ರಿಯಲ್ ಮ್ಯಾಡ್ರಿಡ್‌ನಲ್ಲಿ ತರಬೇತುದಾರ ಬದಲಾವಣೆ
ಮ್ಯಾಡ್ರಿಡ್, 13 ಜನವರಿ (ಹಿ.ಸ.) : ಆ್ಯಂಕರ್ : ಸ್ಪೇನ್‌ನ ದಿಗ್ಗಜ ಫುಟ್‌ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ ತನ್ನ ಮುಖ್ಯ ತರಬೇತುದಾರ ಝಾಬಿ ಅಲೋನ್ಸೊ ಅವರೊಂದಿಗೆ ಪರಸ್ಪರ ಒಪ್ಪಂದದಡಿ ಸಂಬಂಧವನ್ನು ಅಂತ್ಯಗೊಳಿಸಿದೆ. ಭಾನುವಾರ ನಡೆದ ಸ್ಪ್ಯಾನಿಷ್ ಸೂಪರ್ ಕಪ್ ಫೈನಲ್‌ನಲ್ಲಿ ಚಿರಪ್ರತಿಸ್ಪರ್ಧಿ ಬಾರ್ಸಿ
Alonso


ಮ್ಯಾಡ್ರಿಡ್, 13 ಜನವರಿ (ಹಿ.ಸ.) :

ಆ್ಯಂಕರ್ : ಸ್ಪೇನ್‌ನ ದಿಗ್ಗಜ ಫುಟ್‌ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ ತನ್ನ ಮುಖ್ಯ ತರಬೇತುದಾರ ಝಾಬಿ ಅಲೋನ್ಸೊ ಅವರೊಂದಿಗೆ ಪರಸ್ಪರ ಒಪ್ಪಂದದಡಿ ಸಂಬಂಧವನ್ನು ಅಂತ್ಯಗೊಳಿಸಿದೆ.

ಭಾನುವಾರ ನಡೆದ ಸ್ಪ್ಯಾನಿಷ್ ಸೂಪರ್ ಕಪ್ ಫೈನಲ್‌ನಲ್ಲಿ ಚಿರಪ್ರತಿಸ್ಪರ್ಧಿ ಬಾರ್ಸಿಲೋನಾದ ವಿರುದ್ಧ 2–3 ಗೋಲುಗಳ ಸೋಲಿನ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅಲೋನ್ಸೊ ಅವರ ಸ್ಥಾನಕ್ಕೆ ಕ್ಲಬ್ ತನ್ನ ಕ್ಯಾಸ್ಟಿಲ್ಲಾ (ಬಿ ತಂಡ) ಕೋಚ್ ಆಗಿದ್ದ ಅಲ್ವಾರೋ ಅರ್ಬೆಲೋವಾ ಅವರನ್ನು ರಿಯಲ್ ಮ್ಯಾಡ್ರಿಡ್‌ನ ಮೊದಲ ತಂಡದ ಹೊಸ ಮುಖ್ಯ ತರಬೇತುದಾರನಾಗಿ ಆಗಿ ನೇಮಿಸಿದೆ. ಮಾಜಿ ಆಟಗಾರರಾಗಿರುವ ಅರ್ಬೆಲೋವಾ ಅವರಿಗೆ ಕ್ಲಬ್ ಸಂಸ್ಕೃತಿ ಮತ್ತು ಯುವ ವ್ಯವಸ್ಥೆಯ ಬಗ್ಗೆ ಆಳವಾದ ಅರಿವು ಇದೆ ಎಂದು ನಿರ್ವಹಣೆ ತಿಳಿಸಿದೆ.

ಝಾಬಿ ಅಲೋನ್ಸೊ ಅವರು 2025ರ ಜೂನ್ 1ರಂದು ರಿಯಲ್ ಮ್ಯಾಡ್ರಿಡ್‌ನ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಆರಂಭಿಕ ಹಂತದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದರೂ, ನವೆಂಬರ್ ಬಳಿಕ ಫಲಿತಾಂಶಗಳಲ್ಲಿ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಕೋಚ್ ಬದಲಾವಣೆಗೆ ಕ್ಲಬ್ ಮುಂದಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande