ರಾಯಚೂರು, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೊಲೆ ಮಾಡಿದ ಅಪರಾಧಿಗೆ ರಾಯಚೂರಿನ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಲಂ 504, 506 ಮತ್ತು 302 ಆಫ್ ಐಪಿಸಿ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೊಲ ಸ್ವಚ್ಛ ಮಾಡಿ ಸಾಗುವಳಿ ಮಾಡಿದ್ದು ಸ್ವಚ್ಛ ಮಾಡಿದ ಕೂಲಿ ಹಣ ವ್ಯತ್ಯಾಸವಾಗಿ ಜಗಳ ಮಾಡಿಕೊಂಡಿದ್ದು, ಅದೇ ವರ್ಷ ಗಣೇಶ ಮೂರ್ತಿ ತರುವ ವಿಚಾರದಲ್ಲಿಯೂ ಇಬ್ಬರ ನಡುವೆ ಜಗಳವಾಗಿ ಆ ಸಮಯದಲ್ಲಿ ಆರೋಪಿತನು ದ್ವೇಷ ಸಾಧಿಸುತ್ತ ದಿನಾಂಕ 12-03-2017ರಂದು ರಾತ್ರಿ 9 ಗಂಟೆ ಸುಮಾರಿಗೆ ಕಬ್ಬಿಣದ ಚಾಕುವಿನಿಂದ ಈ ಪ್ರಕರಣದ ಸಾಕ್ಷಿ ನಂ.6ರ ಮಗನಾದ ಕೆ ಬಸವ ಎಂಬಾತನ ಹೊಟ್ಟೆಗೆ ಚುಚ್ಚಿದಾಗ ರಕ್ತ ಸ್ರಾವವಾಗಿ, ತೀವ್ರ ಸ್ವರೂಪದ ಗಾಯಗೊಂಡು ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು 13-03-2017ರಂದು ಬೆಳಗ್ಗೆ ಮೃತಪಟ್ಟಿದ್ದಾನೆ ಎಂದು ರಮೇಶ ಎಂಬುವರು ಸಲ್ಲಿಸಿದ ಪಿರ್ಯಾದಿ ಆಧಾರದ ಮೇಲೆ ಸಿರವಾರ ಪೊಲೀಸ್ ಠಾಣೆಯ ಆರಕ್ಷಕರು ಪ್ರಕರಣವನ್ನು ದಾಖಲು ಮಾಡಿಕೊಂಡು ಆಗಿನ ಚಂದ್ರಶೇಖರ ಜಿ., ಸಿಪಿಐ ಮಾನವಿ ಇವರು ಪ್ರಕರಣದ ತನಿಖೆಯನ್ನು ಪೂರೈಸಿ ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯದಲ್ಲಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿದ ಮಾನ್ಯ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಆರೋಪಿತನಾದ ಬೂದೆಪ್ಪ ಈತನು ಕೆ ಬಸವನನ್ನು ಕೊಲೆ ಮಾಡಿದ ಬಗ್ಗೆ ಸಾಕಷ್ಟು ಪುರಾವೆಗಳು ಇವೆ ಎಂದು ಅಭಿಯೋಜನೆಯು ಪ್ರಕರಣವನ್ನು ರುಜುವಾತುಪಡಿಸಿದ್ದಾರೆಂದು ನಿರ್ಣಯಕ್ಕೆ ಬಂದು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 50,000 ರೂ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಶ್ರೀ ಮತಿ ಎಂ ಸರ್ವಮಂಗಳ ಸಾರ್ವಜನಿಕರು ಅಭಿಯೋಜಕರು ವಾದ ಮಂಡಿಸಿದ್ದರು ಎಂದು ರಾಯಚೂರು ಸಾರ್ವಜನಿಕ ಅಭಿಯೋಜಕರ ಕಚೇರಿ, 2ನೇ ಅಪರ ಸತ್ರ ನ್ಯಾಯಾಲಯ ರಾಯಚೂರು ಇವರ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್