ತುರ್ತು ಪರಿಸ್ಥಿತಿಯ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುತ್ತಿರುವ ಹಿಂದೂಸ್ತಾನ್ ಸಮಾಚಾರ್ : ರಾಮಲಾಲ್
ಸೂರತ್, 19 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ದೇಶದಲ್ಲಿ ಜಾರಿಗೊಂಡಿದ್ದ ತುರ್ತು ಪರಿಸ್ಥಿತಿಗೆ ಐವತ್ತು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ, ದೇಶದ ಮೊದಲ ಬಹುಭಾಷಾ ಸುದ್ದಿ ಸಂಸ್ಥೆ ಹಿಂದೂಸ್ತಾನ್ ಸಮಾಚಾರ್ ಆಶ್ರಯದಲ್ಲಿ ಶುಕ್ರವಾರ ಸೂರತ್‌ನ ವೀರ್ ನರ್ಮದ್ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದ ಸಮಾವೇಶ
awareness


ಸೂರತ್, 19 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ದೇಶದಲ್ಲಿ ಜಾರಿಗೊಂಡಿದ್ದ ತುರ್ತು ಪರಿಸ್ಥಿತಿಗೆ ಐವತ್ತು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ, ದೇಶದ ಮೊದಲ ಬಹುಭಾಷಾ ಸುದ್ದಿ ಸಂಸ್ಥೆ ಹಿಂದೂಸ್ತಾನ್ ಸಮಾಚಾರ್ ಆಶ್ರಯದಲ್ಲಿ ಶುಕ್ರವಾರ ಸೂರತ್‌ನ ವೀರ್ ನರ್ಮದ್ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದ ಸಮಾವೇಶ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ರಾಮಲಾಲ್, “ತುರ್ತು ಪರಿಸ್ಥಿತಿ ದೇಶದ ಪ್ರಜಾಪ್ರಭುತ್ವದ ಕತ್ತಲೆ ಅಧ್ಯಾಯವಾಗಿತ್ತು. ಆ ಸಮಯದಲ್ಲಿ ಅನೇಕ ದೇಶಭಕ್ತರನ್ನು ಜೈಲಿಗೆ ಹಾಕಲಾಯಿತು. ಜಾಮೀನು ಎಂಬ ಪದವೇ ಇರಲಿಲ್ಲ, ಕಾನೂನು ಎಂಬ ಪ್ರಕ್ರಿಯೆ ಅಸ್ತಿತ್ವದಲ್ಲಿರಲಿಲ್ಲ. ಒಬ್ಬರನ್ನು ಎಷ್ಟು ಕಾಲ ಜೈಲಿನಲ್ಲಿ ಇಡಲಾಗುತ್ತದೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇರಲಿಲ್ಲ. ಹಿಂದೂಸ್ತಾನ್ ಸಮಾಚಾರ್ ಕೂಡ ಆ ಸಮಯದಲ್ಲಿ ಅನೇಕ ನಿರ್ಬಂಧಗಳನ್ನು ಎದುರಿಸಿತು. ಇಂದಿನ ಯುವ ಪೀಳಿಗೆಯನ್ನು ಜಾಗೃತಗೊಳಿಸಲು ಹಿಂದೂಸ್ತಾನ್ ಸಮಾಚಾರ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೂರತ್ ಮೇಯರ್ ದಕ್ಷೇಶ್ ಮಾವಾನಿ ಅವರು “ಸೂರತ್ ನಗರ ತುರ್ತು ಪರಿಸ್ಥಿತಿಯ ಸಾಕ್ಷಿಯಾಗಿದೆ. ಆ ದಿನಗಳು ಅತ್ಯಂತ ಕಷ್ಟಕರವಾಗಿದ್ದವು. ಹಿಂದೂಸ್ತಾನ್ ಸಮಾಚಾರ್ ಆಯೋಜಿಸಿರುವ ಈ ಕಾರ್ಯಕ್ರಮ ಸ್ಮರಣೀಯ ಹಾಗೂ ಶ್ಲಾಘನೀಯ” ಎಂದರು.

ಇದೇ ವೇಳೆ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಂಧಿತರಾಗಿದ್ದ ಅನುಭವವನ್ನು ಹಂಚಿಕೊಂಡ ವಿಷ್ಣು ಪಾಂಡ್ಯ, “ನಾನೂ ತುರ್ತು ಪರಿಸ್ಥಿತಿಯ ಬಲಿಪಶುವಾಗಿದ್ದೆ. ಜೈಲಿನಲ್ಲಿದ್ದ ಅನುಭವ ನನಗೆ ಇಂದು ಕೂಡ ನೆನಪಾಗುತ್ತದೆ. ಆ ಸಮಯದಲ್ಲಿ ಜನರು ಎದುರಿಸಿದ ಸಂಕಷ್ಟಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವಲ್ಲಿ ಈ ಕಾರ್ಯಕ್ರಮ ಮಹತ್ವದ್ದಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ “50 ವರ್ಷಗಳ ತುರ್ತು ಪರಿಸ್ಥಿತಿ” ಕುರಿತ ಗುಜರಾತಿ ವಿಶೇಷ ಸಂಚಿಕೆ ಹಾಗೂ ಹಿಂದಿ ಮಾಸಿಕ ‘ನವೋತನ್’ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ 2,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಜೇತರಾದ ವಿದ್ಯಾರ್ಥಿಗಳು ಹಾಗೂ ಅವರನ್ನು ಪ್ರೋತ್ಸಾಹಿಸಿದ ಶಿಕ್ಷಕರು ಮತ್ತು ಶಾಲೆಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂಸ್ತಾನ್ ಸಮಾಚಾರ್ ಅಧ್ಯಕ್ಷ ಅರವಿಂದ ಭಾಲಚಂದ್ರ ಮರ್ಡಿಕರ ವಹಿಸಿದ್ದರು. ತುರ್ತು ಪರಿಸ್ಥಿತಿಯಲ್ಲಿ ಭಾಗಿಯಾಗಿದ್ದ ಹಾಗೂ ಪದ್ಮಶ್ರೀ ಪುರಸ್ಕೃತ ವಿಷ್ಣುಭಾಯಿ ಪಾಂಡ್ಯ, ಸೂರತ್ ಮೇಯರ್ ದಕ್ಷೇಶ್ ಮಾವಾನಿ, ಮತ್ತು ಸಮಾಜ ಸೇವಕ ಅಜಯ್ ಕೆ.ಆರ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande