ನವದೆಹಲಿ, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೋ ಕಾನ್ಫರೆನ್ಸ ಮೂಲಕ ಬಿಹಾರ ರಾಜ್ಯ ಜೀವಿಕಾ ನಿಧಿ ಕ್ರೆಡಿಟ್ ಕೋಆಪರೇಟಿವ್ ಫೆಡರೇಶನ್ ಲಿಮಿಟೆಡ್ ಅನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಸಂಸ್ಥೆಯ ಬ್ಯಾಂಕ್ ಖಾತೆಗೆ ₹105 ಕೋಟಿ ರೂ.ಗಳನ್ನು ವರ್ಗಾಯಿಸಿದರು.
ಪಾಟ್ನಾದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿಗಳು ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಉಪಸ್ಥಿತರಿದ್ದರು. ಬಿಹಾರದಾದ್ಯಂತ ಸುಮಾರು 20 ಲಕ್ಷ ಮಹಿಳೆಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಜೀವಿಕಾ ನಿಧಿ ಸ್ಥಾಪನೆಯ ಉದ್ದೇಶ, ಜೀವಿಕಾದೊಂದಿಗೆ ಸಂಬಂಧ ಹೊಂದಿರುವ ಸಮುದಾಯದ ಸದಸ್ಯರಿಗೆ ಕೈಗೆಟುಕುವ ಬಡ್ಡಿದರದಲ್ಲಿ ಸಾಲ ನೀಡುವುದು. ನೋಂದಾಯಿತ ಎಲ್ಲಾ ಕ್ಲಸ್ಟರ್ ಮಟ್ಟದ ಒಕ್ಕೂಟಗಳು ಈ ಸಂಸ್ಥೆಯ ಸದಸ್ಯರಾಗುವುದು. ಬಿಹಾರ ಸರ್ಕಾರದ ಜೊತೆಗೆ, ಕೇಂದ್ರ ಸರ್ಕಾರವೂ ಸಹ ಸಂಸ್ಥೆಯ ಕಾರ್ಯಾಚರಣೆಗೆ ಹಣಕಾಸು ನೆರವು ನೀಡಲಿದೆ.
ಈ ಮೂಲಕ ಬಿಹಾರದಲ್ಲಿ ಸ್ವಯಂ ಸಹಾಯ ಗುಂಪುಗಳ ಮಹಿಳೆಯರಿಗೆ ಬಲವರ್ಧನೆ ಆಗಿ, ಗ್ರಾಮೀಣ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚು ಚುರುಕುಗೊಳ್ಳಲಿವೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa