ಆರೋಗ್ಯವೇ ಮುಖ್ಯ : ಸಂಗಣ್ಣ ಕರಡಿ
ಕೊಪ್ಪಳ, 23 ಜನವರಿ (ಹಿ.ಸ.) : ಆ್ಯಂಕರ್ : ನಗರಕ್ಕೆ ಹೊಂದಿಕೊಂಡ ಬಲ್ಡೋಟ ಕಾರ್ಖಾನೆಯ ಲೈಸೆನ್ಸ್ ರದ್ಧಾಗಬೇಕು. ಹಲವು ವರ್ಷಗಳಿಂದ ನನ್ನ ಕವಲೂರು ಬಡಾವಣೆಯ ಮನೆ ದೂಳು ಬಾಧಿತವಾಗಿದೆ. ಸುತ್ತಲೂ ಇರುವ ವಾಸದ ಬಡಾವಣೆಗಳ ಜನರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಂಸದರಾದ ಸಂಗಣ್
ಆರೋಗ್ಯವೇ ಮುಖ್ಯ; ಸಂಗಣ್ಣ ಕರಡಿ


ಆರೋಗ್ಯವೇ ಮುಖ್ಯ; ಸಂಗಣ್ಣ ಕರಡಿ


ಕೊಪ್ಪಳ, 23 ಜನವರಿ (ಹಿ.ಸ.) :

ಆ್ಯಂಕರ್ : ನಗರಕ್ಕೆ ಹೊಂದಿಕೊಂಡ ಬಲ್ಡೋಟ ಕಾರ್ಖಾನೆಯ ಲೈಸೆನ್ಸ್ ರದ್ಧಾಗಬೇಕು. ಹಲವು ವರ್ಷಗಳಿಂದ ನನ್ನ ಕವಲೂರು ಬಡಾವಣೆಯ ಮನೆ ದೂಳು ಬಾಧಿತವಾಗಿದೆ. ಸುತ್ತಲೂ ಇರುವ ವಾಸದ ಬಡಾವಣೆಗಳ ಜನರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಂಸದರಾದ ಸಂಗಣ್ಣ ಕರಡಿ ಹೇಳಿದರು.

ನಗರಸಭೆ ಪಕ್ಕದ ವಾಣಿಜ್ಯ ಸಂಕೀರ್ಣದ ಹತ್ತಿರ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಹೋರಾಟ 85ನೇ ದಿನದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಹೋರಾಟವು ನಗರದ ಒಂದೂವರೆ ಲಕ್ಷ, 20 ಹಳ್ಳಿಗಳ 50 ಸಾವಿರ ಜನರ ಜೀವ, ಆರೋಗ್ಯಕ್ಕೆ ಸಂಬಂಧಿಸಿದೆ. 85ನೇ ದಿನದ ಈ ಹೋರಾಟ ತಾರ್ಕಿಕವಾಗಿ ಜಯದೊಂದಿಗೆ ಮುಕ್ತಾಯವಾಗಬೇಕಿದೆ ಎಂದರು.

ಕಾರ್ಖಾನೆ ಮಾಲಿನ್ಯ ಗಾಳಿ, ನೀರು, ಅಂತರ್ಜಾಲದಲ್ಲಿ ಸೆರಿಕೊಂಡಿದೆ. ಬಸಾಪುರ ಕೆರೆ ಬಲ್ಡೋಟ ಅತಿಕ್ರಮಿಸಿದ್ದು ಮುಕ್ತವಾಗಬೇಕು. ಜನ ಜಾನುವಾರು ನೀರು ಕುಡಿಯುವಂತಾಗಬೇಕು. ಜಿಲ್ಲಾ ಮಂತ್ರಿ ಶಿವರಾಜ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಸಂಸದರಾದ ರಾಜಶೇಖರ ಹಿಟ್ನಾಳ, ಜನಾರ್ಧನರಡ್ಡಿ, ದೊಡ್ಡನಗೌಡ ಪಾಟೀಲ್, ಹೇಮಲತಾ ನಾಯಕ ಹಾಗೂ ಜಿಲ್ಲೆಯ ವಿರೋಧ ಪಕ್ಷದ ನಾಯಕರು, ಹೋರಾಟ ವೇದಿಕೆಯ ಮುಖಂಡರು ಸೇರಿ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಒಂದು ಸಭೆಯನ್ನು ಕರೆಯುವ ವ್ಯವಸ್ಥೆ ಮಾಡಿಸಲು ಪ್ರಯತ್ನ ಮಾಡುತ್ತೇನೆ. ಮುಖ್ಯಮಂತ್ರಿಗಳ ಮುಂದೆ ಸರ್ವಪಕ್ಷ ಮತ್ತು ಹೋರಾಟದ ಮುಖಂಡರ ನಿಯೋಗ ತೆಗೆದುಕೊಂಡು ಹೋಗೋಣ. ಮಾರ್ಚ್ 3ರ ಒಳಗಾಗಿ ಇತ್ಯರ್ಥಪಡಿಸಲು ಪ್ರಯೋತ್ನಿಸೋಣ ಎಂದರು.

ಗವಿಸಿದ್ದೇಶ್ವರ ನರ್ಸಿಂಗ್ ಕಾಲೇಜು ಉಪನ್ಯಾಸಕರಾದ ಕೆ.ಎಸ್. ಸ್ವಾತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ್, ಘಟಪ್ರಭ ಕೇಂದ್ರ ಮಾನವ ಬಂಧುತ್ವ ವೆದಿಕೆ ಸಂಪನ್ಮೂಲ ವ್ಯಕ್ತಿಯಾದ ಮಹಾಲಿಂಗಪ್ಪ ಆಲ್ಬಾಳ, ಸಾಹಿತಿ ಎ.ಎಂ. ಮದರಿ, ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಡಿ.ಎಚ್. ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಡಾ. ಮಂಜುನಾಥ ಸಜ್ಜನ್, ರಾಜು ಬಾಕಳೆ, ಎಸ್.ಬಿ. ರಾಜೂರು, ಜಿ.ಬಿ. ಪಾಟೀಲ್, ರವಿ ಕಾಂತನವರ, ಗಂಗಾಧರ ಖಾನಾಪೂರ, ರಾಜ್ಯ ರೈತ ಸಂಘದ ನಜೀರ್ ಸಾಬ್ ಮೂಲಿಮನಿ, ದಲಿತ ಮುಖಂಡ ಶುಕರಾಜ ತಾಳಕೇರಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಕಲ್ಲಣ್ಣವರ, ಜಿಲ್ಲಾ ಕೆ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರೆಹಮತ್ ಉಲ್ಲಾ ಶಬ್ಬೀರ್, ಎರ್ರೀಸ್ವಾಮಿ, ಶರಣು ಗಡ್ಡಿ ಈಶ್ವರ ಹತ್ತಿ, ಶಾಂತಯ್ಯ ಅಂಗಡಿ, ಮಹಾಂತೇಶ ಕೊತಬಾಳ, ಎಂ.ಎಸ್.ಸಜ್ಜನ್, ಶಿವಪ್ಪ ಹಲಗೆರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹೋರಟಗಾರ ಡಾ. ಕೆ.ಎಸ್. ಜನಾರ್ಧನ, ರಾಮಚಂದ್ರ ಜಿ. ಕಡೇಮನಿ, ರತ್ನಮ್ಮ ದೊಡ್ಡಮನಿ, ಶಿವಪ್ಪ ಜಲ್ಲಿ, ಮಹಾದೇವಪ್ಪ ಮಾವಿನಮಾಡು, ವಿಜಯ ಮಹಾಂತೇಶ ಹಟ್ಟಿ, ಮಖ್ಬುಲ್ ರಾಯಚೂರು, ಜಮಲ್ ದಫೆದಾರ್, ಆನಂದ, ಮಕ್ಬುಲ್, ಮೌನೇಶ್, ರವಿ ಈರಣ್ಣ, ಹಾಲಪ್ಪ, ಶ್ರೀಕಾಂತ್, ಕಲೀಮ್ ಕಿನ್ನಾಳ್, ಮಂಜು, ಚಿನ್ನು, ಪರಸಪ್ಪ ಮನ್ನಾಪುರ, ಈರಮ್ಮ, ಮುದಿಯಪ್ಪ ಕಾಳಿದಾಸನಗರ್, ಗವಿಸಿದ್ದಪ್ಪ ಹೂಗಾರ್, ಸಂತೋಷ್, ಅನ್ನಪೂರ್ಣ, ನೂರಾರು ವ್ಯಾಪಾರಸ್ಥರು, ಗವಿಸಿದ್ದೇಶ್ವರ ನರ್ಸಿಂಗ್ ವಿದ್ಯಾರ್ಥಿಗಳು, ಕರ್ನಾಟಕ ರಾಜ್ಯ ಸಂಯುಕ್ತ ಬೀದಿಬದಿ ವ್ಯಾಪಾರಸ್ಥರ ಸಂಘ ಮತ್ತು ಚಿಕ್ಕ ಪುಟ್ಟ ಬೀದಿಬದಿ ವ್ಯಾಪಾರಸ್ಥರ ಹಿತ ರಕ್ಷಣಾ ಸಂಘದ ನೂರಾರು ಸದಸ್ಯರು ಭಾಗವಹಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande