ಕಾಶ್ಮೀರಕ್ಕೆ ನುಸುಳಲು ಭಯೋತ್ಪಾದಕರ ಯತ್ನ: ಬಿಎಸ್‌ಎಫ್ ಐಜಿ
ಶ್ರೀನಗರ, 27 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಭಯೋತ್ಪಾದಕರು ನಿಯಂತ್ರಣ ರೇಖೆಯಾಚೆ ಲಾಂಚ್ ಪ್ಯಾಡ್‌ಗಳಿಂದ ಕಾಶ್ಮೀರ ಕಣಿವೆಗೆ ನುಸುಳಲು ಯೋಜಿಸುತ್ತಿದ್ದಾರೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಾಶ್ಮೀರ ಗಡಿ ನಿರೀಕ್ಷಕ ಜನರಲ್ ಅಶೋಕ್ ಯಾದವ್ ತಿಳಿಸಿದ್ದಾರೆ. ಐಜಿ ಅಶೋಕ್ ಯಾದವ್ ಈ ಕುರಿತು ಮಾಹಿತ
Bsf


ಶ್ರೀನಗರ, 27 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಭಯೋತ್ಪಾದಕರು ನಿಯಂತ್ರಣ ರೇಖೆಯಾಚೆ ಲಾಂಚ್ ಪ್ಯಾಡ್‌ಗಳಿಂದ ಕಾಶ್ಮೀರ ಕಣಿವೆಗೆ ನುಸುಳಲು ಯೋಜಿಸುತ್ತಿದ್ದಾರೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಾಶ್ಮೀರ ಗಡಿ ನಿರೀಕ್ಷಕ ಜನರಲ್ ಅಶೋಕ್ ಯಾದವ್ ತಿಳಿಸಿದ್ದಾರೆ.

ಐಜಿ ಅಶೋಕ್ ಯಾದವ್ ಈ ಕುರಿತು ಮಾಹಿತಿ ನೀಡಿದ್ದು, ಬಂಡಿಪೋರಾ ಮತ್ತು ಕುಪ್ವಾರಾ ವಲಯಗಳಲ್ಲಿ ಭಯೋತ್ಪಾದಕರು ಒಳನುಸುಳುವಿಕೆ ಅವಕಾಶಕ್ಕಾಗಿ ಕಾಯುತ್ತಿದ್ದು, ಬಿಗಿ ಭದ್ರತೆ, ಹೊಸ ತಂತ್ರಗಳು ಮತ್ತು ಕಣ್ಗಾವಲು ಉಪಕರಣಗಳ ನೆರವಿನಿಂದ ಭದ್ರತಾ ಪಡೆಗಳು ಯಾವುದೇ ಪ್ರಯತ್ನವನ್ನು ವಿಫಲಗೊಳಿಸುತ್ತಿವೆ. ಈ ವರ್ಷ ಈಗಾಗಲೇ ಎರಡು ಒಳನುಸುಳುವಿಕೆ ಯತ್ನಗಳನ್ನು ತಡೆಗಟ್ಟಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande