ಹಾಸನ, 18 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗರ್ಭಿಣಿ, ಬಾಣಂತಿ, ಹದಿಹರೆಯದ ಹೆಣ್ಣು ಮಕ್ಕಳು ಪ್ರತಿ ನಿತ್ಯ ಪೌಷ್ಠಿಕ ಆಹಾರಗಳನ್ನು ಸೇವಿಸಬೇಕು. ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಜನಸಾಮನ್ಯರೆಲ್ಲರೂ ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾದೀಶರು ಮತ್ತು ಹಾಸನ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದ್ರಾಕ್ಷಾಯಿಣಿ ಬಿ.ಕೆ ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆೆ ವತಿಯಿಂದ ಬೂವನಹಳ್ಳಿ ವ್ಯಾಪ್ತಿಯ ಹೆಚ್ ಮೈಲಹಳ್ಳಿಲ್ಲಿಂದು ಏರ್ಪಡಿಸಲಾಗಿದ್ದ ಪೋಷಣ್ ಮಾಸಾಚಾರಣೆ ಹಾಗೂ ಪೌಷ್ಠಿಕ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಪೌಷ್ಠಿಕತೆಯ ಬಗ್ಗೆ ಗರ್ಭಿಣಿ, ಬಾಣಂತಿ, ಹದಿಹರೆಯದ ಹೆಣ್ಣು ಮಕ್ಕಳಿಗೆ ಕಾನೂನು ಅರಿವುಗಳ ಬಗ್ಗೆ ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜ್ಯೋತಿ ಲಕ್ಷಿö್ಮ ಕೆ.ಸಿ ಅವರು ಮಾತನಾಡಿ ಜನಸಾಮಾನ್ಯರು ಉಪಯೋಗಿಸುವ ಆಹಾರದ ಬಗ್ಗೆ, ಸಾವಯವ ಕೃಷಿ ಬಳಸಿ ಬೆಳೆಯುವ ಆಹಾರ ಪದಾರ್ಥ ಹಾಗೂ ಹಣ್ಣು ತರಕಾರಿಗಳನ್ನು ಬಳಸಲು, ಗರ್ಭಿಣಿ ಮಹಿಳೆಯಲ್ಲಿ ಕಾಣಿಸಿಕೊಳ್ಳುವ ರಕ್ತಹೀನತೆ ಹಾಗೂ ಅವರ ಆಹಾರ ಪದ್ದತಿ ಬಗ್ಗೆ ತಿಳಿಸಿದರು.
ಇಲಾಖೆಯಿಂದ ಸಿಗುವ ಪೂರಕ ಪೌಷ್ಠಿಕ ಆಹಾರ, ಮೊಟ್ಟೆ ವಿತರಣೆ ಬಗ್ಗೆ ತಿಳಿಸಿದರು ಹಾಗೂ ಹಿರಿಯ ನಾಗರೀಕರು, ವಿಕಲ ಚೇತನ ಮಕ್ಕಳಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಬಾಲ್ಯ ವಿವಾಹ ಮತ್ತು ಪೋಕ್ಸೋ ಕಾಯ್ದೆ, ಬಾಲ ಕಾರ್ಮಿಕರು, ಬಾಲ ನ್ಯಾಯ ಮಂಡಳಿ, ಬಾಲಾಪರಾಧಿ, ಮತ್ತು ಬುದ್ಧಿಮಾಂಧ್ಯ ಮಕ್ಕಳ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆಯಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಮ್ಮ ಬಿ.ಸಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa