ತಮಿಳು ಯುವಕರಿಗೆ ಸುಸ್ಥಿರ ಕೃಷಿಗೆ ಕರೆ ನೀಡಿದ ಪ್ರಧಾನಿ ಮೋದಿ
ನವದೆಹಲಿ, 14 ಜನವರಿ (ಹಿ.ಸ.) : ಆ್ಯಂಕರ್ : ಪೊಂಗಲ್ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಯುವಕರು ಸುಸ್ಥಿರ ಹಾಗೂ ಪರಿಸರ ಸ್ನೇಹಿ ಕೃಷಿಯನ್ನು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. “ತಟ್ಟೆ ತುಂಬಿ, ಜೇಬು ತುಂಬಿ, ಭೂಮಿಯೂ ಸುರಕ್ಷಿತವಾಗಿರಬೇಕು” ಎಂಬ ದೃಷ್ಟಿಕೋನದೊಂ
Pm


ನವದೆಹಲಿ, 14 ಜನವರಿ (ಹಿ.ಸ.) :

ಆ್ಯಂಕರ್ : ಪೊಂಗಲ್ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಯುವಕರು ಸುಸ್ಥಿರ ಹಾಗೂ ಪರಿಸರ ಸ್ನೇಹಿ ಕೃಷಿಯನ್ನು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

“ತಟ್ಟೆ ತುಂಬಿ, ಜೇಬು ತುಂಬಿ, ಭೂಮಿಯೂ ಸುರಕ್ಷಿತವಾಗಿರಬೇಕು” ಎಂಬ ದೃಷ್ಟಿಕೋನದೊಂದಿಗೆ ಕೃಷಿಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ನವದೆಹಲಿಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಎಲ್. ಮುರುಗನ್ ಅವರ ನಿವಾಸದಲ್ಲಿ ಬುಧವಾರ ಆಯೋಜಿಸಿದ್ದ ಪೊಂಗಲ್ ಆಚರಣೆಯಲ್ಲಿ ಪ್ರಧಾನಿ ಭಾಗವಹಿಸಿ, ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿ ಗೋಸೇವೆಯನ್ನೂ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಪೊಂಗಲ್ ಅನ್ನು ಜಾಗತಿಕ ಹಬ್ಬವೆಂದು ವರ್ಣಿಸಿ, ಇದು ರೈತ, ಭೂಮಿ ಮತ್ತು ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ಮಹತ್ವದ ಹಬ್ಬವಾಗಿದೆ ಎಂದು ಹೇಳಿದರು.

ಪ್ರಕೃತಿ ಸಂರಕ್ಷಣೆ, ನೀರಿನ ಸಮರ್ಥ ನಿರ್ವಹಣೆ, ನೈಸರ್ಗಿಕ ಕೃಷಿ, ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ಮೌಲ್ಯವರ್ಧನೆ ಭವಿಷ್ಯದ ಕೃಷಿಗೆ ಅತ್ಯವಶ್ಯಕ ಅಂಶಗಳಾಗಿವೆ ಎಂದು ಪ್ರಧಾನಿ ತಿಳಿಸಿದರು.

ಈ ಕ್ಷೇತ್ರಗಳಲ್ಲಿ ನವೀನ ಆಲೋಚನೆಗಳೊಂದಿಗೆ ಯುವಕರು ಮುಂದೆ ಬರಬೇಕೆಂದು ಅವರು ಕರೆ ನೀಡಿದರು.

ತಮಿಳು ಸಂಸ್ಕೃತಿ ಭಾರತದಷ್ಟೇ ಅಲ್ಲ, ಸಂಪೂರ್ಣ ಮಾನವೀಯತೆಯ ಹಂಚಿಕೆಯ ಪರಂಪರೆಯಾಗಿದೆ ಎಂದು ಹೇಳಿದ ಪ್ರಧಾನಿ, ಪೊಂಗಲ್‌ನಂತಹ ಹಬ್ಬಗಳು “ಏಕ್ ಭಾರತ್ ಶ್ರೇಷ್ಠ ಭಾರತ್” ಭಾವನೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ತಿರುಕ್ಕುರಲ್‌ನಲ್ಲಿ ರೈತರು ಮತ್ತು ಕೃಷಿಗೆ ನೀಡಿರುವ ಮಹತ್ವವನ್ನು ಉಲ್ಲೇಖಿಸಿದ ಅವರು, ರೈತರು ರಾಷ್ಟ್ರ ನಿರ್ಮಾಣದ ಬಲವಾದ ಸ್ತಂಭಗಳಾಗಿದ್ದು, ಅವರ ಪರಿಶ್ರಮ ಸ್ವಾವಲಂಬಿ ಭಾರತ ಅಭಿಯಾನಕ್ಕೆ ಹೊಸ ಶಕ್ತಿಯನ್ನು ನೀಡುತ್ತಿದೆ ಎಂದರು.

ಮಿಷನ್ ಲೈಫ್, ಏಕ್ ಪೆಡ್ ಮಾಂ ಕೆ ನಾಮ್, ಅಮೃತ್ ಸರೋವರ್, ಪರ್ ಡ್ರಾಪ್ ಮೋರ್ ಕ್ರಾಪ್ ಮುಂತಾದ ಅಭಿಯಾನಗಳನ್ನು ಸ್ಮರಿಸಿದ ಪ್ರಧಾನಿ, ಮುಂದಿನ ಪೀಳಿಗೆಗಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಅತ್ಯಂತ ನಿರ್ಣಾಯಕವಾಗಿದೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಯುವಕರ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಈ ಸುಸ್ಥಿರ ಕೃಷಿ ಚಳವಳಿಯನ್ನು ಇನ್ನಷ್ಟು ವಿಸ್ತರಿಸಲು ತಮಿಳು ಯುವಕರಿಗೆ ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande