ರಾಯಚೂರು : ಗ್ರಾಮೀಣ ಪ್ರದೇಶದಲ್ಲಿ ಜಿಪಂ ಸಿಇಓ ಸಂಚಾರ, ಪರಿಶೀಲನೆ
ರಾಯಚೂರು, 21 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕುಮಾರ್ ಕಾಂದೂ ಅವರು ತಾಲೂಕಿನ ಮನ್ಸಲಾಪೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ಮಾಡಿದ್ದಾರೆ. ಪಂಚಾಯತಿಯಲ್ಲಿನ ಸಿಬ್ಬಂದಿ ಹಾಜರಾತಿ ಪುಸ್ತಕ ಮತ್
ರಾಯಚೂರು : ಗ್ರಾಮೀಣ ಪ್ರದೇಶದಲ್ಲಿ ಜಿಪಂ ಸಿಇಓ ಸಂಚಾರ: ಪರಿಶೀಲನೆ


ರಾಯಚೂರು : ಗ್ರಾಮೀಣ ಪ್ರದೇಶದಲ್ಲಿ ಜಿಪಂ ಸಿಇಓ ಸಂಚಾರ: ಪರಿಶೀಲನೆ


ರಾಯಚೂರು, 21 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕುಮಾರ್ ಕಾಂದೂ ಅವರು ತಾಲೂಕಿನ ಮನ್ಸಲಾಪೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ಮಾಡಿದ್ದಾರೆ.

ಪಂಚಾಯತಿಯಲ್ಲಿನ ಸಿಬ್ಬಂದಿ ಹಾಜರಾತಿ ಪುಸ್ತಕ ಮತ್ತು ಪಂಚತಂತ್ರ-2ನಲ್ಲಿ ಹಾಜರಾತಿ ಹಾಕಿದ ಬಗ್ಗೆ ಪರಿಶೀಲಿಸಿದರು. ಸ್ವಚ್ಚ ಭಾರತ ಮೀಷನ್, ನರೇಗಾ ಯೋಜನೆ, 15ನೇ ಹಣಕಾಸು, ವಸತಿ ಯೋಜನೆಗಳ ಪ್ರಗತಿ ಮತ್ತು ಕರ ವಸೂಲಾತಿಯ ಬಗ್ಗೆ ಮಾಹಿತಿ ಪಡೆದರು. ಗ್ರಾಮ ಪಂಚಾಯತಿಯ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಅಂಗನವಾಡಿ ಕೇಂದ್ರಗಳು ಹಾಗೂ ಕೂಸಿನ ಮನೆ ಕೇಂದ್ರ ಚಾಲ್ತಿಯಲ್ಲಿರುವ ಬಗ್ಗೆ ಪರಿಶೀಲಿಸಿದರು.

ನರೇಗಾ ಯೋಜನೆಯಡಿ ಗುರಿಗೆ ಅನುಗುಣವಾಗಿ ಮಾನವ ದಿನಗಳು ಸೃಜನೆ ಮಾಡಬೇಕು. ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ತಕ್ಷಣವೇ ಸ್ಥಳ ಗುರುತಿಸಬೇಕು. ಅಲ್ಲಿವರೆಗೆ ತಾತ್ಕಾಲಿಕವಾಗಿ ಎಸ್‌ಡ್ಲೂಎಮ್ ಶೇಡ್ ನಿರ್ಮಾಣ ಮಾಡಲು ಕೂಡಲೇ ಕ್ರಮ ವಹಿಸಬೇಕೆಂದು ಸಿಇಓ ಅವರು ಇದೆ ವೇಳೆ ಪಿಡಿಒ ಅವರಿಗೆ ಸೂಚನೆ ನೀಡಿದರು.

ಸ್ವಚ್ಚತಾ ಹೀ ಸೇವಾದಡಿ ಪ್ರತಿ ತಿಂಗಳು ಒಂದನೇ ಹಾಗೂ ಮೂರನೇ ಶನಿವಾರದಂದು ಕಡ್ಡಾಯ, ಗ್ರಾಮಗಳಲ್ಲಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸ್ವ-ಸಹಾಯ ಸಂಘದ ಮಹಿಳೆಯರು, ಸಂಘ-ಸಂಸ್ಥೆಯವರು ಹಾಗೂ ಸಾರ್ವಜನಿಕರೊಂದಿಗೆ ಯಶಸ್ವಿಯಾಗಿ ಸ್ವಚ್ಚತಾ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಗ್ರಾಮಗಳನ್ನು ಸ್ವಚ್ಚವಾಗಿಡಲು ಮುತುವರ್ಜಿ ವಹಿಸಬೇಕು ಎ0ದು ಸಿಇಓ ಅವರು ಪಿಡಿಓ ಮತ್ತು ಇನ್ನೀತರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಐತಿಹಾಸಿಕ ವೀರ ಗಲ್ಲುಗಳಿದ್ದರೆ, ಅವನ್ನೆಲ್ಲ ಸಂಗ್ರಹಿಸಿ ಶೆಡ್‌ವೊಂದರಲ್ಲಿ ರಕ್ಷಿಸಬೇಕು. ಆಯಾ ವೀರಗಲ್ಲುಗಳ ಇತಿಹಾಸ, ಪರಂಪರೆ ಸಂಸ್ಕೃತಿ ಕುರಿತು ಸಂಕ್ಷಿಪ್ತವಾಗಿ ಬರೆದಟ್ಟಲ್ಲಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಅವುಗಳನ್ನು ನೋಡಲು ಮತ್ತು ತಿಳಿದುಕೊಳ್ಳಲು ಅನುಕೂಲವಾಗಲಿದೆ. ಇದಕ್ಕೆ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಸಿಇಓ ಅವರು ಸೂಚನೆ ನೀಡಿದರು.

ನಂತರ ಗ್ರಾಮ ಪಂಚಾಯತಿ ಪಕ್ಕದಲ್ಲಿರುವ ಗ್ರಂಥಾಲಯ ಕೇಂದ್ರಕ್ಕೆ ತೆರಳಿದಾಗ, ಅರಿವು ಕೇಂದ್ರದಲ್ಲಿ ಮಕ್ಕಳು ಹಾಜರಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಎಷ್ಟು ಗಣಕಯಂತ್ರಗಳಿವೆ? ಎಷ್ಟ್ಟು ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಕೇಳಿ ಮಾಹಿತಿ ಪಡೆದುಕೊಂಡರು. ಈ ಅರಿವು ಕೇಂದ್ರದಲ್ಲಿ ಮಾಹಿತಿಗಾಗಿ ಭಾರತ ಹಾಗೂ ರಾಜ್ಯದ ನಕ್ಷೆಗಳನ್ನು ಬಿಡಿಸಬೇಕು ಎಂದು ತಿಳಿಸಿದರು. ಅರಿವು ಕೇಂದ್ರಕ್ಕೆ ಕಡ್ಡಾಯವಾಗಿ ಇಂಟರನೆಟ್ ವ್ಯವಸ್ಥೆಯನ್ಮ್ನ ಕೂಡಲೇ ಒದಗಿಸಲು ಕ್ರಮ ವಹಿಸಬೇಕು ಎಂದು ಪಿಡಿಓ ಅವರಿಗೆ ಸೂಚನೆ ನೀಡಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ಸಹಾಯಕ ನಿರ್ದೇಶಕರಾದ ಹನುಮಂತ, ಪಿಡಿಒ ಶಿವಪ್ಪ ಸೇರಿದಂತೆ ಕಾರ್ಯದರ್ಶಿ, ಐಇಸಿ ಸಂಯೋಜಕ ಹಾಗೂ ಗ್ರಾ.ಪಂ ಸಿಬ್ಬಂದಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande