
ವಿಜಯಪುರ, 10 ಜನವರಿ (ಹಿ.ಸ.) :
ಆ್ಯಂಕರ್ : ಭಾಷಾ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಕೇರಳ ಹಾಗೂ ಕರ್ನಾಟಕ ಗಡಿಯಲ್ಲಿ ಕೇರಳ ಭಾಷೆ ಹೇರಿದ್ದು ಖಂಡನೀಯ. ಇದನ್ನು ಕೇರಳ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಅಲ್ಲದೇ, ಯಾವುದೇ ಗಡಿಯಲ್ಲಿ ಭಾಷೆಯಲ್ಲಿ ಸರ್ಕಾರಗಳು ರಾಜಕೀಯ ಮಾಡಬಾರದು. ಇದರಂದಿ ಅಲ್ಲಿನ ಸ್ಥಳೀಯರಿಗೆ ಸಮಸ್ಯೆ ಆಗುತ್ತದೆ. ಅದಕ್ಕಾಗಿ ಇದನ್ನು ಮತ್ತೊಮ್ಮೆ ಪರಿಶೀಲಿಸಿಬೇಕು. ಇನ್ನೂ ಗೃಹ ಸಚಿವ ಜಿ.ಪರಮೇಶ್ವರ ಒಳ್ಳೆಯವರು. ಆದ್ರೇ, ಅವರಿಗೆ ಗೃಹ ಇಲಾಖೆ ನಿಭಾಯಿಸಲು ಆಗುತ್ತಿಲ್ಲ. ಕ್ರೈಂಗಳು, ಬಾಂಗ್ಲಾ ನುಸುಳಿ ಬಂದವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಬರೀ ಮಾಹಿತಿ ಇಲ್ಲ. ನೋಡುತ್ತೇನೆ ಎನ್ನುತ್ತಾರೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande