ಮಿಥುನ್ ಪಾಟೀಲ್ ಬಡವರ ಬಂಧು, ಜನಮೆಚ್ಚಿದ ನಾಯಕ : ರವಿಕುಮಾರ್ ರೆಡ್ಡಿ
ಗದಗ, 13 ಜನವರಿ (ಹಿ.ಸ.) ಆ್ಯಂಕರ್: ಮಿಥುನ್ ಪಾಟೀಲ್ ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಭಿನ್ನ ಗುರುತನ್ನು ನಿರ್ಮಿಸಿಕೊಂಡಿದ್ದು, ಶಾಸಕರ ಮಗನಾಗಿದ್ದರೂ ಯಾವುದೇ ಅಹಂ ಇಲ್ಲದೆ ಬಡವರ, ರೈತರ, ಶ್ರಮಿಕರ ಹಾಗೂ ನೊಂದ ಸಮುದಾಯಗಳ ಪರ ಸದಾ ಧ್ವನಿಯಾಗಿರುವ ಬಡವರ ಬಂಧು ಮತ್ತು ಜನಮೆಚ್ಚಿದ ನಾಯಕರಾಗಿ
ಫೋಟೋ


ಗದಗ, 13 ಜನವರಿ (ಹಿ.ಸ.)

ಆ್ಯಂಕರ್:

ಮಿಥುನ್ ಪಾಟೀಲ್ ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಭಿನ್ನ ಗುರುತನ್ನು ನಿರ್ಮಿಸಿಕೊಂಡಿದ್ದು, ಶಾಸಕರ ಮಗನಾಗಿದ್ದರೂ ಯಾವುದೇ ಅಹಂ ಇಲ್ಲದೆ ಬಡವರ, ರೈತರ, ಶ್ರಮಿಕರ ಹಾಗೂ ನೊಂದ ಸಮುದಾಯಗಳ ಪರ ಸದಾ ಧ್ವನಿಯಾಗಿರುವ ಬಡವರ ಬಂಧು ಮತ್ತು ಜನಮೆಚ್ಚಿದ ನಾಯಕರಾಗಿದ್ದಾರೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಯುವ ಘಟಕದ ಮಾಜಿ ಅಧ್ಯಕ್ಷ ರವಿಕುಮಾರ್ ರೆಡ್ಡಿ ಹೇಳಿದರು.

ನಗರದಲ್ಲಿ ಮಿಥುನ್ ಪಾಟೀಲ್ ಅವರ ಜನ್ಮದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಿಥುನ್ ಪಾಟೀಲ್ ಅವರು ಸಮಾಜದ ಹಿತಕ್ಕಾಗಿ ಹೋರಾಡುವ ಧೀರ ನಾಯಕರು. ಅವರು ಜನಸಾಮಾನ್ಯರ ಸಮಸ್ಯೆಗಳನ್ನು ಕೇವಲ ಕೇಳುವುದಲ್ಲದೆ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಜವಾದ ಕಾಳಜಿ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ರೋಣ ಮತಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಕ್ಷೇತ್ರದ ಸಮಗ್ರ ಪ್ರಗತಿಗೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಿದರು.

ಮಿಥುನ್ ಪಾಟೀಲ್ ಅವರು ಯುವಕರಿಗೆ ಪ್ರೇರಣೆಯಾಗಿ, ಸಮಾಜದ ಪ್ರತಿಯೊಂದು ವರ್ಗವನ್ನು ಒಗ್ಗೂಡಿಸಿಕೊಂಡು ರಾಜಕೀಯ ನಡೆಸುತ್ತಿರುವುದು ಶ್ಲಾಘನೀಯ. ಅವರ ಸೇವಾ ಮನೋಭಾವ ಮತ್ತು ಜನಸಂಪರ್ಕ ರಾಜಕೀಯದಲ್ಲಿ ಭವಿಷ್ಯದಲ್ಲಿ ಇನ್ನೂ ದೊಡ್ಡ ಸಾಧನೆ ಮಾಡುವ ಭರವಸೆ ನೀಡುತ್ತದೆ ಎಂದು ರವಿಕುಮಾರ್ ರೆಡ್ಡಿ ಹೇಳಿದರು. ಈ ಸಂದರ್ಭದಲ್ಲಿ ಮಿಥುನ್ ಪಾಟೀಲ್ ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ ಅವರು, ಅವರಿಗೆ ಉತ್ತಮ ಆರೋಗ್ಯ, ಸುದೀರ್ಘ ಜೀವನ ಹಾಗೂ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಶುಭಕೋರಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ತಾಯೇಬ ಕುನ್ನಿಭಾವಿ, ರೋಣ ಪುರಸಭೆಯ ಮಾಜಿ ಸದಸ್ಯ ಬಸವರಾಜ ನಾಯಕ್, ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ, ಯುವ ನಾಯಕ ರಾಘವೇಂದ್ರ ಸುರೇಬಾನ್ ಸೇರಿದಂತೆ ಹಲವು ಗಣ್ಯರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande