ಬನ್ಸೆರಾದಲ್ಲಿ ಮೂರನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಅಮಿತ್ ಶಾ ಚಾಲನೆ
ನವದೆಹಲಿ, 16 ಜನವರಿ (ಹಿ.ಸ.) : ಆ್ಯಂಕರ್ : ನವದೆಹಲಿಯ ಸರಾಯ್ ಕಾಲೇ ಖಾನ್‌ನಲ್ಲಿರುವ ಯಮುನಾ ಪ್ರವಾಹ ಪ್ರದೇಶದಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಅಭಿವೃದ್ಧಿಪಡಿಸಿರುವ ಬನ್ಸೆರಾ ಹುಲ್ಲುಗಾವಲಿನಲ್ಲಿ ಮೂರನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಗೃಹ ಸಚಿವ ಅಮಿತ್ ಶಾ ಅವರು ಉದ್ಘಾಟಿಸಿದರು
Amit sha


ನವದೆಹಲಿ, 16 ಜನವರಿ (ಹಿ.ಸ.) :

ಆ್ಯಂಕರ್ : ನವದೆಹಲಿಯ ಸರಾಯ್ ಕಾಲೇ ಖಾನ್‌ನಲ್ಲಿರುವ ಯಮುನಾ ಪ್ರವಾಹ ಪ್ರದೇಶದಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಅಭಿವೃದ್ಧಿಪಡಿಸಿರುವ ಬನ್ಸೆರಾ ಹುಲ್ಲುಗಾವಲಿನಲ್ಲಿ ಮೂರನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಗೃಹ ಸಚಿವ ಅಮಿತ್ ಶಾ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ದೆಹಲಿಯನ್ನು ಜಾಗತಿಕ ಮಟ್ಟದಲ್ಲಿ ಗಾಳಿಪಟ ಹಾರಿಸುವ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಉತ್ಸವಗಳನ್ನು ಉತ್ತೇಜಿಸುವ ವಿಶೇಷ ಸಮಿತಿಯನ್ನು ರಚಿಸಬೇಕೆಂದು ದೆಹಲಿ ಸರ್ಕಾರವನ್ನು ಒತ್ತಈ ಉಪಕ್ರಮವು ದೇಶದಾದ್ಯಂತ ಗಾಳಿಪಟ ಉತ್ಸವಗಳನ್ನು ಸಂಪರ್ಕಿಸುವುದರೊಂದಿಗೆ, ಭವಿಷ್ಯದಲ್ಲಿ ದೆಹಲಿಯನ್ನು ಅಂತಾರಾಷ್ಟ್ರೀಯ ಗಾಳಿಪಟ ಹಾರಿಸುವವರ ಪ್ರಮುಖ ಆಕರ್ಷಣಾ ಕೇಂದ್ರವನ್ನಾಗಿ ಮಾಡಲಿದೆ ಎಂದು ಹೇಳಿದರು.

‘ಬನ್ಸೆರಾ’ ಸ್ಥಳದ ಅಭಿವೃದ್ಧಿಯನ್ನು ಶ್ಲಾಘಿಸಿದ ಗೃಹ ಸಚಿವರು,

“ಇಂದು ದೇಶದ ವಿವಿಧ ಭಾಗಗಳಿಂದ ತರಿಸಲಾದ ಬಿದಿರು ಇಲ್ಲಿ ಬಳಕೆಯಾಗಿದೆ. ದೃಢ ಸಂಕಲ್ಪ ಮತ್ತು ನಿರಂತರ ಪ್ರಯತ್ನವಿದ್ದರೆ ಇಂತಹ ಸುಂದರ ಫಲಿತಾಂಶಗಳನ್ನು ಸಾಧಿಸಬಹುದು ಎಂಬುದಕ್ಕೆ ಬನ್ಸೆರಾ ಪ್ರತೀಕವಾಗಿದೆ” ಎಂದು ಅಭಿಪ್ರಾಯಪಟ್ಟರು.

ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದ ಹಿನ್ನೆಲೆ ಹಾಗೂ ದೇಶಾದ್ಯಂತ ಆಚರಿಸಲ್ಪಡುವ ಉತ್ತರಾಯಣ ಹಬ್ಬದ ಅಂಗವಾಗಿ ದೇಶವಾಸಿಗಳಿಗೆ ಶುಭಾಶಯಗಳನ್ನು ತಿಳಿಸಿದ ಅವರು, ಭಾರತದಲ್ಲಿನ ಹಬ್ಬಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿಶಾಲಿ ಮಾಧ್ಯಮಗಳಾಗಿವೆ ಎಂದು ಹೇಳಿದರು.

ಇತಿಹಾಸವನ್ನು ಸ್ಮರಿಸಿದ ಅಮಿತ್ ಶಾ, ಸೈಮನ್ ಆಯೋಗದ ವಿರುದ್ಧದ ಪ್ರತಿಭಟನೆಗಳ ಸಮಯದಲ್ಲಿ ಗಾಳಿಪಟ ಉತ್ಸವಗಳು ದೇಶಭಕ್ತಿಯ ಭಾವನೆಗಳನ್ನು ಪ್ರಚೋದಿಸುವ ಪ್ರಮುಖ ಸಾಧನವಾಗಿದ್ದವು ಎಂಬುದನ್ನು ನೆನಪಿಸಿದರು.

ಉತ್ಸವದ ಮುಖ್ಯ ಉದ್ದೇಶ ದೆಹಲಿಯ ನಾಗರಿಕರಿಗೆ ನೈಸರ್ಗಿಕ ಹಾಗೂ ಸುಂದರ ವಾತಾವರಣ ಒದಗಿಸುವುದರೊಂದಿಗೆ, ಸಾಂಪ್ರದಾಯಿಕ ಕ್ರೀಡೆಗಳಿಗೆ ಅಂತರರಾಷ್ಟ್ರೀಯ ವೇದಿಕೆ ಕಲ್ಪಿಸುವುದಾಗಿದೆ. ಬನ್ಸೆರಾ ಇದೀಗ ದೆಹಲಿಯ ಜನರಿಗೆ ಪ್ರಮುಖ ಪ್ರವಾಸಿ ಮತ್ತು ಸಾಂಸ್ಕೃತಿಕ ತಾಣವಾಗಿ ಅಭಿವೃದ್ಧಿಗೊಂಡಿದೆ.

ಈ ಕಾರ್ಯಕ್ರಮದಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಮುಖ್ಯಮಂತ್ರಿ ರೇಖಾ ಗುಪ್ತಾ, ಮುಖ್ಯ ಕಾರ್ಯದರ್ಶಿ ರಾಜೀವ್ ವರ್ಮಾ, ಡಿಡಿಎ ಉಪಾಧ್ಯಕ್ಷ ಶ್ರವಣ್ ಕುಮಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande