ನವದೆಹಲಿ, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 25ರಂದು ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುವ “ವರ್ಲ್ಡ್ ಫುಡ್ ಇಂಡಿಯಾ 2025” ನಾಲ್ಕನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಈ ಮಹಾಸಮ್ಮೇಳನವು ಸೆಪ್ಟೆಂಬರ್ 25ರಿಂದ 28ರವರೆಗೆ ನಡೆಯಲಿದ್ದು, ಭಾರತದ ಆಹಾರ ಸಂಸ್ಕರಣಾ ವಲಯಕ್ಕೆ ಇದುವರೆಗೆ ನಡೆದ ಅತಿದೊಡ್ಡ ಜಾಗತಿಕ ಸಮಾವೇಶವೆಂದು ಪರಿಗಣಿಸಲಾಗಿದೆ.
21 ಕ್ಕೂ ಹೆಚ್ಚು ದೇಶಗಳು, 21 ರಾಜ್ಯಗಳು, 10 ಕೇಂದ್ರ ಸಚಿವಾಲಯಗಳು ಹಾಗೂ 5 ಸರ್ಕಾರಿ ಸಂಸ್ಥೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.
ನ್ಯೂಜಿಲೆಂಡ್ ಹಾಗೂ ಸೌದಿ ಅರೇಬಿಯಾ ಪಾಲುದಾರ ರಾಷ್ಟ್ರಗಳು; ಜಪಾನ್, ರಷ್ಯಾ, ಯುಎಇ ಮತ್ತು ವಿಯೆಟ್ನಾಂ ಗಮನ ಸೆಳೆಯುವ ರಾಷ್ಟ್ರಗಳಾಗಿ ಭಾಗವಹಿಸಲಿವೆ.
1700 ಕ್ಕೂ ಹೆಚ್ಚು ಪ್ರದರ್ಶಕರು, 500 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಖರೀದಿದಾರರು ಮತ್ತು 100 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಹಾಜರಾಗಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು, “WFI ಕೇವಲ ವ್ಯಾಪಾರ ಮೇಳವಲ್ಲ; ಅದು ಭಾರತವನ್ನು ಆಹಾರ ನವೀನತೆ, ಹೂಡಿಕೆ ಮತ್ತು ಸುಸ್ಥಿರತೆಗೆ ಜಾಗತಿಕ ಕೇಂದ್ರವನ್ನಾಗಿಸುವ ಪರಿವರ್ತನಾ ವೇದಿಕೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa