ಮಾಲೂರು ಶಾಸಕ ನಂಜೇ ಗೌಡ ಕಾಂಗ್ರೆಸ್‌ ವೆಂಟಿಲೇಟರ್‌ನಲ್ಲಿರುವ ಭ್ರಷ್ಟ : ಮಾಜಿ ಶಾಸಕ ಮಂಜುನಾಥ ಗೌಡ ವಾಗ್ದಾಳಿ
ಮಾಲೂರು ಶಾಸಕ ನಂಜೇ ಗೌಡ ಕಾಂಗ್ರೆಸ್‌ನ ವೆಂಟಿಲೇಟರ್‌ನಲ್ಲಿರುವ ಭ್ರಷ್ಟ ; ಮಾಜಿ ಶಾಸಕ ಮಂಜುನಾಥ ಗೌಡ ವಾಗ್ದಾಳಿ
ಚಿತ್ರ : ಮಾಲೂರಿನಲ್ಲಿ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಮಂಜುನಾಥಗೌಡ.


ಕೋಲಾರ, ೨೨ ಸೆಪ್ಟಂಬರ್ (ಹಿ.ಸ.) :

ಆ್ಯಂಕರ್ : ಮಾಲೂರಿನ ಶಾಸಕ ನಂಜೇ ಗೌಡರು ಅತ್ಯಂತ ಭ್ರಷ್ಟ ಶಾಸಕರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಭ್ರಷ್ಟರನ್ನು ರಕ್ಷಿಸುತ್ತದೆ.ತಮ್ಮದೇ ಪಕ್ಷದವರು ಭ್ರಷ್ಟಾಚಾರ ನಡೆಸಿದರೆ ಯಾವದೇ ಕ್ರಮ ಕೈಗೊಳ್ಳುವಿದಿಲ್ಲ.ಬದಲಾಗಿ ರಕ್ಷಣೆ ನೀಡುತ್ತದೆ. ನಂಜೇ ಗೌಡರು ಕಾಂಗ್ರೆಸ್‌ನ ವೆಂಟಿಲೇಟರ್‌ನಲ್ಲಿದ್ಧಾರೆ.ವೆಂಟಿಲೇಟರ್‌ನಿಂದ ಹೊರ ಬಂದಕೂಡಲೇ ಜೈಲು ಸೇರುತ್ತಾರೆ ಎಂದು ಮಾಲೂರು ವಿಧಾನ ಸಭಾಕ್ಷೇತ್ರದ ಮಾಜಿ ಶಾಸಕ ಹಾಗು ಬಿ.ಜಿ.ಪಿ ಪಕ್ಷದ ಪರಾರಿತ ಅಭ್ಯರ್ಥಿ ಮಂಜುನಾಥ ಗೌಡರು ವಾಗ್ದಾಳಿ ನಡೆಸಿದರು.

ಮಾಲೂರಿನಲ್ಲಿ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ನಂಜೇಗೌಡರು ಕಳೆದ ಏಳು ವರ್ಷಗಳಿಂದ ನಂಜೇ ಗೌಡರ ಹಿರಿತನವನ್ನು ಗೌರವಿಸಿ ಅವರ ವಿರುಧ್ಧ ಅವಹೇನಕಾರಿ ಟೀಕೆಗಳನ್ನು ಮಾಡಲಿಲ್ಲ.ಏಕ ವಚನದಲ್ಲಿ ಟೀಕಿಸಲಿಲ್ಲ. ಆದರೆ ನ್ಯಾಯಾಲಯ ನಂಜೇ ಗೌಡರ ವಿಧಾನ ಸಭಾ ಸದಸ್ಯತ್ವನ್ನು ರದ್ದುಪಡಿಸಿದೆ. ಮತಗಳ ಎಣಕೆಯ ಸಂದರ್ಭದಲ್ಲಿ ಅಧಿಕಾರಿಗಳಿಂದ ಲೋಪದೋಷಗಳಾಗಿವೆ. ಮತಗಳ ಎಣಿಕೆಯ ಚಿತ್ರೀಕರಣದ ಸಿಸಿಟಿ ಕ್ಯಾಮರಾದ ಹಾರ್ಡ್ ಡಿಸ್ಕ್ ನಾಪತ್ತೆಯಾಗಿದೆ.ಮತಗಳ ಎಣಿಕೆಯ ಏಜೆಂಟರು ಸಹಿ ಮಾಡಿದ್ದ ಫಾರಂ ನಂಬರ್ ಹದಿನೇಳು ತಾಳೆಯಾಗುತ್ತಿಲ್ಲ. ಮತಗಳ ಮರು ಎಣಿಕೆಮಾಡುವಂತೆ ಸಲ್ಲಿಸಿದ ಮನವಿಯನ್ನು ಚುನಾವಣಾಧಿಕಾರಿ ತಿರಸ್ಜರಿಸಿದರು. ಇದರಿಂದಾಗಿ ಮತಗಳ ಎಣಿಕೆಯ ಪ್ರಕ್ರಿಯೆಯನ್ನು ರದ್ದುಪಡಿಸಿ ಮರು ಎಣಿಕೆ ಮಾಡುವಂತೆ ನ್ಯಾಯಾಲಕ್ಕೆ ಅರ್ಜಿಸಲ್ಲಿಸಲಾಗಿತ್ತು. ನ್ಯಾಯಾಲಯ ಚುನಾವಣಾ ಫಲಿತಾಂಶವನ್ನು ರದ್ದುಪಡಿಸಿ ಮರು ಎಣಿಕೆಗೆ ಆದೇಶ ಮಾಡಿದೆ ಎಂದು ವಿವರಿಸಿದರು.

ನಂಜೇ ಗೌಡರಿಂದ ನ್ಯಾಯಾಲಯದ ಆದೇಶವನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.ನನ್ನನ್ನು ಹೊಸಕೋಟೆ ತಾಲ್ಲೂಕಿನ ಮಾಜಿ ರೌಡಿ ಎಂದು ಅವಹೇಳನ ಮಾಡಿದದ್ದಾರೆ. ಪೋಲೀಸ್ ಇಲಾಖೆ ಈಗ ಬಲಿಷ್ಠವಾಗಿದೆ.ಯಾರು ರೌಡಿಗಳಿಲ್ಲ.ನಾನು ಶಾಸಕನಾಗಲು ನಂಜೇ ಗೌಡರ ಬೆಂಬಲ ಕಾರಣ ಎಂದಿದ್ದಾರೆ.ನಾನು ನಂಜೇ ಗೌಡರ ಬೆಂಬಲದಿಂದ ಶಾಸಕನಾಗಲಿಲ್ಲ.ಜನರ ಮತ್ತು ನಮ್ಮ ಬೆಂಬಲಿಗರ ಶ್ರಮದಿಂದ ಶಾಸಕನಾಗಿದ್ದೇನೆ.ಮತಗಳ ಎಣಿಕೆಯ ಆದೇಶದಿಂದ ಆತಂಕಗೊಂಡಿರುವ ನಂಜೇಗೌಡರು ನಾನು ಶಾಸಕನಾಗಲು ತಿರುಕನ ಕನಸು ಕಾಣುತ್ತಿರುವುದಾಗಿ ಲೇವಡಿ ಮಾಡಿದ್ದಾರೆ.ಮರು ಎಣಿಕೆಯನಂತರ ಯಾವುದೇ ಫಲಿತಾಂಶ ಬರಲಿ ನಾನು ಸ್ವಾಗತಿಸುತ್ತೇನೆ .ನಂಜೇ ಗೌಡರ ಆಶೀರ್ವಾದ ನನಗೆ ಅಗತ್ಯವಿಲ್ಲ ಎಂದು ತೀವ್ರ ಆಕ್ರೋಶ ಹೊರಹಾಕಿದರು.

ಇಷ್ಟು ದಿನ ನಮ್ಮ ಬೆಂಬಲಿಗರು ತಾಳ್ಮೆಯಿಂದ ಇದ್ದರು. ಆದರೆ ಇನ್ನು ಮುಂದೆನ ಸುಮ್ಮನಿರುವುದಿಲ್ಲ.ಪ್ರತಿನಿತ್ಯ ನಂಜೇ ಗೌಡ ಮತ್ತು ಅವರ ಮಗನಿಗೆ ಉತ್ತರ ನೀಡಲಿದ್ದಾರೆ. ಅವರ ಮಗ ಮೇದಾವಿಯಂತೆ ಮಾತನಾಡಿದ್ದಾನೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕೆ ಇಳಿಸಿ ನಂಜೇ ಗೌಡರ ಕುಟುಂಬ ಮನೆಯಿಂದ ಹೊರಬರದಂತೆ ಕಾವಲು ಕಾಯಲಾಗುವುದು.ಶಾಸಕನಾಗಿ ನಂಜೇ ಗೌಡರ ರೀತಿಯಲ್ಲಿ ನಾನು ಲೂಟಿ ಮಾಡಿಲ್ಲ. ಟೇಕಲ್ ಹೋಬಳಿಯಲ್ಲಿ ಕಲ್ಲು ಗಣಿಗಾರಿಕೆ ಮಾಡುವರರನ್ನು ಬ್ಲಾಕ್ ಮೇಲ್ ಮಾಡಿ ಹಫ್ತಾ ವಸೂಲಿ ಮಾಡುವ ನಂಜೇ ಗೌಡರು ಭ್ರಷ್ಠಾಚಾರ ನಡುಸುತ್ತಿದ್ದಾರೆ. ಹಫ್ತಾ ನೀಡದಿದ್ದರೆ ಅಧಿಕಾರಿಗಳನ್ನುಮನೆಗೆ ಕರೆಸಿ ಕಲ್ಲು ಗಣಿ ಮಾಲಿಕರಿಗೆ ನೋಟೀಸ್ ನೀಡಲಾಗುತ್ತದೆ ಎಂದು ಮಂಜುನಾಥ ಗೌಡ ಆರೋಪಿಸಿದರು.

ರಾಜಕೀವಾಗಿ ಬೆಂಬಲ ನೀಡಿದವರಿಗೆ ನಂಜೇ ಗೌಡರು ವಿಶ್ವಾಸ ದ್ರೋಹ ಬಗೆದಿದ್ದಾರೆ. ಎಂಟನೇ ತರಗತಿ ಓದಿರುವ ನಂಜೇ ಗೌಡರು ರಾಜಕೀಯವಾಗಿ ಬೆಳೆಯಲು ಮಾಜಿ ಶಾಸಕ ಏ.ನಾಗರಾಜು ಕಾರಣರಾಗಿದಗದ್ದಾರೆ.ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲು ಏ.ನಾಗರಾಜುವರ ಬೆಂಬಲೇ ಕಾರಣವಾಗಿದೆ.ಮಾಲೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ಕೂಲಿಗಾಗಿ ಕಾಳು ಯೋಜನೆಯಲ್ಲಿ ಲಕ್ಷಾಂತರ ರೂಪಾಯಿ ದುರುಪಯೋಗವಾಗಿತ್ತು.ಕೋತಿ ತಿಂದು ಮೇಕೆ ಮೂತಿಗೆ ಒರಸಿದಂತೆ ದುರುಪಯೋಗವನ್ನು ಅಂದಿನ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೋಡಿಪಾಳ್ಯ ಕೃಷ್ಣಪ್ಪನವರ ತಲೆಗೆ ಸುತ್ತಲಾಯಿತು. ನಾಗರಾಜುರವರ ಕೃಪೆಯಿಂದ ನಂಜೇ ಗೌಡರು ಜೈಲಿಗೆ ಹೋಗುವುದು ತಪ್ಪಿತು. ನಂಜೇ ಗೌಡರ ಬದಲಾಗಿ ಕೋಡಿಪಾಳ್ಯ ಕೃಷ್ಣಪ್ಪನವರು ಜೈಲಿಗೆ ಹೋದರು ಎಂದು ಹಳೇ ಕಥೆಯನ್ನು ಹೊರಹಾಕಿದರು. ಸರ್ಕಾರ ಗುತ್ತಿಗೆ ನೀಡಿದ ಭೂಮಿಯ ವಿಸ್ತೀರಣಕ್ಕಿಂತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ್ದಾರೆ. ಸರ್ಕಾರಕ್ಕೆ ಎಂಬತ್ತು ಕೋಟಿ ರೂಪಾಯಿ ವಂಚನೆ ಮಾಡಿರುವುದಾಗಿ ಅಂದಿನ ಜಿಲ್ಲಾಧಿಕಾರಿ ಸತ್ಯವತಿ ಸರ್ಕಾರಕ್ಕೆ ವರದಿ ನೀಡಿದ್ದರು. ಆದರೆ ಅಕ್ರಮ ಗಣಿಕಾರಿಯಲ್ಲಿ ಜೈಲಿಗೆ ಹೋಗುವುದನ್ನು ಕೆ.ಹೆಚ್. ಮುನಿಯಪ್ಪನವರು ತಪ್ಪಿಸಿದರು. ಗಂಟುಮೂಟೆ ಕಟ್ಟಿಕೊಂಡು ಬಿ.ಜೆ.ಪಿಗೆ ಹೊರಟಿದ್ದ ನಂಜೇ ಗೌಡರನ್ನು ವಾಪಸ್ ಕಾಂಗ್ರೆಸ್‌ಗೆ ಕರೆತಂದು ಕಾಂಗ್ರೆಸ್ ಟಿಕೆಟ್ ಕೊಡಿಸಿದರು. ಆದರೆ ದೇವರಂತ ಕೆ.ಹೆಚ್. ಮುನಿಯಪ್ಪನವರಿಗೆ ದ್ರೋಹ ಬಗೆದರು ಎಂದು ನಂಜೇ ಗೌಡರ ವಿಶ್ವಾಸದ್ರೋಹವನ್ನು ಮಂಜುನಾಥ ಗೌಡ ಬಿಚ್ಚಿಟ್ಟರು.

ನಂಜೇ ಗೌಡರು ಭ್ರಷ್ಠಾಚಾರದ ಪಿತಾಮಹಾ ಆಗಿದ್ದಾರೆ.ತಾಶಿಲ್ದಾರ್ ಸೇರಿದಂತೆ ಪೋಲೀಸರ ವರ್ಗಾವಣೆಗೆ ಲಕ್ಷಾಂತರ ರೂಪಾಯಿ ಲಂಚ ಪಡೆದಿದ್ದಾರೆ.ಗ್ರಾಮ ಪಂಚಾಯಿತಿ ಪಿ.ಡಿ,ಓಗಳು ತಿಂಗಳ ತಿಂಗಳು ಕಪ್ಪಕಾಣಿಕೆ ನೀಡಬೇಕು. ವಿಲೇಜ್ ಅಕೌಂಟೆಂಟ್‌ಗಳು ಸೇರಿದಂತೆ ರೆವೆನ್ಯೂ ಇನ್ಸ್‌ಪೆಕ್ಟರ್‌ಗಳು ಪ್ರತಿತಿಂಗಳು ಕಪ್ಪಕಾಣಿಕೆ ಒಪ್ಪಿಸಬೇಕು.ಗ್ರಾಮ ಪಂಚಾಯಿತಿಯಿಂದ ಹಿಡಿದು ಸಬ್ ರಿಜಿಸ್ಟ್ರಾರ್ ತನಕ ಕಪ್ಪಕಾಣಿಕೆ ನೀಡಬೇಕು.ಇತಿಹಾಸದಲ್ಲಿ ಮಾಲೂರು ಜನತೆ ಇಂತಹ ಭ್ರಷ್ಠ ಶಾಸಕರನ್ನುಕಂಡಿಲ್ಲ. ಲಂಚ ಕೊಟ್ಟು ಬಂದಿರುವ ಮಾಲೂರು ಇನ್ಸ್ ಪೆಕ್ಟರ್ ವಸಂತ್ ನಮ್ಮ ಕಾರ್ಯಕರ್ತರ ಮೇಲೆ ಕೇಸ್‌ಗಳನ್ನು ಹಾಕುವುದೇ ಅವರ ಕೆಲಸ ಆಗಿದೆ.ನಾವು ಸುಮ್ಮನೆ ಇರುವುದಿಲ್ಲ.ನಮ್ಮ ಕಾರ್ಯಕರ್ತರ ಮೇಲೆ ಕೇಸುಗಳನ್ನು ಹಾಕುತ್ತಿದದರೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಕೋಲಾರ ಎಸ್ಪಿಯವರನ್ನು,ಡಿಜಿಪಿಯವರನ್ನು ಭೇಟಿ ಮಾಡಿ ಪೋಲೀಸರ ದೌರ್ಜನದ ವಿರುಧ್ಧ ದೂರು ನೀಡುತ್ತೇವೆ.ನಮ್ಮ ಕಾರ್ಯಕರ್ತರ ಮೇಲೇ ಸುಳ್ಳು ಕೇಸ್‌ಗಳನ್ನು ಹಾಕುವ ಪೋಲೀಸರ ಜನ್ಮ ಜಾಲಾಡುತ್ತೇವೆ ಎಂದು ಮಂಜುನಾಥ ಗೌಡ ಎಚ್ಚರಿಕೆ ನೀಡಿದರು.

ದೆಹಲಿಗೆ ಹೋಗಿ ಗೃಹ ಸಚಿವ ಅಮಿತ್ ಶಾರವರನ್ನು ಬೇಟಿ ಮಾಡುತ್ತೇನೆ.ಏಳು ವರ್ಷ ಸಹನೆಯಿಂದ ನೋಡಿದ್ದು ಆಯಿತು.ಇನ್ನು ಮುಂದೆ ಸುಮ್ಮನೇ ಇರುವುದಿಲ್ಲ. ನಾನು ಮತ್ತೆ ಬುದವಾರ ಮಾಲೂರಿಗೆ ಬರುತ್ತೇನೆ. ಕಾರ್ಯಕರ್ತರು ಪ್ರತಿ ದಿನ ಸಾಮಾಜಿಕ ಜಾಲತಾಣಗಳ ಮೂಲಕ ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ಎಂದು ಸಲಹೆ ಮಾಡಿದರು.

ಚಿತ್ರ : ಮಾಲೂರಿನಲ್ಲಿ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಮಂಜುನಾಥ ಗೌಡ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande