ನವದೆಹಲಿ, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಪಂಜಾಬ್ ಪ್ರವಾಹವನ್ನು ಮಾನವ ನಿರ್ಮಿತ ದುರಂತ ಎಂದು ಹೇಳಿದ್ದು, ಆಮ್ ಆದ್ಮಿ ಪಕ್ಷ ಸರ್ಕಾರದ ನಿರ್ಲಕ್ಷ್ಯ, ಅಕ್ರಮ ಗಣಿಗಾರಿಕೆ ಮತ್ತು ಅಣೆಕಟ್ಟುಗಳ ಕುಸಿತವನ್ನು ಮುಖ್ಯ ಕಾರಣ ಎಂದು ಆರೋಪಿಸಿದ್ದಾರೆ.
2022–25 ರವರೆಗೆ ₹20,000 ಕೋಟಿ ಗಣಿಗಾರಿಕೆ ಆದಾಯದ ಹೆಚ್ಚಿನ ಭಾಗ ಖಜಾನೆಗೆ ತಲುಪಿಲ್ಲ ಎಂದು ಆರೋಪಿಸಿದ್ದಾರೆ. ಅಣೆಕಟ್ಟುಗಳ ಸಂಪೂರ್ಣ ದುರಸ್ತಿ, ಮನರೇಗಾ ಮೂಲಕ ಬಲಪಡಿಸುವುದು, ಪಾರದರ್ಶಕ ನೀತಿ, ಸಿಬಿಐ ತನಿಖೆ ಮತ್ತು ಸಂತ್ರಸ್ತರಿಗೆ ಕನಿಷ್ಠ ₹100 ಕೋಟಿ ಪುನರ್ವಸತಿ ನಿಧಿ ಒದಗಿಸುವಂತೆ ಪಂಜಾಬ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa