
ವಿಜಯಪುರ, 14 ಜನವರಿ (ಹಿ.ಸ.) :
ಆ್ಯಂಕರ್ : ಕಷ್ಟದಲ್ಲಿರುವ ಮಹಿಳೆಯರು, ಯುವತಿಯರನ್ನು ರಕ್ಷಣೆ ಮಾಡುವ ಅಕ್ಕ ಪಡೆಯ ವಾಹನಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ವಿಜಯಪುರ ನಗರದ ಎಸ್ಪಿ ಆವರಣದಲ್ಲಿ ಎಸ್ಪಿ ನಿಂಬರಗಿ ಅದ್ಧೂರಿಯಾಗಿ ಚಾಲನೆ ನೀಡಿ, ಅಕ್ಕ ಪಡೆಯ ವಾಹನವೂ 24*7 ಕಾರ್ಯನಿರ್ವಹಿಸಲಿ. ಕಷ್ಟದಲ್ಲಿರುವ ಮಹಿಳೆಯರ ರಕ್ಷಣೆ ಮಾಡಿ ಅವರಿಗೆ ಧೈರ್ಯ ತುಂಬವ ಕೆಲಸ ಮಾಡಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪೊಲೀಸ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande