ಅಮೆರಿಕದ ಎಚ್೧ಬಿ ವೀಸಾ ಶುಲ್ಕ ಹೆಚ್ಚಳ ; ಪ್ರಧಾನಿ ಹುಟ್ಟುಹಬ್ಬಕ್ಕೆ ಉಡುಗೊರೆ-ಖರ್ಗೆ ವ್ಯಂಗ್ಯ
ನವದೆಹಲಿ, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್೧ಬಿ ವೀಸಾಗಳ ಮೇಲೆ ವಾರ್ಷಿಕ $100,000 (ಸುಮಾರು 90 ಲಕ್ಷ ರೂ.) ಶುಲ್ಕ ವಿಧಿಸುವ ನಿರ್ಧಾರವನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ
Kharge


ನವದೆಹಲಿ, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್೧ಬಿ ವೀಸಾಗಳ ಮೇಲೆ ವಾರ್ಷಿಕ $100,000 (ಸುಮಾರು 90 ಲಕ್ಷ ರೂ.) ಶುಲ್ಕ ವಿಧಿಸುವ ನಿರ್ಧಾರವನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ನಂತರ ಟ್ರಂಪ್ ಆಡಳಿತದಿಂದ ಬಂದಿರುವ ಈ ನಿರ್ಧಾರ ಮೋದಿ ಹುಟ್ಟುಹಬ್ಬದ ಉಡುಗೊರೆ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.

ಎಚ್೧ಬಿ ವೀಸಾ ಹೊಂದಿರುವವರಲ್ಲಿ ಶೇಕಡಾ 70 ಕ್ಕೂ ಹೆಚ್ಚು ಮಂದಿ ಭಾರತೀಯರಾಗಿರುವುದರಿಂದ ಈ ನಿರ್ಧಾರದಿಂದ ಹೆಚ್ಚು ಹೊಡೆತ ಭಾರತಕ್ಕೇ ಬರುವುದಾಗಿ ಅವರು ಎಚ್ಚರಿಸಿದ್ದಾರೆ.

ಈಗಾಗಲೇ ಶೇಕಡಾ 50ರಷ್ಟು ಸುಂಕದಿಂದ ಭಾರತವು ₹2.17 ಲಕ್ಷ ಕೋಟಿ ನಷ್ಟ ಅನುಭವಿಸುತ್ತಿರುವುದಾಗಿ ಖರ್ಗೆ ಹೇಳಿದ್ದಾರೆ. ಇದರ ಜೊತೆಗೆ, ಅಮೆರಿಕದ HIRE ಕಾಯ್ದೆ, ಚಾಬಹಾರ್ ಬಂದರಿನಿಂದ ವಿನಾಯಿತಿಗಳನ್ನು ಹಿಂತೆಗೆದುಕೊಳ್ಳುವುದು ಹಾಗೂ ಯುರೋಪಿಯನ್ ಒಕ್ಕೂಟವು ಭಾರತೀಯ ಸರಕುಗಳ ಮೇಲೆ ಶೇಕಡಾ 100ರಷ್ಟು ಸುಂಕ ವಿಧಿಸಲು ಮಾಡಿದ ಕರೆಗಳು—ಎಲ್ಲವೂ ಭಾರತದ ಹಿತಾಸಕ್ತಿಗೆ ವಿರೋಧಿ ಕ್ರಮಗಳಾಗಿವೆ ಎಂದು ಖರ್ಗೆ ಹೇಳಿದ್ದಾರೆ.

ಸೆಪ್ಟೆಂಬರ್ 19 ರಂದು ಹೊರಡಿಸಿದ ಘೋಷಣೆಯ ಪ್ರಕಾರ, ವೀಸಾ ನೋಂದಣಿ ಶುಲ್ಕ $215 ಕ್ಕೆ ಉಳಿದಿದ್ದರೂ, ವಾರ್ಷಿಕ $100,000 ಹೆಚ್ಚುವರಿ ಶುಲ್ಕ ಕಡ್ಡಾಯವಾಗಲಿದೆ. ಇದರಿಂದ ಅಮೆರಿಕದ ತಂತ್ರಜ್ಞಾನ ಕಂಪನಿಗಳೂ ಹೊಡೆತ ಅನುಭವಿಸಬಹುದಾಗಿದೆ.

2025ರ ಮೊದಲಾರ್ಧದಲ್ಲಿ ಅಮೆಜಾನ್ 12,000 ಕ್ಕೂ ಹೆಚ್ಚು ಎಚ್೧ಬಿ ವೀಸಾಗಳನ್ನು ಪಡೆದಿದ್ದು, ಮೈಕ್ರೋಸಾಫ್ಟ್ ಹಾಗೂ ಮೆಟಾ ತಲಾ 5,000 ಕ್ಕೂ ಹೆಚ್ಚು ವೀಸಾಗಳನ್ನು ಪಡೆದಿರುವುದು ಗಮನಾರ್ಹವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande