ವಿಜಯಪುರ, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ೨೦೨೫-೨೬ನೇ ಸಾಲಿಗೆ ಬಾಗಲಕೋಟೆ ಜಿಲ್ಲೆಯ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಹಾಗೂ ಸಿಖ್ ಸಮುದಾಯದ ಕಾನೂನು ಪದವೀಧರರಿಂದ ಕಾನೂನು ತರಬೇತಿ ಭತ್ಯೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಟ್ಟು ೩ ಅಭ್ಯರ್ಥಿಗಳನ್ನು ೪ ವರ್ಷಗಳ ಅವಧಿಗೆ ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್/ಸರ್ಕಾರಿ ವಕೀಲರ ಅಧೀನದಲ್ಲಿ ತರಬೇತಿಗೆ ಆಯ್ಕೆ ಮಾಡಲಾಗುವುದು.
ಅಭ್ಯರ್ಥಿಗಳು ಬಾಗಲಕೋಟೆ ಜಿಲ್ಲೆಯವರಾಗಿದ್ದು, ೩೦ ವರ್ಷ ಮೀರಿರಬಾರದು. ಬಾರ್ ಕೌನ್ಸಿಲ್‌ನಲ್ಲಿ ನೊಂದಾಯಿತರಾಗಿರಬೇಕು ಹಾಗೂ ಕಳೆದ ೨ ವರ್ಷಗಳಲ್ಲಿ ಕಾನೂನು ಪದವೀಧರರಾಗಿರಬೇಕು. ವಾರ್ಷಿಕ ಆದಾಯ ರೂ.೩.೫೦ ಲಕ್ಷ ಮೀರಿರಬಾರದು.
ಅಗತ್ಯ ದಾಖಲೆಗಳಾದ ವಯಸ್ಸು, ಅಂಕಪಟ್ಟಿ, ಜಾತಿ-ಆದಾಯ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು. ಆಯ್ಕೆ ಸಂದರ್ಶನದ ಆಧಾರವಾಗಿರುತ್ತದೆ. ಆಯ್ಕೆಯಾದವರಿಗೆ ತಿಂಗಳಿಗೆ ರೂ.೫೦೦೦ ಭತ್ಯೆ ನೀಡಲಾಗುವುದು.
ಅರ್ಜಿಗಳನ್ನು ಸೆಪ್ಟೆಂಬರ್ ೧೫ ರೊಳಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ: ೦೮೩೫೪-೨೦೦೦೪೪ ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande