ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ್‌ ಬದಲಾವಣೆ
ವಿಜಯಪುರ, 21 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಬಿಜೆಪಿ ಜಿಲ್ಲಾ ಘಟಕದಲ್ಲಿ ಬಣ ಗುದ್ದಾಟ ನಿಲ್ಲುವಂತೆ ಕಾಣ್ತಿಲ್ಲ. ಇದೀಗ ಅವಧಿ ಮುಗಿಯುವ ಮುನ್ನವೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷಗೆ ಗೇಟ್ ಪಾಸ್ ಕೊಡಲಾಗಿದೆ. ಜಿಲ್ಲಾ ಬಿಜೆಪಿ ಬಣ ರಾಜಕೀಯ ಮತ್ತೆ ಸ್ಫೋಟವಾಗಿದೆ. ಹಾಲಿ ಜಿಲ್ಲಾ ಬಿಜೆಪಿ ಯುವ
ಬಿಜೆಪಿ


ವಿಜಯಪುರ, 21 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಬಿಜೆಪಿ ಜಿಲ್ಲಾ ಘಟಕದಲ್ಲಿ ಬಣ ಗುದ್ದಾಟ ನಿಲ್ಲುವಂತೆ ಕಾಣ್ತಿಲ್ಲ. ಇದೀಗ ಅವಧಿ ಮುಗಿಯುವ ಮುನ್ನವೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷಗೆ ಗೇಟ್ ಪಾಸ್ ಕೊಡಲಾಗಿದೆ. ಜಿಲ್ಲಾ ಬಿಜೆಪಿ ಬಣ ರಾಜಕೀಯ ಮತ್ತೆ ಸ್ಫೋಟವಾಗಿದೆ.

ಹಾಲಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರಗೆ ಗೇಟ್ ಪಾಸ್ ಕೊಡಲಾಗಿದೆ. 2024ಕ್ಕೆ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆಗಿ ಬಸವರಾಜ ಹೂಗಾರ ಆಯ್ಕೆ ಆಗಿದ್ದರು. 2027ಕ್ಕೆ ಬಸವರಾಜ ಅವಧಿ ಮುಕ್ತಾಯವಾಗತ್ತದೆ. ಅವಧಿ ಮುಕ್ತಾಯಕ್ಕಿಂತ ಮುಂಚೆನೆ ಜಿಲ್ಲಾಧ್ಯಕ್ಷ ಸ್ಥಾನದಿಂದ ಬಸವರಾಜಗೆ ಕೋಕ್ ಕೊಡಲಾಗಿದೆ.

ಸದ್ಯ ಬಸವರಾಜ ಹೂಗಾರ ಬದಲು ಯುವ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ರಾಘವೇಂದ್ರ ಕಾಪಸೆ ಎಂಬುವರನ್ನು ಆಯ್ಕೆ ಮಾಡಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆದೇಶ ಹಿನ್ನೆಲೆ ಬದಲಾವಣೆ ಮಾಡಿರುವುದಾಗಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆದೇಶ ಪ್ರತಿಯಲ್ಲಿ ನಮೂದಸಿದ್ದಾರೆ.

ಬಿಜೆಪಿ ರೆಬಲ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆ ಆದ್ರೂ ಬಿಜೆಪಿ ಜಿಲ್ಲಾ ಘಟಕದಲ್ಲಿ ಬಣ ಗುದ್ದಾಟ ನಿಂತಿಲ್ಲ.

ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳಲ್ಲಿ ಕೇವಲ ಬಸವರಾಜ ಹೂಗಾರ ಮಾತ್ರ ಬದಲಾವಣೆ ಮಾಡಲಾಗಿದೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande