ಸಾಮಾಜಿಕ ಅರಣ್ಯ ಉಪ ವಿಭಾಗದಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗೆ ಅಗ್ರಹಿಸಿ ಪ್ರತಿಭಟನೆ
ಸಾಮಾಜಿಕ ಅರಣ್ಯ ಉಪ ವಿಭಾಗದಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗೆ ಅಗ್ರಹಿಸಿ ಪ್ರತಿಭಟನೆ
ಚಿತ್ರ : ಕೋಲಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ) ಸದಸ್ಯರು ಪ್ರತಿಭಟನಾ ಧರಣಿ ನಡೆಸಿದರು.


ಕೋಲಾರ, ೧೮ ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಾಮಾಜಿಕ ಅರಣ್ಯ ಉಪ ವಿಭಾಗದಲ್ಲಿ ನಡೆದಿರುವ ಭ್ರಷ್ಟಾಚಾರ ವಿರುದ್ಧ ಹಾಗೂ ತನಿಖೆಗೆ ಅಗ್ರಹಿಸಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಾನತ್ತಿಗೆ ಒತ್ತಾಯಿಸಿ ಗುರುವಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ) ಸದಸ್ಯರು ಸಾಂಕೇತಿಕ ಪ್ರತಿಭಟನಾ ಧರಣಿ ನಡೆಸಿದರು.

ಈ ಸಂಧರ್ಭದಲ್ಲಿ ಮಾಧ್ಯಮದವರೊಂದಿಗೆ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮೇಡಿಹಾಳ ಚಂದ್ರಶೇಖರ್. ಎಂ. ಮಾತನಾಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹಾಗೂ ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಹಗಲು ದರೋಡೆಯಲ್ಲಿ ತೊಡಗಿದ್ದಾರೆಂದು ಆರೋಪಿಸಿದರು.

ಸಾರ್ವಜನಿಕರು ಕಚೇರಿಗಳಿಗೆ ಆಗಮಿಸಿದಾಗ ಅಧಿಕಾರಿಗಳು ಸೌಜನ್ಯದಿಂದ ಸಾರ್ವಜನಿಕರನ್ನು ಕುಳ್ಳಿರಿಸಿ ಮಾತಾಡ ಬೇಕೆಂದು ಸರ್ಕಾರದ ಆದೇಶ ಇದ್ದರೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪಿ.ಧನಲಕ್ಷ್ಮಿ ರವರು ಸಾರ್ವಜನಿಕರಿಗೆ ಗೌರವ ನೀಡದೆ ಸರ್ವಾಧಿಕಾರಿಯಂತೆ ವರ್ತಿಸುವುದನ್ನು ದ.ಸಂ.ಸಮಿತಿ (ಭೀಮವಾದ) ಜಿಲ್ಲಾ ಸಂಘಟನೆ ಖಂಡಿಸುತ್ತದೆ ಎಂದು ತಿಳಿಸಿದರು.

ಸಾಮಾಜಿಕ ಅರಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪಿ.ಧನಲಕ್ಷ್ಮಿರವರ ಅವಧಿಯಲ್ಲಿ ಆಗಿರುವ ಎಲ್ಲಾ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದ್ದು,ತನಿಖೆ ಮಾಡಬೇಕು ಹಾಗೂ ಅವರನ್ನು ಅಮಾನತ್ತು ಮಾಡಬೇಕೆಂದರು.

೨೦೧೯ ರಿಂದ ೨೦೨೩ ರ ಅವಧಿಯಲ್ಲಿ ಶ್ರೀನಿವಾಸಪುರ ತಾಲ್ಲೂಕು ಮಾಸ್ತೇನಹಳ್ಳಿ ಗ್ರಾ.ಪಂಚಾಯತಿ ವ್ಯಾಪ್ತಿಯ ರಸ್ತೆ ಬದಿ ನಾಟಿ ಮಾಡಿರುವ ಸಸ್ಯಗಳ ಕಾಮಗಾರಿ ವಿವರಗಳನ್ನು ನೀಡಬೇಕು.

ಕಾಮಗಾರಿಗಳ ವಿತರಣೆಯಲ್ಲಿ ಜಾತಿ ವಿರೋಧಿ ತಾರತಮ್ಯ ನಡೆದಿದ್ದು ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಸರಿಪಡಿಸಬೇಕು.

ಪಿ.ಬಿ ಸೀಡ್ ಲಿಂಕ್ಸ್ ಡೊರಿಂಗ್ ಬಿಡ್ ದಾರ ಎಂ.ವಿ ನಾರಾಯಣಸ್ವಾಮಿಯನ್ನು ವಂಚಿಸಿ ಕಾನನೂ ಬಾಹಿರವಾಗಿ ಬೇರೆಯವರಿಗೆ ಟೆಂಡರ್ ನೀಡಿರುವುದನ್ನು ಕೋಡಲೇ ರದ್ದುಪಡಿಸಬೇಕು. ಕಾಮಗಾರಿಗಳಿಗೆ ನೆರೇಗಾ ಮತ್ತು ಅರಣ್ಯ ಇಲಾಖೆ ಎರಡೂ ಕಡೆ ಹಣ ಮಂಜೂರು ಮಾಡಿರುವ ಬಗ್ಗೆ ತನಿಖೆ ಆಗಬೇಕು.

ಉರುಗಲಿ ಗೋಮಾಳದ ಅರಣ್ಯ ಪ್ರದೇಶದಲ್ಲಿ ಮರಗಳ ಮಾರಣ ಹೋಮ ಆಗುತ್ರಿದ್ದು ಕಂಡೂ ಕಾಣದಂತಿರುವ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ವಿದ್ಯುತ್ ತಂತಿಗಳ ಕೆಳಗೆ ಗಿಡನೆಟ್ಟು ಬಿಲ್ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳ ಬೇಕು ಹಾಗೂ ನರೇಗಾ ಕಾಮಗಾರಿಗಳಲ್ಲಿ ಜೆ.ಸಿ.ಬಿ ಬಳಸುವುದನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಮೇಲಿನ ಎಲ್ಲಾ ಬೇಡಿಕೆ ಮತ್ತು ಒತ್ತಾಯಗಳನ್ನು ಪರಿಶೀಲನೆ ಮಾಡಿ ಈಡೇರಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆನಂದ್ ಮೂಲಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಗಳಿಗೆ,ಅರಣ್ಯ ಸಚಿವರಿಗೆ,ಮುಖ್ಯ ಕಾರ್ಯದರ್ಶಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬೇಡಿಕೆಗಳು ಈಡೇರದೆ ಹೋದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಸಮಿತಿಯ ಜಿಲ್ಲಾ ಸಂಚಾಲಕ ವೇಮಗಲ್ ವಿ.ಎಂ.ರಮೇಶ್, ಸಮಿತಿಯ ಮುಖಂಡರುಗಳಾದ ಮೇಡಿಹಾಳ ಕೆ.ಬೈರಪ್ಪ , ಕೋಲಾರ ಕಾಮಾಕ್ಷಮ್ಮ, ಮಾಸ್ತೇನಹಳ್ಳಿ ಕೃಷ್ಣಪ್ಪ, ತೊರಡಿ ಶಿವಣ್ಣ, ರಾಮಾಪುರ ವೆಂಕಟೇಶ್, ಕೊಳಗಂಜನಹಳ್ಳಿ ಅಂಬರೀಶ್, ಸೂಲಿಕುಂಟೆ ಸಂಜಯ್ ಕುಮಾರ್, ಚಿಕ್ಕಬಂಡಪಲ್ಲಿ ರಾಮರೆಡ್ಡಿ ಮುಂತಾದವರು ವಹಿಸಿದ್ದು ಪ್ರತಿಭಟನೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.

ಚಿತ್ರ : ಕೋಲಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ) ಸದಸ್ಯರು ಪ್ರತಿಭಟನಾ ಧರಣಿ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande