ವೇಮನ ಜಯಂತಿ ಶುಭಾಶಯ ಕೋರಿದ ಮುಖ್ಯಮಂತ್ರಿ
ಸಲ್ಲಿಸೋಣ
greetings


ಬೆಂಗಳೂರು, 19 ಜನವರಿ (ಹಿ.ಸ.) :

ಆ್ಯಂಕರ್ : ಕವಿ ಹಾಗೂ ದಾರ್ಶನಿಕರಾಗಿದ್ದ ಯೋಗಿ ವೇಮನರು ಜಾತಿಯಾಧಾರಿತ ಅಸ್ಪೃಶ್ಯತೆ, ಅಂಧಶ್ರದ್ಧೆ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧ ಸರಳ ಭಾಷೆಯಲ್ಲಿ ಜಾಗೃತಿ ಮೂಡಿಸಿ, ಸುಧಾರಣೆಯ ಹಾದಿಯಲ್ಲಿ ಸಮಾಜವನ್ನು ಮುನ್ನಡೆಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವೇಮನ ಜಯಂತಿ ಅಂಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ ಕೋರಿರುವ ಅವರು, ಕೆಲವೇ ಜನರ ಹಿತಕ್ಕಾಗಿ ಬಹುಜನರು ಶೋಷಣೆಗೊಳಪಡುವ ವರ್ಣವ್ಯವಸ್ಥೆ ಅಳಿದು, ಪ್ರತಿ ವ್ಯಕ್ತಿಗೂ ಶೋಷಣೆ ರಹಿತ ಘನತೆಯ ಬದುಕು ಸಿಗಬೇಕು ಎನ್ನುವುದು ವೇಮನರ ಆಶಯವಾಗಿತ್ತು.

ಇಂತಹ ಮಹಾನ್ ಚೇತನಗಳು ಹಾಕಿಕೊಟ್ಟ ತಳಪಾಯದ ಮೇಲೆ ಸಮಸಮಾಜದ ಸುಂದರ ಸೌಧವನ್ನು ಕಟ್ಟಬೇಕಿರುವುದು ನಮ್ಮೆಲ್ಲರ ಹೊಣೆ. ವೇಮನ ಜಯಂತಿ ಈ ಕಾರ್ಯಕ್ಕೆ ಪ್ರೇರಣೆಯಾಗಲಿ.

ಮಹಾಯೋಗಿ ವೇಮನರ ಜಯಂತಿಯ ಸಂದರ್ಭದಲ್ಲಿ ಅವರ ಜೀವನ ಬೋಧನೆಗಳನ್ನು ನೆನೆದು, ನಮನ ಸಲ್ಲಿಸೋಣ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande