಿ (ಹಿ.ಸ.) : ಆ್ಯಂಕರ್ : ಕರ್ನಾಟಕ ಮತ್ತು ಲಿಚೆನ್‌ಸ್ಟೈನ್ ನಡುವಿನ ಕೈಗಾರಿಕಾ ಹಾಗೂ ಹೂಡಿಕೆ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ, ಲಿಚೆನ್‌ಸ್ಟೈನ್‌ನ ಪ್ರಧಾನ ಮಂತ್ರಿ ಶ್ರೀಮತಿ ಬ್ರಿಜಿಟ್ ಹಾಸ್ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಈವ್ ಬೆಕ್ ಅವರೊಂದಿಗೆ ಕೈಗಾ
Meet


ದಾವೋಸ್, 23 ಜನವರಿ (ಹಿ.ಸ.) :

ಆ್ಯಂಕರ್ : ಕರ್ನಾಟಕ ಮತ್ತು ಲಿಚೆನ್‌ಸ್ಟೈನ್ ನಡುವಿನ ಕೈಗಾರಿಕಾ ಹಾಗೂ ಹೂಡಿಕೆ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ, ಲಿಚೆನ್‌ಸ್ಟೈನ್‌ನ ಪ್ರಧಾನ ಮಂತ್ರಿ ಶ್ರೀಮತಿ ಬ್ರಿಜಿಟ್ ಹಾಸ್ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಈವ್ ಬೆಕ್ ಅವರೊಂದಿಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಮಹತ್ವದ ಸಂವಾದ ನಡೆಸಿದರು.

ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಆಧಾರವಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರುವ ಲಿಚೆನ್‌ಸ್ಟೈನ್‌ನ ಆರ್ಥಿಕ ವ್ಯವಸ್ಥೆ, ಉನ್ನತ ಹಾಗೂ ನಿಖರ ಉತ್ಪಾದನೆ, ಅಡ್ವಾನ್ಸ್ಡ್ ಮೆಷಿನರಿ ಮತ್ತು ವಿಶೇಷ ಕೈಗಾರಿಕಾ ಕ್ಷೇತ್ರಗಳಲ್ಲಿ ಹೊಂದಿರುವ ಬಲಗಳು, ಕರ್ನಾಟಕದ ಉತ್ಪಾದನಾ ಹಾಗೂ ನವೀನತಾ ಪರಿಸರ ವ್ಯವಸ್ಥೆಗೆ ಅತ್ಯಂತ ಹೊಂದಿಕೆಯಾಗುತ್ತವೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಹಾಗೂ ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ ಚೌಕಟ್ಟಿನಡಿ ಕರ್ನಾಟಕ–ಲಿಚೆನ್‌ಸ್ಟೈನ್ ಸಹಕಾರವನ್ನು ಇನ್ನಷ್ಟು ಗಾಢಗೊಳಿಸಲು ಕೈಗೊಳ್ಳಬಹುದಾದ ಪ್ರಾಯೋಗಿಕ ಹಾಗೂ ತಂತ್ರಾತ್ಮಕ ಮಾರ್ಗಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ಇದೇ ವೇಳೆ, ಕರ್ನಾಟಕದ ಕೈಗಾರಿಕಾ ಹಾಗೂ ನವೀನತಾ ಪಾಲುದಾರರೊಂದಿಗೆ ಹೂಡಿಕೆ ಮತ್ತು ತಂತ್ರಜ್ಞಾನ ಸಹಕಾರದ ಹೊಸ ಅವಕಾಶಗಳನ್ನು ಅನ್ವೇಷಿಸುವ ಉದ್ದೇಶದಿಂದ, ಪ್ರಧಾನ ಮಂತ್ರಿ ಬ್ರಿಜಿಟ್ ಹಾಸ್ ಹಾಗೂ ಅವರ ನಿಯೋಗವನ್ನು ಕರ್ನಾಟಕಕ್ಕೆ ಭೇಟಿ ನೀಡುವಂತೆ ಸಚಿವ ಎಂ.ಬಿ. ಪಾಟೀಲ ಅವರು ಅಧಿಕೃತ ಆಹ್ವಾನ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande